Baalekaayi sothaaga oorugolaada baakaahu: ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು

By: Shree Padre: ಶ್ರೀ ಪಡ್ರೆContributor(s): PADRE (Shri): ಪಡ್ರೆ (ಶ್ರೀ)Material type: TextTextLanguage: Kannada Publisher: Bengaluru Krashi Madhyama Kendra 2021Description: 136 p. PB 21x14 cmSubject(s): Agriculture: ವ್ಯವಸಾಯ | Banana Powder: ಬಾಕಾಹು | Bhakahu Recipes: ಬಾಕಾಹು ಪಾಕವೈವಿಧ್ಯDDC classification: 634.772K Summary: ಬಾಕಾಹು ತಯಾರಿ ವಿಧಾನ, ಮಾರುಕಟ್ಟೆ ಸಾಧ್ಯತೆ ದೇಶದ ವಿವಿಧೆಡೆ ಬಾಕಾಹು ಕ್ಷೇತ್ರದಲ್ಲಿ ಆಗಿರುವ ಪ್ರಯೋಗ ಪ್ರಯತ್ನಗಳು ಬಾಕಾಹುವಿನ ಪೌಷ್ಟಿಕಾಂಶ ಮತ್ತು ಅರೋಗ್ಯ ಮೌಲ್ಯಗಳು ಜಲತಜ್ಞ ಶ್ರೀ ಪಡದರೆ ಅವರ ಕೃತಿ-ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’. ಇದು ನಿರ್ದಿಷ್ಟ ಉದ್ದೇಶದೊಂದಿಗೆ, ಬ್ಯಾನರ್ ಕಟ್ಟಿ ಭಾಷಣ ಮಾಡಿ ಚಾಲನೆ ನೀಡಿದ ಅಭಿಯಾನವಲ್ಲ. ಅಡವಿಯೊಳಗಿನ ಸಣ್ಣದೊಂದು ಒರತೆಯಂತೆ ಏಟೀವಿ (ಎನಿ ಟೈಮ್ ವೆಜಿಟೆಬಲ್) ವಾಟ್ಸಪ್ ಗುಂಪಿನಲ್ಲಿ ಸದ್ದಿಲ್ಲದೆ ಜಿನುಗಿದ ಪರಿಕಲ್ಪನೆಯಿದು. ‘ವರ್ಷವಿಡೀ ತರಕಾರಿ; ನಮ್ಮನೆಗೆ ನಮ್ಮದೇ ಸುರಕ್ಷಿತ ತರಕಾರಿ’ ಎನ್ನುವುದು ಈ ಗುಂಪಿನ ಮೂಲೋದ್ದೇಶ. ಸದಾ ರೈತಹಿತವನ್ನು ಧ್ಯಾನಿಸುವ, ಹೊಸತಿನೆಡೆಗೆ ಲಕ್ಷ್ಯವಿಟ್ಟಿರುವ, ನವ ಮಾಧ್ಯಮದ ಸಕಾರಾತ್ಮಕ ಶಕ್ತಿಯಲ್ಲಿ ಅಪಾರ ನಂಬಿಕೆಯಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರಿಂದ ಅಯಾಚಿತವಾಗಿ ಅನಾವರಣಗೊಂಡ ಆಂದೋಲನ ಕೇವಲ ಒಂದು ತಿಂಗಳಲ್ಲೆ ವ್ಯಾಪಕವಾಗಿ ಬೆಳೆದದ್ದು ಮೇಲ್ನೋಟಕ್ಕೆ ಅಚ್ಚರಿಯ ಸಂಗತಿಯೆ. ಆದರೆ ಅವರು ಇಂತಹ ಉದ್ದೇಶಗಳಿಗೆ ಸಾಮಾಜಿಕ ಮಾಧ್ಯಮವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಬಲ್ಲವರಿಗೆ ‘ಬಾಕಾಹು’ ಅಭಿಯಾನದ ಯಶಸ್ಸಿನ ಮರ್ಮ ಸುಲಭವಾಗಿ ಅರ್ಥವಾದೀತು. ಇಲ್ಲಿ ಆದದ್ದು ಇಷ್ಟೆ: ತುಮಕೂರು ಜಿಲ್ಲೆ ಅತ್ತಿಕಟ್ಟೆಯ ನಯನಾ ಆನಂದ್ ಒಂದು ವಾರವಿಡೀ ಪ್ರತಿ ದಿನ ಬಾಳೆಯ ಮೌಲ್ಯವರ್ಧನೆ-ಉಪಯೋಗ ಮಾಡಿದ್ದರ ಬಗ್ಗೆ ಏಟೀವಿ ಗುಂಪಿನಲ್ಲಿ ಹಾಕಿದ ಸಂದೇಶವನ್ನು ಗಮನಿಸಿದ ಪಡ್ರೆಯವರು ಅದಕ್ಕೆ ಪೂರಕವಾಗಿ ಕೇರಳದ ಜಯಾಂಬಿಕಾ ಅವರು ಆರು ತಿಂಗಳಲ್ಲಿ ಒಂದು ಕ್ವಿಂಟಾಲ್ ನೇಂದ್ರ ಬಾಕಾಹು ತಯಾರಿಸಿ ಮಾರಾಟ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ ಎರಡು ಚಿತ್ರಗಳೊಂದಿಗೆ ಸ್ಫೂರ್ತಿದಾಯಕವಾದ ಪೋಸ್ಟ್ ಸೇರಿಸಿದರು. ನಂತರದ ದಿನಗಳಲ್ಲಿ ಏಟೀವಿ ಗುಂಪಿನಲ್ಲಿ ಬಾಕಾಹು ಪ್ರಯೋಗಗಳು ತುಂಬಿ ತುಳುಕತೊಡಗಿದವು. ಜತೆಜತೆಗೆ ಪಡ್ರೆಯವರು ಈ ಸಂದೇಶಗಳನ್ನು ಇತರ ನಾಲ್ಕಾರು ಗುಂಪುಗಳೊಂದಿಗೆ ಹಂಚಿಕೊಂಡರು. ಫೇಸ್ಬುಕ್ ಮೂಲಕವೂ ಪ್ರಚುರಪಡಿಸಿದರು. ಕನ್ನಡ-ಇಂಗ್ಲಿಷ್-ಮಲಯಾಳಂ ಮಾಧ್ಯಮ ಮಿತ್ರರಿಗೆ ಅವರು ಮಾಹಿತಿ ನೀಡಿದ ಪರಿಣಾಮ ವಿವಿಧ ಪತ್ರಿಕೆ-ಚಾನೆಲ್ ಗಳಲ್ಲಿ ಬಾಕಾಹು ಸುದ್ದಿ ಬೆಳಕುಕಂಡಿತು. ಈ ಕುರಿತ ವೆಬಿನಾರ್ ಗಳಲ್ಲಿಯೂ ಅವರು ಪಾಲ್ಗೊಂಡು ಆಸಕ್ತರಲ್ಲಿ ಉತ್ಸಾಹ ತುಂಬಿದರು. ಇವೆಲ್ಲವುಗಳ ನಡುವೆಯೆ ಅಡಿಕೆ ಪತ್ರಿಕೆಯ ಆಗಸ್ಟ್ 2021 ಸಂಚಿಕೆಯನ್ನು ಬಾಕಾಹು ವಿಶೇಷಾಂಕವಾಗಿ ರೂಪಿಸಿದ್ದಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರಾಜ್ಯದ ಅನೇಕ ಕೇವೀಕೆಗಳನ್ನು ಸಂಪರ್ಕಿಸಿ ಬಾಕಾಹು ತಯಾರಿ ಕೈಗೊಂಡು ಸುತ್ತಮುತ್ತಲ ರೈತರಿಗೂ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದರು. ಹೀಗೆ ಹಲವು ದಿಕ್ಕುಗಳಲ್ಲಿ, ಹಲವು ಆಯಾಮಗಳಲ್ಲಿ ಅವರು ನಡೆಸಿದ ಪ್ರಯತ್ನಗಳು ಈಗ ಆಶಾದಾಯಕ ಫಲಿತಾಂಶ ನೀಡತೊಡಗಿವೆ. ಈ ಎಲ್ಲ ಬೆಳವಣಿಗೆಗಳ ವ್ಯವಸ್ಥಿತ ದಾಖಲೆ ಇಲ್ಲಿದೆ. ಶ್ರೀ ಪಡ್ರೆ ಅವರು ಹೇಳುವಂತೆ, “ಮನೆಮಟ್ಟದಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಗೆ ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ - ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ.” ಬಾಕಾಹು ಬಳಸಿ ತಯಾರಿಸಬಹುದಾದ ವೈವಿಧ್ಯಮಯ ತಿಂಡಿತಿನಿಸುಗಳ ರೆಸಿಪಿ ಈ ಪುಸ್ತಕದ ವಿಶೇಷ.
