Vijayanagara Saamraajya Mattu Samsthaanagala Samskrutika Charitre ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ

By: N Chinnaswamy Sosale ಎನ್ ಚಿನ್ನಸ್ವಾಮಿ ಸೋಸಲೆContributor(s): SOSALE (Chinnaswamy N) ಸೋಸಲೆ (ಚಿನ್ನಸ್ವಾಮಿ ಎನ್ )Material type: TextTextLanguage: Kannada Publisher: Hampi Kannada Viswavidyalaa 2021Description: 477 p. PB 21x14 cmISBN: 9789387135710Subject(s): Vijayanagara Saamraajya Samskrutika Charitre ವಿಜಯನಗರ ಸಾಮ್ರಾಜ್ಯಸಾಂಸ್ಕೃತಿಕ ಚರಿತ್ರೆ | Karnataka Itihasa ಕರ್ನಾಟಕ ಇತಿಹಾಸDDC classification: 954.87K Summary: ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕ್ಷ್ಮವಾದದ್ದು. ಆ ಸೂಕ್ಷ್ಮತೆ ಕೈತಪ್ಪಿದರೆ ಅದರ ಸಿದ್ಧಾಂತ ಸೂತ್ರ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಆ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜ ಕೀಯೇತರವಾಗಿ ವಿಭಿನ್ನ ನಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸ್ಥಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು ಅವರ ದಂಡಯಾತ್ರೆ, ಯುದ್ಧ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ್ಮ ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು,
List(s) this item appears in: New Arrivals - June 2022
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
History 954.87K SOSV (Browse shelf) Available 075698
Total holds: 0

ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕ್ಷ್ಮವಾದದ್ದು. ಆ ಸೂಕ್ಷ್ಮತೆ ಕೈತಪ್ಪಿದರೆ ಅದರ ಸಿದ್ಧಾಂತ ಸೂತ್ರ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಆ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜ ಕೀಯೇತರವಾಗಿ ವಿಭಿನ್ನ ನಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸ್ಥಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು ಅವರ ದಂಡಯಾತ್ರೆ, ಯುದ್ಧ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ್ಮ ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು,

There are no comments on this title.

to post a comment.

Powered by Koha