Chapada: Idu Aksharada Payana: ಚಪಡ: ಇದು ಅಕ್ಷರದ ಪಯಣ

By: Sreedhara H G: ಶ್ರೀಧರ ಎಚ್ ಜಿContributor(s): SREEDHARA (H G): ಶ್ರೀಧರ (ಎಚ್ ಜಿ)Material type: TextTextLanguage: Kannada Publisher: Bengaluru Annapurna Publishing House 2021Description: xv,271 p. PB 21x14 cmISBN: 9788195404308Subject(s): Kannada Fiction: ಕನ್ನಡ ಕಾದಂಬರಿ | Kannada Sahitya: ಕನ್ನಡ ಸಾಹಿತ್ಯ | Historic Fiction: ಚಾರಿತ್ರಿಕ ಕಾದಂಬರಿDDC classification: K894.3 Summary: ಚಪಡ' ಈ ಹೆಸರನ್ನು ಕೇಳಿದ್ದೀರಾ? ನಾನಂತೂ ಈ ಕಾದಂಬರಿಯನ್ನು ಓದುವ ಮೊದಲು ಕೇಳಿಯೇ ಇರಲಿಲ್ಲ. ಕರ್ನಾಟಕ ಶಾಸನಗಳ ಮೊದಲ ಲಿಪಿಕಾರನೇ ಚಪಡ! ಬ್ರಹ್ಮಗಿರಿ ಶಾಸನದಲ್ಲಿರುವ 'ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಲಿಖಿತ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ. ಇದೊಂದು ಚಾರಿತ್ರಿಕ ಕಾದಂಬರಿಯಾಗಿದ್ದು, ಆರಿಸಿಕೊಂಡ ಕಥಾವಸ್ತು ಅಪೂರ್ವವಾದದ್ದು. ಶಿಲ್ಪಿ ಚಪಡನ ಕುರಿತಾಗಿ ದೊರೆಯುವ ಮಾಹಿತಿಯನ್ನಾಧರಿಸಿ, ಉತ್ತರ ಭಾರತದ 'ಪಾಟಲಿಪುತ್ರ'ದಿಂದ ದಕ್ಷಿಣಭಾರತದ 'ಬ್ರಹ್ಮಗಿರಿ' ವರೆಗಿನ ಸಾಂಸ್ಕೃತಿಕ ಬೃಹದ್ಭಾರತವನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಚಕ್ರವರ್ತಿ ಅಶೋಕನ ಕಾಲದಲ್ಲಿ ಅಂದರೆ ಸರಿಸುಮಾರು 2,270 ವರ್ಷಗಳ ಹಿಂದೆ ಶಿಲ್ಪಿಯೊಬ್ಬನ ಜೀವನ ಹೇಗಿದ್ದಿರಬಹುದು ಎಂಬುವುದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಶಿಲ್ಪಿ ಚಪಡನಿಗೆ ಶುಶ್ರೂಷೆಯನ್ನು ಮಾಡಿ ಆತನ ಆರೋಗ್ಯವನ್ನು ಸರಿಪಡಿಸಿದ್ದ ಪಂಡಿತ ಅಶ್ವಿನಿ ಆಚಾರ್ಯರ ಜೀವನಕಥೆಯೂ ಇಲ್ಲಿ ಬರುತ್ತದೆ. ಪಂಡಿತ ಅಶ್ವಿನಿ ಆಚಾರ್ಯರ ಬದುಕಿನ ಕಥೆ ಭಾವನಾತ್ಮಕವಾಗಿ ಮೂಡಿಬಂದಿದೆ. ಪಂಡಿತರಿಗೂ ಚಪಡನಿಗೂ ಅವಿನಾಭಾವ ಸಂಬಂಧವಿರುತ್ತದೆ. ಇಲ್ಲಿ ಕಾದಂಬರಿ ಒಂದು ತಿರುವನ್ನು ಪಡೆದುಕೊಳ್ಳುತ್ತದೆ. ಸಾರ್ಥವಾಹರ ಜೀವನಕ್ರಮ, ವಾಣಿಜ್ಯ ವ್ಯವಹಾರದ ಚಿತ್ರಣವೂ ಇಲ್ಲಿದೆ. ಉಷ್ಣೀಷ, ತತ್ರಾಣಿ, ಪಾನಪಾತ್ರೆ, ಗಾವುದ, ಅರವಟ್ಟಿಗೆ, ಉತ್ತರೀಯ ಮುಂತಾದ ಪ್ರಸ್ತುತ ತೀರಾ ಅಪರೂಪವಾಗಿ ಬಳಕೆಯಲ್ಲಿರುವ ಅಥವಾ ಬಳಕೆಯಲ್ಲಿಯೇ ಇಲ್ಲದ ಶಬ್ಧಗಳ ಬಳಕೆ ಕಾದಂಬರಿಯ ಘನತೆಯನ್ನು ಹೆಚ್ಚಿಸಿದೆ. ಹೀಗೆ ಶಿಲ್ಪಿಯೊಬ್ಬನ ಜೀವನದ ಏರುತಗ್ಗುಗಳು, ಶಿಲ್ಪವನ್ನು ಕಂಡರಿಸುವಾಗ ಒದಗಿಬರುವ ಬವಣೆಗಳು ಸೇರಿದಂತೆ ಇತ್ಯಾದಿ ಪೂರಕ ವಿವರಗಳನ್ನು ಲೇಖಕರು ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಗಾಂಧಾರ ಮತ್ತು ಇಸಿಲದ ಬೆಸುಗೆಯನ್ನು ವೈವಿಧ್ಯಮಯವಾಗಿ ಸದ್ರಿ ಕಾದಂಬರಿ ಕಟ್ಟಿಕೊಟ್ಟಿದೆ. ಕಥಾಹರಹನ್ನು ಸುಲಭವಾಗಿ ಗ್ರಹಿಸುವುದಕ್ಕಾಗಿ ಕಾದಂಬರಿಯನ್ನು 16 ಅಧ್ಯಾಯಗಳನ್ನಾಗಿ ವಿಂಗಡಿಸಲಾಗಿದೆ. ನೇರ ಹಾಗೂ ಸರಳ ನಿರೂಪಣೆಯಿಂದ ಕಾದಂಬರಿಯ ಓದು ಸುಲಲಿತವಾಗುತ್ತದೆ. ಕಾದಂಬರಿಯ ಕೊನೆಗೆ ಬ್ರಹ್ಮಗಿರಿಯ ಶಾಸನ ಹಾಗೂ ಅದರ ಕನ್ನಡ ಅನುವಾದನ್ನೂ ನೀಡಿದ್ದಾರೆ. ಜೊತೆಗೆ ಪರಾಮರ್ಶನ ಗ್ರಂಥಗಳ ವಿವರಗಳು, ಓದುಗರ ಅಭಿಪ್ರಾಯಗಳೂ ಅಡಕವಾಗಿವೆ.
Tags from this library: No tags from this library for this title. Log in to add tags.
    Average rating: 0.0 (0 votes)

