Tulunadinalii basel mission mattitara lekhanagalu ತುಳುನಾಡಿನಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು

BENET AMMANNA (G) ಬೆನೆಟ್ ಅಮ್ಮನ್ನ (ಜಿ)

Tulunadinalii basel mission mattitara lekhanagalu ತುಳುನಾಡಿನಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು - Ramanagara 2020 - xiv,211 PB

ಪ್ರಸ್ತುತ ಕೃತಿಯ ಶಿರೋನಾಮೆಯು ಅತ್ಯಂತ ಸೂಕ್ತವಾಗಿದ್ದು ಇಲ್ಲಿನ ಇಪ್ಪತ್ತೇಳು ಲೇಖನಗಳಲ್ಲಿ ಇಪ್ಪತ್ತು ಲೇಖನಗಳು ಬಾಸೆಲ್ ಮಿಶನ್‌ನ ವಿವಿಧ ಆಯಾಮಗಳ ಕೊಡುಗೆಗೆ ಸಂಬಂಧಪಟ್ಟವುಗಳಾಗಿವೆ. ಈ ಲೇಖನಗಳಲ್ಲಿ ಲೇಖಕರು ಬಾಸೆಲ್ ಮಿಶನ್ ಸಂಸ್ಥೆಯು ಮುದ್ರಣ, ಸಂಸ್ಕೃತಿ, ಶಿಕ್ಷಣ, ಮಾಧ್ಯಮ, ಕನ್ನಡ ತುಳು ಸಾಹಿತ್ಯ, ಕೃಷಿ, ಮುಂತಾದ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ತುಳುನಾಡಿನಲ್ಲಿ ಬಿಲ್ಲವರು ಕ್ರೈಸ್ತರಾಗಲು ಕಾರಣವೇನು, ಮಹಿಳೆಯರ, ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿ, ಸ್ವದೇಶಾಭಿಮಾನ, ಸ್ವಾವಲಂಬನೆ, ವಿದೇಶಿಯರೊಂದಿಗೆ ದೇಶಿಯರು, ಸ್ವಾತಂತ್ರ್ಯ ಚಳುವಳಿ ಮುಂತಾದ ವಿಚಾರಗಳನ್ನು ಅನೇಕ ಅನನ್ಯ ಅಂಶಗಳೊಂದಿಗೆ ಅವರು ದಾಖಲಿಸಿದ್ದಾರೆ. ಇದರೊಂದಿಗೆ ಸಾಂದರ್ಭಿಕವಾಗಿ ಕ್ರಿಸ್ಮಸ್ ಹಬ್ಬದ ಆಚರಣೆ, ಕ್ರೈಸ್ತರ ಪಾರಂಪರಿಕ ಜ್ಞಾನ, ಆಧುನಿಕತೆಯಿಂದ ನಶಿಸುತ್ತಿರುವ ಕಸುಬುಗಳು, ಚರಿತ್ರೆಯಲ್ಲಿ ಸ್ಮರಣ ಸಂಚಿಕೆಗಳ ಪಾತ್ರ, ಓದುವಿಕೆ ಮತ್ತು ಗ್ರಂಥ ಸಂರಕ್ಷಣೆಯ ವಿಧಾನ ಮೊದಲಾದ ವೈಶಿಷ್ಟ್ಯಪೂರ್ಣ ಲೇಖನಗಳು ಇಲ್ಲಿವೆ. ತುಳುನಾಡಿನ ಹಲವು ಮೊದಲುಗಳ ಬಗ್ಗೆ ಬೆಳಕು ಚೆಲ್ಲುವ ಈ ಕೃತಿ ವಿದೇಶಿಯರ ಕೊಡುಗೆಗಳ ಬಗೆಗಿನ ಹತ್ತುಹಲವು ಆಕರಗಳನ್ನು ತೆರೆದಿಡುತ್ತದೆ.

ಪರಿವಿಡಿ • ತುಳುನಾಡಿನಲ್ಲಿ ಬಾಸೆಲ್ ಮಿಶನ್ • ತುಳುನಾಡಿನ ಮೊದಲ ಮುದ್ರಣಾಲಯ(1841) • ತುಳು ಭಾಷೆದ ಬುಳೆಚ್ಚಿಲ್ ಬೊಕ್ಕ ಬಾಸೆಲ್ ಮಿಶನ್ • ತುಳು ಬಾಸೆಡ್ ಪ್ರಕಟವಾಯಿನ ಸುರುತ ಪಾಡ್ಡನ ಸಂಗ್ರಹ (1886) • 5 . ತುಳು ಬಾಸೆದ ಸುರುತ್ತ ವ್ಯಾಕರಣ (1872) • ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳು (1843) • ತುಳು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಮತ್ತು ಕೆಲವು ಕ್ರೈಸ್ತ ಪತ್ರಿಕೆಗಳಲ್ಲಿ ತುಳುನಾಡು • ತುಳುನಾಡಿನಲ್ಲಿ ಮೊದಲ ಪ್ರಾಥಮಿಕ ಶಾಲೆ (1836) • ಬಾಸೆಲ್ ಮಿಶನ್ ನಂತರದ ದೇಶೀಯ ಸಹಾಯಕ ಸಂಘ ಸಂಸ್ಥೆಗಳು • ಮಂಗಳೂರಿನಲ್ಲಿ ಬ್ರಿಟೀಷರು ನಿರ್ಮಿಸಿದ ಸಂತ ಪೌಲನ ದೇವಾಲಯ (1843) • ಮಿಶನರಿ ಸಾಹಿತ್ಯ ಮಾಹಿತಿ ಕೋಶ ಡಾ. ಶ್ರೀನಿವಾಸ್ ಹಾವನೂರು-ಒಂದು ನೆನಪು • ತುಳು ಭಾಷೆ ಮತ್ತು ಕ್ರೈಸ್ತರು • ಸ್ವಾತಂತ್ರ್ಯ ಪೂರ್ವೊದ ತುಳುನಾಡ ಸಾಹಿತಿಳು ಬೊಕ್ಕ ಸ್ವಾತಂತ್ರ್ಯ ಚಳವಳಿಡ್ ತುಳುನಾಡ್ • ಬಿಲ್ಲವರು ಕ್ರೈಸ್ತರಾಗಲು ಕಾರಣಗಳು ಮತ್ತು ನಂತರದ ಸಮಸ್ಯೆಗಳು • ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆ • ಬಾಸೆಲ್ ಮಿಶನ್ ಮತ್ತು ಬುಡಕಟ್ಟು ಜನಾಂಗ • ಬಾಸೆಲ್ ಮಿಶನ್ ಮತ್ತು ಮಹಿಳೆಯರ ವಿದ್ಯಾಭ್ಯಾಸ • ಬಾಸೆಲ್ ಮಿಶನ್ನ ಸೇವೆಯಲ್ಲಿ ಕೃಷಿ, ವಸತಿ, ಸ್ವಾವಲಂಬನೆ

978-81-947424-4-9


Kannada literature
Kannada Miscellaneous
Basel Mission in Tulunad and other Research Articles

T894.8 BENT