Taayi beru makkala elgegagi jeeva thedavara Kathanagalu : ತಾಯಿ ಬೇರು ಮಕ್ಕಳ ಏಳ್ಗೆಗಾಗಿ ಜೀವ ತೇದವರ ಕಥನಗಳು
Material type:
- 9789392116575
- K894.3 PINT
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library Stack Section | Kannada | K894.3 PINT (Browse shelf(Opens below)) | Available | 077757 |
Browsing St Aloysius Library shelves, Shelving location: Stack Section, Collection: Kannada Close shelf browser (Hides shelf browser)
ತಾಯ್ತನದ ಆಪ್ತ-ಕಥನ
(stories of those who struggled for the uplipment of their children)
'ತಾಯಿಬೇರು' ಎನ್ನುವ ಹೊತ್ತಗೆ ಬಹು ಮಹತ್ವಾಕಾಂಕ್ಷೆಯ ಬರಹ. ಇಲ್ಲಿ ವ್ಯಕ್ತಿತ್ವ ನಿರೂಪಣೆ ಎನ್ನುವುದು ಕಾರುಣ್ಯದ ಸೆಲೆಯೇ ಆಗಿದೆ. ನಾಳೆಗಳ ಕುರಿತಂತೆ ತೃಪ್ತ-ಭಾವವೊಂದು ಅಂತರಂಗದ ಶೋಧವಾಗಿ ಹರಿದಿದೆ. ವ್ಯಕ್ತಿಯೋರ್ವ/ಳು 'ಅಮ್ಮ'ನ ಮೂಲಕ ತಾನಾಗುವ ಪರಿಯ ಮೊದಲ ತಲೆಮಾರಿನ ಏಳು-ಬೀಳುಗಳಿವೆ. 'ಪ್ರಸ್ತುತ ಸಾಮಾಜಿಕ ಸನ್ನಿವೇಶ ಆಶಾದಾಯಕವೇನೂ ಅಲ್ಲ' ಎನ್ನುವ ದುಗುಡವೂ ಈ ಬರಹದ ಒಳ-ತುಡಿತವಾಗಿದೆ. ಅಂದರೆ, ಎಲ್ಲಾ ರೀತಿಯ ನಾಗರೀಕ ಪರಿಸರದಲ್ಲೂ ಭೀತಿ-ದ್ವೇಷ-ದುರಾಸೆಯ ಚೀರಾಟ ನಮ್ಮನ್ನು ಆವರಿಸಿದೆ. ಈ ಸನ್ನಿವೇಶದಲ್ಲಿ 'ಅಂಬೇಡ್ಕರ್- ಗಾಂಧಿಯ ವಿದ್ಯಮಾನದ ಹಸಿರ ಚಿಗುರು 'ತಾಯ್ತನದ ಅಂತಃಕರಣ'ವಾಗುವ ಕಂಪು ಇಲ್ಲಿದೆ.
ಇದು ನಮ್ಮ ನಡಾವಳಿಗೆ ಅತ್ಯಗತ್ಯ-ಸೂಚಿತವಾಗಿದೆ. ನಿನ್ನೆಗಳ ನೋಟದಲ್ಲಿ ಮನೋವಿಜ್ಞಾನೀಯ ಸಿದ್ಧಾಂತಗಳು 'ತಾಯ್ತನ'ವನ್ನು ಶಿಶುವನ್ನು ಬೆಳೆಸುವ ಚೌಕಟ್ಟಿನಲ್ಲೇ ವಿವೇಚಿಸಲಾಗಿದೆ. ಇಂತಡೆ, ತಾಯಿಬೇರು, ತಾಯಿಯ ಆಂತರಿಕ ಜಗತ್ತು, ಆಕೆಯ ಭಯ ಮತ್ತು ಮನ, ಮಗುವಿನ ಭಾವ ಜಗತ್ತನ್ನು ಬೆಳಗುವ-ಭಿನ್ನವಾಗಿಸುವ ಬಗೆಗಳ ಆಗರವಾಗಿದೆ. ಇಲ್ಲಿ ಕೇವಲ ಪಾಲನೆ-ಪೋಷಣೆ ಮಾತ್ರವಲ್ಲ, ಬದಲಿಗೆ ತಾಯಿಯ ಸ್ವಂತ ಆಸೆ-ನಿರೀಕ್ಷೆಯ ಅರಿವಿನ ನಿರೂಪಣೆಯಿದೆ. ತಾಯ್ತನದ ಬಹುತ್ವದ ನೋಟ ನಮ್ಮ ಗಮನಸೆಳೆಯುತ್ತದೆ. ಅಲ್ಲದೆ, ಇಲ್ಲಿನ ಬರಹಗಳು ಮಗಳ-ಮಗನ ಮೂಲಕ ತಾಯಿಯನ್ನು ಬಿಂಬಿಸುವ ಸಂಕೀರ್ಣವಾದ ನರೇಟೀವ್‌ಗಳಾಗಿವೆ. ತಾಯಂದಿರನ್ನು 'ಪುರುಷ ಕೇಂದ್ರಿತ' ಆಯಾಮದಲ್ಲೇ ಸಾರರೂಪಿಯಾಗುವುದನ್ನು ಸಮಸ್ವೀಕರಿಸುವ ಪ್ರಯತ್ನವಿದೆ.