ಚಪಡ' ಈ ಹೆಸರನ್ನು ಕೇಳಿದ್ದೀರಾ? ನಾನಂತೂ ಈ ಕಾದಂಬರಿಯನ್ನು ಓದುವ ಮೊದಲು ಕೇಳಿಯೇ ಇರಲಿಲ್ಲ. ಕರ್ನಾಟಕ ಶಾಸನಗಳ ಮೊದಲ ಲಿಪಿಕಾರನೇ ಚಪಡ! ಬ್ರಹ್ಮಗಿರಿ ಶಾಸನದಲ್ಲಿರುವ 'ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಲಿಖಿತ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ.
ಇದೊಂದು ಚಾರಿತ್ರಿಕ ಕಾದಂಬರಿಯಾಗಿದ್ದು, ಆರಿಸಿಕೊಂಡ ಕಥಾವಸ್ತು ಅಪೂರ್ವವಾದದ್ದು. ಶಿಲ್ಪಿ ಚಪಡನ ಕುರಿತಾಗಿ ದೊರೆಯುವ ಮಾಹಿತಿಯನ್ನಾಧರಿಸಿ, ಉತ್ತರ ಭಾರತದ 'ಪಾಟಲಿಪುತ್ರ'ದಿಂದ ದಕ್ಷಿಣಭಾರತದ 'ಬ್ರಹ್ಮಗಿರಿ' ವರೆಗಿನ ಸಾಂಸ್ಕೃತಿಕ ಬೃಹದ್ಭಾರತವನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಚಕ್ರವರ್ತಿ ಅಶೋಕನ ಕಾಲದಲ್ಲಿ ಅಂದರೆ ಸರಿಸುಮಾರು 2,270 ವರ್ಷಗಳ ಹಿಂದೆ ಶಿಲ್ಪಿಯೊಬ್ಬನ ಜೀವನ ಹೇಗಿದ್ದಿರಬಹುದು ಎಂಬುವುದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.
ಶಿಲ್ಪಿ ಚಪಡನಿಗೆ ಶುಶ್ರೂಷೆಯನ್ನು ಮಾಡಿ ಆತನ ಆರೋಗ್ಯವನ್ನು ಸರಿಪಡಿಸಿದ್ದ ಪಂಡಿತ ಅಶ್ವಿನಿ ಆಚಾರ್ಯರ ಜೀವನಕಥೆಯೂ ಇಲ್ಲಿ ಬರುತ್ತದೆ. ಪಂಡಿತ ಅಶ್ವಿನಿ ಆಚಾರ್ಯರ ಬದುಕಿನ ಕಥೆ ಭಾವನಾತ್ಮಕವಾಗಿ ಮೂಡಿಬಂದಿದೆ. ಪಂಡಿತರಿಗೂ ಚಪಡನಿಗೂ ಅವಿನಾಭಾವ ಸಂಬಂಧವಿರುತ್ತದೆ. ಇಲ್ಲಿ ಕಾದಂಬರಿ ಒಂದು ತಿರುವನ್ನು ಪಡೆದುಕೊಳ್ಳುತ್ತದೆ.
ಸಾರ್ಥವಾಹರ ಜೀವನಕ್ರಮ, ವಾಣಿಜ್ಯ ವ್ಯವಹಾರದ ಚಿತ್ರಣವೂ ಇಲ್ಲಿದೆ. ಉಷ್ಣೀಷ, ತತ್ರಾಣಿ, ಪಾನಪಾತ್ರೆ, ಗಾವುದ, ಅರವಟ್ಟಿಗೆ, ಉತ್ತರೀಯ ಮುಂತಾದ ಪ್ರಸ್ತುತ ತೀರಾ ಅಪರೂಪವಾಗಿ ಬಳಕೆಯಲ್ಲಿರುವ ಅಥವಾ ಬಳಕೆಯಲ್ಲಿಯೇ ಇಲ್ಲದ ಶಬ್ಧಗಳ ಬಳಕೆ ಕಾದಂಬರಿಯ ಘನತೆಯನ್ನು ಹೆಚ್ಚಿಸಿದೆ.
ಹೀಗೆ ಶಿಲ್ಪಿಯೊಬ್ಬನ ಜೀವನದ ಏರುತಗ್ಗುಗಳು, ಶಿಲ್ಪವನ್ನು ಕಂಡರಿಸುವಾಗ ಒದಗಿಬರುವ ಬವಣೆಗಳು ಸೇರಿದಂತೆ ಇತ್ಯಾದಿ ಪೂರಕ ವಿವರಗಳನ್ನು ಲೇಖಕರು ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಗಾಂಧಾರ ಮತ್ತು ಇಸಿಲದ ಬೆಸುಗೆಯನ್ನು ವೈವಿಧ್ಯಮಯವಾಗಿ ಸದ್ರಿ ಕಾದಂಬರಿ ಕಟ್ಟಿಕೊಟ್ಟಿದೆ. ಕಥಾಹರಹನ್ನು ಸುಲಭವಾಗಿ ಗ್ರಹಿಸುವುದಕ್ಕಾಗಿ ಕಾದಂಬರಿಯನ್ನು 16 ಅಧ್ಯಾಯಗಳನ್ನಾಗಿ ವಿಂಗಡಿಸಲಾಗಿದೆ. ನೇರ ಹಾಗೂ ಸರಳ ನಿರೂಪಣೆಯಿಂದ ಕಾದಂಬರಿಯ ಓದು ಸುಲಲಿತವಾಗುತ್ತದೆ. ಕಾದಂಬರಿಯ ಕೊನೆಗೆ ಬ್ರಹ್ಮಗಿರಿಯ ಶಾಸನ ಹಾಗೂ ಅದರ ಕನ್ನಡ ಅನುವಾದನ್ನೂ ನೀಡಿದ್ದಾರೆ. ಜೊತೆಗೆ ಪರಾಮರ್ಶನ ಗ್ರಂಥಗಳ ವಿವರಗಳು, ಓದುಗರ ಅಭಿಪ್ರಾಯಗಳೂ ಅಡಕವಾಗಿವೆ.

There are no comments on this title.

to post a comment.

Powered by Koha