Shirasangi kalamma: charitrika adyayana hagu aradhana parampare ಶಿರಸಂಗಿ ಕಾಳಮ್ಮ : ಚಾರಿತ್ರಿಕ ಅಧ್ಯಯನ ಹಾಗು ಆರಾಧನಾ ಪರಂಪರೆ
Vasudev Badiger ವಾಸುದೇವ ಬಡಿಗೇರ
Shirasangi kalamma: charitrika adyayana hagu aradhana parampare ಶಿರಸಂಗಿ ಕಾಳಮ್ಮ : ಚಾರಿತ್ರಿಕ ಅಧ್ಯಯನ ಹಾಗು ಆರಾಧನಾ ಪರಂಪರೆ - Hubballi Sri Vishwamaya Sahitya Prachara S 2025 - xxx,264 p. PB 20.5x13.5 cm.
ಐತಿಹಾಸಿಕ ಹಿನ್ನೆಲೆಯುಳ್ಳ ಯಾವುದೇ ಒಂದು ಕ್ಷೇತ್ರದ ಬಗ್ಗೆ ಅಧ್ಯಯನ ಕೈಗೊಂಡಾಗ ಅಲ್ಲಿ ಕಂಡುಬರುವ ಆಕರಗಳ ಸಂಗ್ರಹಣೆ, ವಿಂಗಡನೆ, ಹೋಲಿಕೆ, ವಿಮರ್ಶೆ ಮೊದಲಾದವು ಪ್ರಮುಖವಾಗುತ್ತವೆ. ಈ ಕ್ರಮಶಾಸ್ತ್ರಗಳಿಂದಲೇ ಆಳವಾಗಿ ಪರಿಶೀಲಿಸಿ ಗಟ್ಟಿ ನಿರ್ಣಯಕ್ಕೆ ಬರಲು ಸಾಧ್ಯ. ಇಂಥ ವಿಧಾನಕ್ರಮದಿಂದ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಕೃತಿ ರಚನೆಯಾಗಿದೆ. ೨೦೦೨ರಲ್ಲಿ ಶಿರಸಂಗಿ ಕಾಳಮ್ಮ ದೇವಾಲಯದ ಆಡಳಿತ ಮಂಡಳಿಯವರು ಶಿರಸಂಗಿ ಕಾಳಮ್ಮನ ಕ್ಷೇತ್ರದ ಬಗ್ಗೆ ಪುಸ್ತಕ ಬರೆದುಕೊಡಲು ಕೇಳಿಕೊಂಡರು. ಈ ವಿಷಯವನ್ನು ಕಾಳಮ್ಮನ ಪರಮ ಭಕ್ತರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರೊಂದಿಗೆ ಚರ್ಚಿಸುತ್ತಿರುವಾಗ, ಜಾನಪದ ತಜ್ಞರಾಗಿರುವ ಅವರು ಆನೇಕ ಮಾಹಿತಿಗಳೊಂದಿಗೆ ನಮ್ಮನ್ನು ಈ ಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಅಂದು ನಾವು ಸಂಗ್ರಹಿಸಿದ ಮಾಹಿತಿ ಹಾಗೂ ಕ್ಷೇತ್ರಕಾರ್ಯದ ಹಿನ್ನೆಲೆಯಾಗಿ ಶಿರಸಂಗಿ ಕಾಳು ಸಾಂಸ್ಕೃತಿಕ ಅಧ್ಯಯನ (ಚಾರಿತ್ರಿಕ ಪರಂಪರೆ) ಮತ್ತು ಶಿರಸಂಗಿ ಕಾಳಮ್ಮ ಸಾಂಸ್ಕೃತಿಕ ಅಧ್ಯಯನ (ಆರಾಧನಾ ಪರಂಪರೆ) ಎಂಬ ಎರಡು ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಯಿತು. ವಿಶ್ವಕರ್ಮ ಸಮುದಾಯದ ಕುಲದೇವತೆಯಾದ ಶಿರಸಂಗಿ ಕಾಳಮ್ಮನ ಮಾಹಿತಿಗಳನ್ನೊಳಗೊಂಡ ಈ ಕೃತಿಗಳ ಪ್ರತಿಗಳು ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡವು. ಶಿರಸಂಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಅನೇಕರು ಕಾಳಮ್ಮನ ಕುರಿತಾಗಿರುವ ಪುಸ್ತಕಗಳನ್ನು ಕೇಳುತ್ತಿದ್ದರು. ಇದಕ್ಕೆ ಪರಿಹಾರವಾಗಿ ಈ ಕೃತಿಗಳು ಮರು ಮುದ್ರಣವಾಗಬೇಕೆಂದು ಡಾ. ಈರಣ್ಣ ಪತ್ತಾರ ಮತ್ತು ಭೀಮಸೇನ ಬಡಿಗೇರ ಅವರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಪುಸ್ತಕಗಳು ಒಟ್ಟುಗೂಡಿ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡು ಓದುಗರನ್ನು ತಲುಪುತ್ತಿದೆ.
9789334215113
Hindu reform movements
294.55K / BADS