Local cover image
Local cover image
Amazon cover image
Image from Amazon.com
Image from Google Jackets

Sampige bhagavata: bhagavata kathanagalu ಸಂಪಿಗೆ ಭಾಗವತ: ಭಾಗವತ ಕಥನಗಳು

By: Material type: TextTextLanguage: Kannada Publication details: Bengaluru - 2011Description: xii,235ISBN:
  • 8192114708
Subject(s): DDC classification:
  • K894.4 LAKS
Summary: ಪುರಾಣಗಳು ಲೌಕಿಕ – ಅಲೌಕಿಕ, ಪ್ರತ್ಯಕ್ಷ – ಪರೋಕ್ಷಗಳ ನಡುವೆ ಸಾಧಿತವಾಗಿರುವ ಪ್ರಜ್ಞಾವಾಹಿನಿಯ ಪ್ರತಿಮೆಗಳು, ಸಂಕೇತಗಳು, ಧ್ವನಿಗಳು; ಅವು ಪ್ರಕೃತಿಯ ನಿತ್ಯದ ಕನಸುಗಳು ಕೂಡ. ಪುರಾಣಗಳು ನಮಗೆ ಹತ್ತಿರವಾಗುವುದು ಅವುಗಳ ‘ಅರ್ಥ’ ದ ಹುಡುಕಾಟದಲ್ಲಿ ಅಲ್ಲ,ನಮ್ಮ ಅನುಭವಭಾವಕೋಶದ ವಿಸ್ತಾರದಲ್ಲಿ ಮೂಡುವ ಆ ಪ್ರತಿಮೆಗಳ ಮರುಹುಟ್ಟಿನಲ್ಲಿ. ಭಾಗವತದೊಂದಿಗೆ ಲಕ್ಷ್ಮೀಶ ತೋಲ್ಪಾಡಿಯವರು ನಡೆಸಿರುವ ಸಹೃದಯ ಸಾಹಚರ್ಯ ಈ ಕೃತಿಯ ಪಂಕ್ತಿ ಪಂಕ್ತಿಯಲ್ಲೂ ಹರಳುಗಟ್ಟಿದೆ; ಶ್ರವಣ-ಮನನ-ನಿದಿಧ್ಯಾಸನಗಳ ಬೆಂಬಲವಿಲ್ಲದೆ ಇಂಥದೊಂದು ಸಾವಯವಶಿಲ್ಪ ಸಿದ್ಧವಾಗದಷ್ಟೆ. ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಗಳ ಸಂಲಗ್ನ ದಲ್ಲಿ ರಸಸಮಾವಿಷ್ಠವನ್ನೇ ಇಲ್ಲಿ ಕಂಡರಿಸಿ,ಪುರಾಣಪರಂಪರೆಯ ವ್ಯಾಖ್ಯಾನರಥಕ್ಕೆ ಹೊಸದಾದ ಜೀವಕಳೆಯನ್ನು ತುಂಬಿದ್ದಾರೆ.ಹೀಗೆಂದು ‘ಈ ಸನ್ನಿವೇಶದ ಭಾವ ಇದೇ, ಈ ಮಾತಿಗೆ ಇದೇ ಅರ್ಥ’ ಎನ್ನುವಂಥ ಪ್ರಭುಸಂಮಿತೆಯ ಆವೇಶ ಈ ಕೃತಿಯಲ್ಲಿ ಮೈದೊರಿಲ್ಲವೆಂಬುದು ಗಮನಾರ್ಹ ವಿವರವೇ ಸರಿ.ಮತ್ತಷ್ಟು ಪದರಗಳಲ್ಲಿ ಹುದುಗಿರುವ ರಸನಿಧಿಯನ್ನು ಅನ್ವೇಷಿಸಲು ಇಲ್ಲಿಯ ಸೊಲ್ಲುಗಳು ಆಲಂಬನ -ಉದ್ದೀಪನ ವಿಭಾವಗಳಾಗಿ ಒದಗಿ,ಎಲ್ಲೆಲ್ಲೂ ಹರಡಿಕೊಂಡಿರುವ ‘ಪುರಾಣ’ ಪ್ರಪಂಚದ ರಸಸಾಮ್ರಾಜ್ಯದ ವಿಸ್ತರಣಕ್ಕೆ ಅವಶ್ಯಕವಾದ ಬೀಜ ಮೊಳಕೆಯೊಡೆಯಲು ನಮ್ಮ ಭಾವ -ಬುದ್ಧಿಗಳಿಗೆ ಬಲವನ್ನು ತುಂಬಿ, ಅಂತರಂಗವನ್ನು ಫಲವತ್ತುಗೊಳಿಸುತ್ತವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.4 LAKS (Browse shelf(Opens below)) Available 066305
Total holds: 0

