Bhashe mattu samajika sandarbha ಭಾಷೆ ಮತ್ತು ಸಾಮಾಜಿಕ ಸಂದರ್ಭ

KRASHNA PARAMESHVARA BHATTA ಕೃಷ್ಣ ಪರಮೇಶ್ವರ ಭಟ್ಟ

Bhashe mattu samajika sandarbha ಭಾಷೆ ಮತ್ತು ಸಾಮಾಜಿಕ ಸಂದರ್ಭ - Bengaluru Abhinava Prakashana 2013 - xii,118

ಭಾಷೆಯ ಆಂತರಿಕ ವ್ಯವಸ್ಥೆಯನ್ನು ಅದನ್ನೊಂದು ಸ್ವಯಂಪೂರ್ಣ ವ್ಯವಸ್ಥೆಯೆಂಬಂತೆ ಭಾವಿಸಿ, ವ್ಯಾಕರಣವೆಂಬ ಹೆಸರಿನಲ್ಲಿ ಅದನ್ನು ವಿವರಿಸುವ ಪ್ರಯತ್ನಕ್ಕೆ ಸುದೀರ್ಘವಾದ ಇತಿಹಾಸವಿದೆ. ಆಧುನಿಕ ಭಾಷಾವಿಜ್ಞಾನವೆಂಬ ಹೆಸರಿನಲ್ಲಿ ಅದರ ವಿವಿಧ ಪಂಥಗಳಲ್ಲಿ ಭಾಷಾವಿವೇಚನೆಯ ಪ್ರಯತ್ನಗಳು ಹೆಚ್ಚು ಸೂಕ್ಷ್ಮವಾಗಿ ನಡೆದಿವೆ. ವಿಶ್ಲೇಷಣೆಯ ಪ್ರಯತ್ನದ ಜೊತೆಗೆ ಧೋರಣೆಗೆ ಸಂಬಂಧಿಸಿದಂತೆ ಒಂದು ಮುಖ್ಯ ಬದಲಾವಣೆಯೂ ಆಗಿದೆ. ಈ ಹಿಂದೆ ವಿವೇಕಗಳಲ್ಲಿ ಎದ್ದು ಕಾಣುವಂತಿದ್ದ ವಿಧಾಯಕ ಹೊರಳಿದೆ. ವೈಜ್ಞಾನಿಕವಾಗಿ ಜಗತ್ತು ಮುನ್ನಡೆಯುತ್ತಿದ್ದಂತೆ ಹೀಗೆ ವರ್ಣನಾತ್ಮಕತೆಯ ಕಡೆಗೆ ತಿರುಗುವುದು ಅನಿವಾರ್ಯವೇ ಆದ ಒಂದು ಬದಲಾವಣೆ, ವರ್ಣನಾತ್ಮಕವಾದಂತೆ ಹೊಸ ಹೊಸ ಸಮಸ್ಯೆಗಳು ಬೆಳಕಿಗೆ ಬರುವುದೂ ಅವು ವಿವರಣೆಯನ್ನು ಬೇಡುವುದೂ ವಿವೇಚನೆ ಹೆಚ್ಚು ಹೆಚ್ಚು ಜಟಿಲವಾಗುತ್ತ ಹೋಗುವುದೂ ಸಹಜವಾದ ಬೆಳವಣಿಗೆ.

ಸಮಾಜದ ಹಿನ್ನೆಲೆಯಲ್ಲಿ ಭಾಷಿಕ ವಿದ್ಯಮಾನಗಳನ್ನು ವಿಮರ್ಶಿಸುವ ಪ್ರಯತ್ನ 6-7 ದಶಕಗಳಷ್ಟು ಹಳೆಯದಾಗಿದ್ದರೂ ಅದು ಹೆಚ್ಚು ಜನಪ್ರಿಯವಾದದ್ದು ಹಾಗೂ ವಿಸ್ಕತ ಪ್ರಮಾಣದಲ್ಲಿ ನಡೆದದ್ದು ಸುಮಾರು ನಾಲ್ಕು ದಶಕಗಳಿಂದ. ಈ ಅಭಾವದ ಹಿನ್ನೆಲೆಯಲ್ಲಿ ಕೆಲವೊಂದು ಸಮಾಜೋ-ಭಾಷಿಕ ವಿಷಯಗಳನ್ನು ಸಂಕ್ಷೇಪವಾಗಿ ಹೇಳುವ ಇದೊಂದು ಪರಿಚಯಾತ್ಮಕವಾದ ಕೃತಿಯಾಗಿದೆ. ವಿಷಯಗಳ ಮನವರಿಕೆಗಾಗಿ ಸಾಧ್ಯವಾದ ಎಡೆಗಳಲ್ಲೆಲ್ಲ ಕನ್ನಡ ಹಾಗೂ ಇತರ ನೆರೆಯ ಭಾಷೆಗಳಿಂದಲೇ ಉದಾಹರಣೆಗಳನ್ನು ಕೊಡುವ ಪ್ರಯತ್ನವನ್ನು ಲೇಖಕ ಕೃಷ್ಣ ಪರಮೇಶ್ವರ ಭಟ್ ಅವರು ಮಾಡಿದ್ದಾರೆ.

9789381055649


sandarBha
sAmAjika
mattu
BHaShe

410K KRAB