ಅಂದರೆ, ಸಾಂಸ್ಕೃತಿಕ ಪುರಾಣಗಳಾಚೆ ವಾಸ್ತವದ ಜಾತಿ-ವರ್ಗ-ಲಿಂಗ ತಾರತಮ್ಯಗಳ ಬಲೆಯನ್ನು ಚಿಂದಿ ಮಾಡುವ 'ಆಕೆಯ ಕಥೆ' ಇಲ್ಲಿ ಅನಾವರಣಗೊಳ್ಳುತ್ತದೆ.
ಕಳೆದ ಶತಮಾನದ ಉದ್ದಕ್ಕೂ ವೈದ್ಯಕೀಯ ಮತ್ತು ಮನೋವಿಜ್ಞಾನೀಯ ನರೇಟೀವ್ ಮಾತೃತ್ವವನ್ನು ಮತ್ತಷ್ಟು ನಿಯಂತ್ರಿತವಾಗಿಸಿದೆ. ಆಕೆಯನ್ನು ಸ್ವಾಯತ್ತ-ವ್ಯಕ್ತಿತ್ವದಂತೆ ನೋಡುವ ಬದಲು, ಆಕೆಯನ್ನು ವೈಜ್ಞಾನಿಕ ಅಧ್ಯಯನದ ಬಿಂಬವಾಗಿಸಲಾಗಿದೆ. ಪುರುಷ ವೈದ್ಯರು ಮತ್ತು ಮನೋವಿಶ್ಲೇಷಕರು ತಾಯ್ತನದ ವ್ಯಾಖ್ಯಾನವನ್ನು ಸಾರರೂಪಿಗೊಳಿಸಿದ್ದಾರೆ. ಇದು ಆಕೆಯ ಮೇಲೆ ಅಪಾರ ಹೊಣೆ ಹೊರುವಂತೆ ಮಾಡಿದೆ. ಹೀಗೆ ಮಾತೃತ್ವವನ್ನು ತ್ಯಾಗದ ಪರಮೋಚ್ಛ ರೂಪವಾಗಿ ನೋಡುವ ನರೇಟೀವ್ ಬಹುಶಃ ಅತ್ಯಂತ ಶಕ್ತಿಯುತವಾದುದು. ಹಾಗಾದರೆ, ಧಾರ್ಮಿಕ ಮತ್ತು ನೈತಿಕ ಸಂಪ್ರದಾಯಗಳಾಚೆ ಸಾಗುವ ಬಗೆಯನ್ನು ಇಲ್ಲಿ ಚರ್ಚೆಗೊಳಪಡಿಸಿದೆಯೇ ಎನ್ನುವಾಗ, ಖಂಡಿತವಾಗಿಯೂ ಈ ಕೃತಿಯ ಉದ್ದೇಶ ಅದಲ್ಲ. ಬದಲು, ತಾಯಿಯಾಗುವ ಸುತ್ತಲಿನ ಜಟಿಲ ಅನುಭವಗಳನ್ನು ಮಾತೃ-ಮೂಲೀಯ ಚಹರೆಗಳಾಗಿ ಮತ್ತೆ ಕಟ್ಟುವ ಪ್ರಯತ್ನವೇ ಈ ಕೃತಿಯ ತಾಕತ್ತಾಗಿದೆ.
ಡಾ. ಡೊಮಿನಿಕ್ ಡಿ. ಬೆಂಗಳೂರು
There are no comments on this title.