Aurangajeba. ಔರಂಗಜೇಬ

RUDRAMURTI SHASTRI (Su). ರುದ್ರಮೂರ್ತಿ ಶಾಸ್ತ್ರಿ (ಸು)

Aurangajeba. ಔರಂಗಜೇಬ - Bengaluru Bhagyalakshmi Prakashana 1985 - vii,624

ಅತ್ಯಂತ ವಿವಾದಸ್ಪದ ವ್ಯಕ್ತಿಯಾಗಿದ್ದ ಔರಂಗಜೇಬ, ತನ್ನ ಕಾಲದಲ್ಲಿ ತಾನು ಯಶದಿಂದ ಯಶದ ಕಡೆಗೆ ಸಾಗುತ್ತಿದ್ದೇನೆಂದು ಭಾವಿಸಿದರೂ ಅವನು ಯಶಸ್ಸಿಗಾಗಿ ಹಿಡಿದ ಹಾದಿ, ತಳೆದ ಧೋರಣೆಗಳು ಮುಘಲ್ ಸಾಮ್ರಾಜ್ಯದ ಅವನತಿಗೆ ಹೇಗೆ ಕಾರಣವಾದುವೆಂಬುದು ಇತಿಹಾಸ ಓದಿದವರಿಗೆಲ್ಲ ತಿಳಿದ ವಿಷಯ. ಪರಮತ ಸಹಿಷ್ಣುವೂ ಉದಾರ ಹೃದಯನೂ ಆದ ದಾರಾ ಶೊಕೋ ಸರ್ವಧರ್ಮ ಸಮನ್ವಯದ ತತ್ವವನ್ನು ಪ್ರತಿಪಾದಿಸುವ ಪುಸ್ತಕವೊಂದನ್ನು ಪ್ರಕಟಿಸಿದಾಗ, ಅವನು ಇಸ್ಲಾಂ ದ್ರೋಹಿ ಎಂದು ಪ್ರಚಾರ ಆರ೦ಭಿಸಿ, ಅವನನ್ನು ಬಗ್ಗು ಬಡಿಯಲು ಮುಘಲ್ ಸೇನಾನಿಗಳೆಲ್ಲರ ನೆರವನ್ನು ಪಡೆಯುವಲ್ಲಿ ಔರಂಗಜೇಬನು ಯಶಸ್ವಿಯಾದ. ಇದು ಇತಿಹಾಸದಲ್ಲಿ ಮೂಡಿಬಂದ ಸತ್ಯ. ದಾರಾನನ್ನು ಬಗ್ಗು ಬಡಿಯಲು ಔರಂಗಜೇಬ ಇದನ್ನೇ ಒಂದು ನೆಪ ಮಾಡಿಕೊಂಡು ಇಸ್ಲಾಂನ ರಕ್ಷಕ ತಾನೆಂಬ ಸೋಗನ್ನು ಹಾಕಿಕೊಂಡನೇ ಎಂಬ ಭಾವನೆಯ ಚಿತ್ರಣವನ್ನು ಕಾದಂಬರಿಕಾರನು ಇಲ್ಲಿ ನೀಡಿರುವುದು ಅವರ ಕಲ್ಪಕತೆಗೆ ಒಳ್ಳೆಯ ಸಾಕ್ಷಿ.

K894.3 RUDA