Talikandi: Kundapra Kannada Samskritika Kosha ತಳಿಕಂಡಿ: ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ

H Shantaram

Talikandi: Kundapra Kannada Samskritika Kosha ತಳಿಕಂಡಿ: ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ - Kundapura Bhandarkars Arts and Science College 2023 - 328 p. PB 21.5x14 cm.

ತಳಿಕಂಡಿʼ ಕುಂದಾಪುರ ಕನ್ನಡದ ಸಾಂಸ್ಕೃತಿಕ ಕೋಶ. ಇದರಲ್ಲಿ ಒಟ್ಟು ಐದು ವಿಭಾಗಗಳಿವೆ. ಪ್ರತಿ ವಿಭಾಗಕ್ಕೂ ಸಂಪಾದಕರು ಆಕರ್ಷಕ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ. ಮೊದಲ ಭಾಗ ʻಶಬ್ದಕೋಶʼ. ಇದರಲ್ಲಿ ಶಿಷ್ಟ ಕನ್ನಡದಲ್ಲಿ ಅರ್ಥಗಳ ಸಮೇತ ಸುಮಾರು ನಾಲ್ಕು ಸಾವಿರದ ಐನೂರು ಶಬ್ದಗಳಿವೆ. ಎರಡನೇ ಭಾಗ ʻಕುಂದಾಪ್ರ ಭಾಷಿ ಕಾಂಬುಕೆ ಚಂದʼ. ಇದರಲ್ಲಿ ಕುಂದಾಪ್ರ ಕನ್ನಡದ ವಿಭಿನ್ನ ಬಳಕೆ, ಮೀನುಗಳ ಹೆಸರುಗಳು, ಬೈಗುಳ ಶಬ್ದಗಳು, ವಾಗ್ರೂಢಿಗಳು, ಅನುಕರಣ ವಾಚಕಪದಗಳು, ದ್ವಿರುಕ್ತಿಗಳು, ಜೋಡು ನುಡಿಗಳು, ಬ್ಯಾಸಾಯದ ಕತಿ, ಒಕ್ಕಲ್ತನದ ಬಾಳ್ – ಮೊದಲಾದ ವಿಷಯಗಳ ಕುರಿತು ೨೧ ಲೇಖನಗಳಿವೆಮೂರನೆಯ ಭಾಗ ʻಮಾತಿಗೊಂದು ಒತ್ತುʼ. ಇದರಲ್ಲಿ ಕುಂದಾಪುರ ಭಾಷೆಯ ಚಾಟೂಕ್ತಿಗಳು, ಒಗಟುಗಳು, ಗಾದೆಗಳು, ಗಾದೆಯ ಹಿಂದಿನ ಕಥೆಗಳು ಇತ್ಯಾದಿಗಳಿವೆ.
ನಾಲ್ಕನೇ ಭಾಗ ʻಹಾಡಲ್ಲ ಇದು ಬದುಕುʼ. ಇದರಲ್ಲಿ ಭತ್ತ ಕುಟ್ಟುವ ಹಾಡುಗಳು, ತುಳಸಿ ಪೂಜೆಯ ಹಾಡು, ಮದುವೆ ಶಾಸ್ತ್ರದ ಹಾಡುಗಳು, ಧಿಂಸಾಲ್ ಪದ, ಶಿಶುಗೀತೆಗಳು, ಅಭಿನಯ ಗೀತೆಗಳು ಇತ್ಯಾದಿಯಾಗಿ ಸುಮಾರು ೨೩ ವಿಧದ ಜಾನಪದ ಹಾಡುಗಳಿವೆ. ಐದನೆಯ ಹಾಗೂ ಕೊನೆಯ ಭಾಗ ʻಅಜ್ಜಿ ಹೇಳಿದ ಕತಿʼ. ಇಲ್ಲಿ ನಮ್ಮ ಹಿರಿಯರು ಮಕ್ಕಳಿಗೆ ಹೇಳುತ್ತಿದ್ದ ಕೆಲವು ನೀತಿಕತೆಗಳಿವೆ.

ಜನಸಾಮಾನ್ಯರಿಗೆ ಮಾತ್ರವಲ್ಲದೆ ಭಾಷೆಗಳ ಅಧ್ಯಯನ ಮಾಡುವವರಿಗೂ ಬಹಳ ಉಪಯುಕ್ತವಾಗ ಬಲ್ಲ ಕೃತಿ ʻತಳಿಕಂಡಿʼ. ಇದು ಒಂದು ಪುಟ್ಟ ಭಾಷೆಯ ಮೂಲಕ ವಿಸ್ತಾರವಾದ ಜಗತ್ತನ್ನು ನೋಡುವ ಕಿಟಿಕಿಯೂ ಆಗಬಹುದು. ಅಳಿವಿನ ಅಂಚಿನಲ್ಲಿರುವ ಇತರ ಪ್ರಾದೇಶಿಕ ಉಪಭಾಷೆಗಳನ್ನು ಉಳಿಸುವ ಮತ್ತು ಜನಪ್ರಿಯವಾಗಿಸುವ ಉದ್ದೇಶದಿಂದ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಲಿಚ್ಛಿಸುವ ಇತರ ಭಾಷಿಕರಿಗೆ ಮಾದರಿಯಾಗ ಬಲ್ಲ ಕೃತಿಯೂ ಆಗಬಹುದು.


Dictionaries
Kannada Dictionary

K494.3 / SHAT