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Food Processing & Technology 634.772K PADB (Browse shelf) Available 075638
Total holds: 0

ಬಾಕಾಹು ತಯಾರಿ ವಿಧಾನ, ಮಾರುಕಟ್ಟೆ ಸಾಧ್ಯತೆ
ದೇಶದ ವಿವಿಧೆಡೆ ಬಾಕಾಹು ಕ್ಷೇತ್ರದಲ್ಲಿ ಆಗಿರುವ ಪ್ರಯೋಗ ಪ್ರಯತ್ನಗಳು
ಬಾಕಾಹುವಿನ ಪೌಷ್ಟಿಕಾಂಶ ಮತ್ತು ಅರೋಗ್ಯ ಮೌಲ್ಯಗಳು
ಜಲತಜ್ಞ ಶ್ರೀ ಪಡದರೆ ಅವರ ಕೃತಿ-ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’. ಇದು ನಿರ್ದಿಷ್ಟ ಉದ್ದೇಶದೊಂದಿಗೆ, ಬ್ಯಾನರ್ ಕಟ್ಟಿ ಭಾಷಣ ಮಾಡಿ ಚಾಲನೆ ನೀಡಿದ ಅಭಿಯಾನವಲ್ಲ. ಅಡವಿಯೊಳಗಿನ ಸಣ್ಣದೊಂದು ಒರತೆಯಂತೆ ಏಟೀವಿ (ಎನಿ ಟೈಮ್ ವೆಜಿಟೆಬಲ್) ವಾಟ್ಸಪ್ ಗುಂಪಿನಲ್ಲಿ ಸದ್ದಿಲ್ಲದೆ ಜಿನುಗಿದ ಪರಿಕಲ್ಪನೆಯಿದು. ‘ವರ್ಷವಿಡೀ ತರಕಾರಿ; ನಮ್ಮನೆಗೆ ನಮ್ಮದೇ ಸುರಕ್ಷಿತ ತರಕಾರಿ’ ಎನ್ನುವುದು ಈ ಗುಂಪಿನ ಮೂಲೋದ್ದೇಶ. ಸದಾ ರೈತಹಿತವನ್ನು ಧ್ಯಾನಿಸುವ, ಹೊಸತಿನೆಡೆಗೆ ಲಕ್ಷ್ಯವಿಟ್ಟಿರುವ, ನವ ಮಾಧ್ಯಮದ ಸಕಾರಾತ್ಮಕ ಶಕ್ತಿಯಲ್ಲಿ ಅಪಾರ ನಂಬಿಕೆಯಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರಿಂದ ಅಯಾಚಿತವಾಗಿ ಅನಾವರಣಗೊಂಡ ಆಂದೋಲನ ಕೇವಲ ಒಂದು ತಿಂಗಳಲ್ಲೆ ವ್ಯಾಪಕವಾಗಿ ಬೆಳೆದದ್ದು ಮೇಲ್ನೋಟಕ್ಕೆ ಅಚ್ಚರಿಯ ಸಂಗತಿಯೆ. ಆದರೆ ಅವರು ಇಂತಹ ಉದ್ದೇಶಗಳಿಗೆ ಸಾಮಾಜಿಕ ಮಾಧ್ಯಮವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಬಲ್ಲವರಿಗೆ ‘ಬಾಕಾಹು’ ಅಭಿಯಾನದ ಯಶಸ್ಸಿನ ಮರ್ಮ ಸುಲಭವಾಗಿ ಅರ್ಥವಾದೀತು.
