Timepass: Protima Bediya jivitagathe ಟೈಂಪಾಸ್: ಪ್ರೊತಿಮಾ ಬೇಡಿಯ ಜೀವಿತಗಾಥೆ

Pooja Bedi Ibrahim ಪೂಜಾ ಬೇಡಿ ಇಬ್ರಾಹಿಂ

Timepass: Protima Bediya jivitagathe ಟೈಂಪಾಸ್: ಪ್ರೊತಿಮಾ ಬೇಡಿಯ ಜೀವಿತಗಾಥೆ - Bengaluru Bhavana Prakashana 2000 - vi,298p. PB 21x14cm.

ಹೀಗೆ ಈ ಪ್ರೊತಿಮಾ ಬೇಡಿ ಎಂಬ ವಿಲಕ್ಷಣ ಜೀವಿಯಂತೆ ನಲವತ್ತೊಂಬತ್ತು ವರ್ಷಗಳ ಕಾಲ ಪ್ರತಿ ನಿಮಿಷವನ್ನು ಇಷ್ಟೊಂದು ತೀವ್ರವಾಗಿ ಬದುಕಿ ಬಿಡುವುದು ಮತ್ಯಾವ ಹೆಂಗಸಿಗಾದರೂ ಸಾಧ್ಯವೋ ಏನೋ? ಆದರೆ ಬದುಕಿದುದನ್ನೆಲ್ಲ ಹೀಗೆ, ಇಷ್ಟು ನಿಚ್ಚಳವಾಗಿ ಬರೆದುಕೊಳ್ಳುವುದು ಮಾತ್ರ ಸದ್ಯದ ಭವಿಷ್ಯತ್ತಿನಲ್ಲಿ ಮತ್ತೊಬ್ಬ ಹೆಣ್ಣುಮಗಳಿಗೆ ಸಾಧ್ಯವಾಗಲಾರದು. ಕಬೀರ್ ಬೇಡಿಯಿಂದ ಹಿಡಿದು ಪಂಡಿತ್ ಜಸ್‌ರಾಜ್‌ ತನಕ, ರಜನಿ ಪಟೇಲ್‌ನಿಂದ ಹಿಡಿದು ನಿಗೂಢ ಕೇಂದ್ರಮಂತ್ರಿ 'ಮನು'ತನಕ ಚಿತ್ರವಿಚಿತ್ರದ ದೇಶವಿದೇಶಗಳ ಗಂಡಸರೊಂದಿಗೆ ಸಂಬಂಧವಿರಿಸಿಕೊಂಡ ಪ್ರೊತಿಮಾ ಬೇಡಿ-ವರ್ಷಗಟ್ಟಲೆ ಕುಡಿದಳು, ಚರಸ್ ಸೇದಿದಳು, ಬೆತ್ತಲೆ ಓಡಿದಳು! ಅದು ಸ್ಟೇಚ್ಛೆಯನ್ನೇ ಸ್ವಾತಂತ್ರ್ಯವೆಂದು ಭಾವಿಸದಂತಹ ಹಿಪ್ಪಿಯುಗ.
ಅಷ್ಟೇ ಆಗಿದ್ದಿದ್ದರೆ ಪ್ರೊತಿಮಾ ಬೇಡಿಯ ಜೀವಿತಗಾಥೆ, ಒಬ್ಬ ಕ್ಷುದ್ರ ಹೆಂಗಸಿನ ಹೀನ ಚರಿತ್ರೆಯೆನ್ನಿಸಿಕೊಂಡು ಬಿಡುತ್ತಿತ್ತು. ಆದರೆ ಪ್ರೊತಿಮಾ ತನಗೇ ಗೊತ್ತಿಲ್ಲದಂತೆ ಬದಲಾದಳು. ಒಡಿಸ್ಸಿ ನೃತ್ಯ ಸಾಮ್ರಾಜ್ಯದ ತಾರೆಯಾದಳು. ಬೆಂಗಳೂರಿನ ಬಳಿ ನೃತ್ಯಗ್ರಾಮ ಕಟ್ಟಿದಳು. ಸನ್ಯಾಸಿನಿಯಾದಳು. ತನ್ನಿಬ್ಬರು ಮಕ್ಕಳಿಗೆ ತಾಯಿಯಾಗಬೇಕೆಂದು ತುಂಬ ಚಡಪಡಿಸಿದಳು. ಕಳೆದುಕೊಂಡ ಗಂಡನಿಗಾಗಿ, ಗೆಳೆಯರಿಗಾಗಿ ಹಂಬಲಿಸಿದಳು. ಮೊಮ್ಮಗುವಿಗೆ ಪ್ರೀತಿಯ ಅಜ್ಜಿಯಾದಳು. ನೋಡನೋಡುತ್ತಲೇ ಸತ್ತೂ ಹೋದಳು.
ಅಂಥದೊಂದು ವಿಲಕ್ಷಣ ಬದುಕಿನ ವಿಪುಲವಾದ ಕಥೆಯೇ 'ಟೈಂಪಾಸ್'
-ರವಿ ಬೆಳಗೆರ


Autobiography: ಆತ್ಮಚರಿತ್ರೆ

923K / IBRP