ಪುರಾಣಗಳು ಲೌಕಿಕ – ಅಲೌಕಿಕ, ಪ್ರತ್ಯಕ್ಷ – ಪರೋಕ್ಷಗಳ ನಡುವೆ ಸಾಧಿತವಾಗಿರುವ ಪ್ರಜ್ಞಾವಾಹಿನಿಯ ಪ್ರತಿಮೆಗಳು, ಸಂಕೇತಗಳು, ಧ್ವನಿಗಳು; ಅವು ಪ್ರಕೃತಿಯ ನಿತ್ಯದ ಕನಸುಗಳು ಕೂಡ. ಪುರಾಣಗಳು ನಮಗೆ ಹತ್ತಿರವಾಗುವುದು ಅವುಗಳ ‘ಅರ್ಥ’ ದ ಹುಡುಕಾಟದಲ್ಲಿ ಅಲ್ಲ,ನಮ್ಮ ಅನುಭವಭಾವಕೋಶದ ವಿಸ್ತಾರದಲ್ಲಿ ಮೂಡುವ ಆ ಪ್ರತಿಮೆಗಳ ಮರುಹುಟ್ಟಿನಲ್ಲಿ.
ಭಾಗವತದೊಂದಿಗೆ ಲಕ್ಷ್ಮೀಶ ತೋಲ್ಪಾಡಿಯವರು ನಡೆಸಿರುವ ಸಹೃದಯ ಸಾಹಚರ್ಯ ಈ ಕೃತಿಯ ಪಂಕ್ತಿ ಪಂಕ್ತಿಯಲ್ಲೂ ಹರಳುಗಟ್ಟಿದೆ; ಶ್ರವಣ-ಮನನ-ನಿದಿಧ್ಯಾಸನಗಳ ಬೆಂಬಲವಿಲ್ಲದೆ ಇಂಥದೊಂದು ಸಾವಯವಶಿಲ್ಪ ಸಿದ್ಧವಾಗದಷ್ಟೆ. ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಗಳ ಸಂಲಗ್ನ ದಲ್ಲಿ ರಸಸಮಾವಿಷ್ಠವನ್ನೇ ಇಲ್ಲಿ ಕಂಡರಿಸಿ,ಪುರಾಣಪರಂಪರೆಯ ವ್ಯಾಖ್ಯಾನರಥಕ್ಕೆ ಹೊಸದಾದ ಜೀವಕಳೆಯನ್ನು ತುಂಬಿದ್ದಾರೆ.ಹೀಗೆಂದು ‘ಈ ಸನ್ನಿವೇಶದ ಭಾವ ಇದೇ, ಈ ಮಾತಿಗೆ ಇದೇ ಅರ್ಥ’ ಎನ್ನುವಂಥ ಪ್ರಭುಸಂಮಿತೆಯ ಆವೇಶ ಈ ಕೃತಿಯಲ್ಲಿ ಮೈದೊರಿಲ್ಲವೆಂಬುದು ಗಮನಾರ್ಹ ವಿವರವೇ ಸರಿ.ಮತ್ತಷ್ಟು ಪದರಗಳಲ್ಲಿ ಹುದುಗಿರುವ ರಸನಿಧಿಯನ್ನು ಅನ್ವೇಷಿಸಲು ಇಲ್ಲಿಯ ಸೊಲ್ಲುಗಳು ಆಲಂಬನ -ಉದ್ದೀಪನ ವಿಭಾವಗಳಾಗಿ ಒದಗಿ,ಎಲ್ಲೆಲ್ಲೂ ಹರಡಿಕೊಂಡಿರುವ ‘ಪುರಾಣ’ ಪ್ರಪಂಚದ ರಸಸಾಮ್ರಾಜ್ಯದ ವಿಸ್ತರಣಕ್ಕೆ ಅವಶ್ಯಕವಾದ ಬೀಜ ಮೊಳಕೆಯೊಡೆಯಲು ನಮ್ಮ ಭಾವ -ಬುದ್ಧಿಗಳಿಗೆ ಬಲವನ್ನು ತುಂಬಿ, ಅಂತರಂಗವನ್ನು ಫಲವತ್ತುಗೊಳಿಸುತ್ತವೆ.

There are no comments on this title.

to post a comment.

Click on an image to view it in the image viewer

Local cover image