ಇಲ್ಲಿ ಆದದ್ದು ಇಷ್ಟೆ: ತುಮಕೂರು ಜಿಲ್ಲೆ ಅತ್ತಿಕಟ್ಟೆಯ ನಯನಾ ಆನಂದ್ ಒಂದು ವಾರವಿಡೀ ಪ್ರತಿ ದಿನ ಬಾಳೆಯ ಮೌಲ್ಯವರ್ಧನೆ-ಉಪಯೋಗ ಮಾಡಿದ್ದರ ಬಗ್ಗೆ ಏಟೀವಿ ಗುಂಪಿನಲ್ಲಿ ಹಾಕಿದ ಸಂದೇಶವನ್ನು ಗಮನಿಸಿದ ಪಡ್ರೆಯವರು ಅದಕ್ಕೆ ಪೂರಕವಾಗಿ ಕೇರಳದ ಜಯಾಂಬಿಕಾ ಅವರು ಆರು ತಿಂಗಳಲ್ಲಿ ಒಂದು ಕ್ವಿಂಟಾಲ್ ನೇಂದ್ರ ಬಾಕಾಹು ತಯಾರಿಸಿ ಮಾರಾಟ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ ಎರಡು ಚಿತ್ರಗಳೊಂದಿಗೆ ಸ್ಫೂರ್ತಿದಾಯಕವಾದ ಪೋಸ್ಟ್ ಸೇರಿಸಿದರು. ನಂತರದ ದಿನಗಳಲ್ಲಿ ಏಟೀವಿ ಗುಂಪಿನಲ್ಲಿ ಬಾಕಾಹು ಪ್ರಯೋಗಗಳು ತುಂಬಿ ತುಳುಕತೊಡಗಿದವು. ಜತೆಜತೆಗೆ ಪಡ್ರೆಯವರು ಈ ಸಂದೇಶಗಳನ್ನು ಇತರ ನಾಲ್ಕಾರು ಗುಂಪುಗಳೊಂದಿಗೆ ಹಂಚಿಕೊಂಡರು. ಫೇಸ್ಬುಕ್ ಮೂಲಕವೂ ಪ್ರಚುರಪಡಿಸಿದರು. ಕನ್ನಡ-ಇಂಗ್ಲಿಷ್-ಮಲಯಾಳಂ ಮಾಧ್ಯಮ ಮಿತ್ರರಿಗೆ ಅವರು ಮಾಹಿತಿ ನೀಡಿದ ಪರಿಣಾಮ ವಿವಿಧ ಪತ್ರಿಕೆ-ಚಾನೆಲ್ ಗಳಲ್ಲಿ ಬಾಕಾಹು ಸುದ್ದಿ ಬೆಳಕುಕಂಡಿತು. ಈ ಕುರಿತ ವೆಬಿನಾರ್ ಗಳಲ್ಲಿಯೂ ಅವರು ಪಾಲ್ಗೊಂಡು ಆಸಕ್ತರಲ್ಲಿ ಉತ್ಸಾಹ ತುಂಬಿದರು. ಇವೆಲ್ಲವುಗಳ ನಡುವೆಯೆ ಅಡಿಕೆ ಪತ್ರಿಕೆಯ ಆಗಸ್ಟ್ 2021 ಸಂಚಿಕೆಯನ್ನು ಬಾಕಾಹು ವಿಶೇಷಾಂಕವಾಗಿ ರೂಪಿಸಿದ್ದಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರಾಜ್ಯದ ಅನೇಕ ಕೇವೀಕೆಗಳನ್ನು ಸಂಪರ್ಕಿಸಿ ಬಾಕಾಹು ತಯಾರಿ ಕೈಗೊಂಡು ಸುತ್ತಮುತ್ತಲ ರೈತರಿಗೂ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದರು. ಹೀಗೆ ಹಲವು ದಿಕ್ಕುಗಳಲ್ಲಿ, ಹಲವು ಆಯಾಮಗಳಲ್ಲಿ ಅವರು ನಡೆಸಿದ ಪ್ರಯತ್ನಗಳು ಈಗ ಆಶಾದಾಯಕ ಫಲಿತಾಂಶ ನೀಡತೊಡಗಿವೆ. ಈ ಎಲ್ಲ ಬೆಳವಣಿಗೆಗಳ ವ್ಯವಸ್ಥಿತ ದಾಖಲೆ ಇಲ್ಲಿದೆ.
ಶ್ರೀ ಪಡ್ರೆ ಅವರು ಹೇಳುವಂತೆ, “ಮನೆಮಟ್ಟದಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಗೆ ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ - ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ.” ಬಾಕಾಹು ಬಳಸಿ ತಯಾರಿಸಬಹುದಾದ ವೈವಿಧ್ಯಮಯ ತಿಂಡಿತಿನಿಸುಗಳ ರೆಸಿಪಿ ಈ ಪುಸ್ತಕದ ವಿಶೇಷ.

There are no comments on this title.

to post a comment.

Click on an image to view it in the image viewer


Powered by Koha