ಶಿವರಾಜ ಬ್ಯಾಡರಹಳ್ಳಿ; Shivaraja Byadarahalli

Ananya pratibheya pari: Dr Di Ar Nagaraj avara sahitya samskrati, vimarshe, samshodhane, anuvada granthagala kurita vimarsha barahagalu ಅನನ್ಯ ಪ್ರತಿಭೆಯ ಪರಿ (ಡಿ ಆರ್ ನಾಗರಾಜ್ ಅವರ ಸಾಹಿತ್ಯ ಸಂಸ್ಕೃತಿ ವಿಮರ್ಶೆ ಸಂಶೋಧನೆ ಕುರಿತಿ ವಿಮರ್ಶೆ) - Bengaluru Kiram Prakashana 2021 - xxx,454p. PB 21x14cm.

ಅನನ್ಯ ಪ್ರತಿಭೆಯ ಪರಿ’ ಡಾ.ಡಿ.ಆರ್. ನಾಗರಾಜ್ ಅವರ ಸಾಹಿತ್ಯ-ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಗ್ರಂಥಗಳ ಕುರಿತ ವಿಮರ್ಶಾ ಬರಹಗಳ ಸಂಕಲನ. ಲೇಖಕ ಡಾ. ಶಿವರಾಜ ಬ್ಯಾಡರಹಳ್ಳಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಡಾ.ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’, ‘ಶಕ್ತಿ ಶಾರದೆಯ ಮೇಳ’, ಸಾಹಿತ್ಯ ಕಥನ, ಸಂಸ್ಕೃತಿ ಕಥನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಉರಿಚಮ್ಮಾಳಿಗೆ ಕೃತಿಗಳು ಕನ್ನಡಕ್ಕೆ ಹೊಸತನವನ್ನು ತಂದ ಕೃತಿಗಳು. ಈ ಕೃತಿಗಳಲ್ಲಿ ಬ್ರಿಟಿಷ್ ನಿರ್ವಸಾಹತೀಕರಣದ ಚಿಂತನೆಗಳು ಅಡಗಿದೆ. ದೇಸೀ ಚಿಂತನೆಗಳಲ್ಲಿ ಅಡಗಿದ್ದ ವಿಸ್ಮೃತಿಗಳನ್ನು ವಸಹಾತುಶಾಹಿ ಚಿಂತನೆಯ ಅಧ್ಯಯನದ ಮಾದರಿಗಳಿಂದ ಬಿಡುಗಡೆಗೊಳಿಸಿದ ಚಿಂತಕರ ಸಾಲಿನಲ್ಲಿ ನಾಗರಾಜ್ ಅವರಿಗೆ ಅಗ್ರಸ್ಥಾನವಿದೆ. ಅಲ್ಲದೇ ಇವರು ನವವಸಹಾತೋತ್ತರ ಜಾಗತಿಕ ಚಿಂತಕರ ಪಟ್ಟಿಯಲ್ಲೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಆಧುನಿಕೊತ್ತರವಾದ ಒಡ್ಡುವ ಸಂಕೀರ್ಣ ಸವಾಲುಗಳನ್ನು ಕನ್ನಡದಲ್ಲಿ ಚರ್ಚೆಗೆ ಸೂಕ್ಷ್ಮವಾಗಿ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಪ್ರಿಯ ಸಾಹಿತ್ಯ, ಜನಪ್ರಿಯ ಕಲೆ-ಸಿನಿಮಾ ಪ್ರಕಾರಗಳನ್ನು ತಮ್ಮ ಗಂಭೀರವಾದ ಅಧ್ಯಯನದ ಕಕ್ಷೆಗೆ ಪರಿಗಣಿಸಿದ್ದು ಅವರ ವಿಶೇಷ ಪ್ರತಿಭೆಯ ಪರಿ. ನಾಗರಾಜ್ ಅವರ ಚಿಂತನೆಗಳು ಹಾಗೂ ಅವರ ವಿಮರ್ಶಾ ಕೃತಿಗಳನ್ನು ಕುರಿತು ನಾಡಿನ ವಿದ್ವಾಂಸರು, ಅವರ ಸ್ನೇಹಿತರು ವಿವಿಧ ದೃಷ್ಟಿಕೋನಗಳಿಂದ ನೋಡಿ ಬರೆದಿರುವ ವಿಮರ್ಶಾ ಬರಹಗಳು ಹಾಲಿ ಗ್ರಂಥದಲ್ಲಿ ಸಂಯೋಜನೆಗೊಂಡಿವೆ.

9788195251520


Kannada Criticism
ಅನನ್ಯ ಪ್ರತಿಭೆಯ ಪರಿ
ಡಿ ಆರ್ ನಾಗರಾಜ್
ಸಾಹಿತ್ಯ ಸಂಸ್ಕೃತಿ ವಿಮರ್ಶೆ ಸಂಶೋಧನೆ

K894.9 / SHIA

Powered by Koha