Purvapara ಪೂರ್ವಾಪರ
Material type:
- K894.4 ANAP
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.4 ANAP (Browse shelf(Opens below)) | Available | 044177 |
’ಪೂರ್ವಾಪರ’ ಲೇಖನಗಳನ್ನು ರೂಢಿಯಂತೆ ಸಾಹಿತ್ಯಕ-ಸಾಂಸ್ಕೃತಿಕ-ರಾಜಕೀಯ- ಸಾಮಾಜಿಕ-ತಾತ್ವಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ. ಬದುಕಿನ ಎಲ್ಲ ಸಂಗತಿಗಳನ್ನು ಗ್ರಹಿಸಲು ಹೋಗುವ ಸಾಹಸಗಳು. ಮೊದಲ ಲೇಖನದಲ್ಲಯೇ ಮೌನಕಣಿವೆ ಮತ್ತು ಚರಾಚರ ಜಗತ್ತಿನ ನಡುವೆ ಇದ್ದಿರಬಹುದಾದ ಸಂಬಂಧಜಾಲದ ಪ್ರಸ್ತಾಪವಿದೆ. ಸಂಕೀರ್ಣ ಸಂಬಂಧಜಾಲದ ಈ ಪೂರ್ವಾಪರ ಪ್ರಜ್ಞೆ ಲೇಖಕರ ಗಹಿಕೆಯಲ್ಲಿ ಅಂತರ್ಗತವಾಗಿದೆ. ಅದು ಈ ಸಂಕಲನದ ಎಲ್ಲ ಲೇಖನಗಳಿಗೆ ಆಧಾರ ಶ್ರುತಿಯಾಗಿದೆ.
ವಸ್ತುನಿಷ್ಟ ವಿಮರ್ಶೆಯೆಂಬ ಭ್ರಮೆಯಾಗಲಿ ದರ್ಪವಾಗಲಿ ಇಲ್ಲಿ ಕಾಣಿಸುವುದಿಲ್ಲ. ಓದುಗರನ್ನು ಲೇಖಕ ಒಳಗೊಳಿಸಿಕೊಳ್ಳುತ್ತಲೇ ಹೋಗುವುದರಿಂದ ವ್ಯಕ್ತಿನಿಷ್ಠೆಯ ಅಹಂಕಾರ ವಿಕಾರಗಳೂ ಗೋಚರಿಸುವುದಿಲ್ಲ. ಈ ಬರಹಗಳ ನಿಷ್ಠೆಯು ಸಮೂಹ ನಿಷ್ಠೆ, ಸಮಾಜ ನಿಷ್ಠೆ, ಸಮತ್ವ ನಿಷ್ಠೆಯಾಗಿದೆ. ವಿವಿಧ ಸಂಗತಿಗಳ ಬಗ್ಗೆ ಜತೆಗಾರ ಸಹೃದಯ ಸಾಮಾಜಿಕರೊಡನೆ ಚರ್ಚಿಸಿಕೊಳ್ಳುತ್ತ ಧೀಮಂತಿಕೆಯಿಂದ ದಾಖಲಿಸುತ್ತ ಹೋಗುತ್ತವೆ. ವಿಮರ್ಶಾತ್ಮಕ-ಸೃಜನಾತ್ಮಕವೆಂಬ ವಿಂಗಡಣೆಯನ್ನು ಮೀರಿ ನಿಲ್ಲುವ ಬರಹಗಳಿವು. ಪೂರ್ವ ಪಶ್ಚಿಮ ಸಂಸ್ಕೃತಿಗಳು ಒಂದಕ್ಕೊಂದು ಸಂಧಿಸಿ ಕಡಲು ಕಡೆದಂತೆ ಅಲ್ಲೋಲ ಕಲ್ಲೋಲ ಎದ್ದ ಅಸಾಧಾರಣ ಶತಮಾನ. ಇಂತಹ ಶತಮಾನದಿಂದ ಹರಳುಗಟ್ಟಿಕೊಂಡ ಅನಂತಮೂರ್ತಿಯವರ ಈ ಅನುಭವ ಪುಸ್ತಕ .
ಲೇಖಕರ ನಾಲ್ಕನೆಯ ವಿಮರ್ಶಾ ಸಂಕಲನ. ನಮ್ಮ ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅರ್ಥೈಸಿಕೊಳ್ಳಲು ಅನಂತಮೂರ್ತಿ ಈ ಕೃತಿ ಸಹಾಯಕವಾಗಿದೆ.
There are no comments on this title.