Ani aradala siri singara: bhutaradhaneya ani vaividhya bannagarike ಆಣಿ ಅರದಳ ಸಿರಿ ಸಿಂಗಾರ: ಭೂತಾರಾಧನೆಯ ಅಣಿ ವೈವಿಧ್ಯ ಬಣ್ಣಗಾರಿಕೆ

RAO (H B L) ರಾವ್ (ಎಚ್ ಬಿ ಎಲ್ )

Ani aradala siri singara: bhutaradhaneya ani vaividhya bannagarike ಆಣಿ ಅರದಳ ಸಿರಿ ಸಿಂಗಾರ: ಭೂತಾರಾಧನೆಯ ಅಣಿ ವೈವಿಧ್ಯ ಬಣ್ಣಗಾರಿಕೆ - Mumbai - 2016 - xxiv,379

ಎಚ್ ಬಿ ಎಲ್ ರಾವ್ ಸಂಪಾದಿಸಿ ಪ್ರಕಟಿಸಿದ ಅಣಿ ಅರದಳ ಸಿರಿ ಸಿಂಗಾರ ಗ್ರಂಥಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡುವ 2016ನೇ ಸಾಲಿನ ಪುಸ್ತಕ ಸೊಗಸು ಪ್ರಶಸ್ತಿ ಬಂದಿದೆ.
ಮುಂಬಯಿಯ ಸಾಹಿತ್ಯ ಬಳಗ ಪ್ರಕಟಿಸಿದ ” ಅಣಿ ಅರದಲ – ಸಿರಿ ಸಿಂಗಾರ ” ಗ್ರಂಥವು ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ , ಗೋವಿಂದ ಪೈ ಸಂಶೋಧನಾ ಕೇಂದ್ರ – ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರಘಟಕ, ಜಂಟಿಯಾಗಿ ಆಯೋಜಿಸಿದ್ದ ಭೂತಾರಾಧನೆಯ ಕೋಲ ,ನೇಮ ಮುಂತಾದ ಸಂದರ್ಭಗಳಲ್ಲಿ ವೈಭವದ ಸಂಕೇತವಾಗಿ ಬಳಸುವ ” ಅಣಿ “ಗಳ ನಿರ್ಮಾಣ ಮತ್ತು ಬಣ್ಣಗಾರಿಕೆಯ ಕುರಿತು ಮೂರು ದಿನ ನಡೆದ ಅಧ್ಯಯನ ಕಮ್ಮಟದ ಹುಟ್ಟುವಳಿಯನ್ನು ಪ್ರಧಾನವಾಗಿ ಇರಿಸಿಕೊಂಡು ಪ್ರಕಟವಾಗಿದೆ .

ಸುಮಾರು ಐವತ್ತು ಮಂದಿ ಕಲಾವಿದರು(ಪಂಬದರು ಮತ್ತು ಪಾಣರು), ವಿಷಯ ತಜ್ಞರು , ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವೈ.ಎನ್. ಶೆಟ್ಟಿ , ಡಾ.ಅಶೋಕ ಆಳ್ವ , ಕೆ.ಎಲ್ ಕುಂಡಂತಾಯ ಅವರು ಕಲಾವಿದರ ತಂಡವನ್ನು ನಿರ್ಧರಿಸಿ ಕಮ್ಮಟವನ್ನು ನೇರ್ಪುಗೊಳಿಸಿದ್ದರು . ಎಂ .ಜಿ .ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು , ಲಚ್ಚೇಂದ್ರ ದಾಖಲೀಕರಣದ ಜವಾಬ್ದಾರಿವಹಿಸಿದ್ದರು .ಯಜ್ಞ , ಆಸ್ಟ್ರೋಮೋಹನ್ , ಹರ್ಷ ಅವರ ಫೋಟೋಗಳು ಗ್ರಂಥದಲ್ಲಿದೆ.

ಪ್ರಧಾನ ಸಂಪಾದಕನಾಗಿ ಮತ್ತು ಪ್ರಕಾಶಕರಾದ ಸಾಹಿತ್ಯ ಬಳಗದ ಪರವಾಗಿ ಎಚ್. ಬಿ.ಎಲ್ .ರಾವ್ ಅವರು ಪ್ರಾರಂಭದಲ್ಲಿ ”ಅಣಿ ಅರದಲ – ಸಿರಿ ಸಿಂಗಾರ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಮ್ಮಟವನ್ನು ಸಂಘಟಿಸಿದ್ದ ಹೆರಿಂಜೆ ಕೃಷ್ಣ ಭಟ್ಟ ಅವರು ‘ ಅಣಿ ಅರದಲ – ಸಿರಿ ಸಿಂಗಾರ : ಮೈದಾಳಿದ ವೈಭವ ‘ ಎಂದು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ.

ಈ ಅಧ್ಯಯನ ಕಮ್ಮಟವನ್ನು ಹಿರಿಯ ವಿದ್ವಾಂಸ ಏರ್ಯ ಲಕ್ಷೀನಾರಾಯಣ ಆಳ್ವ ಉದ್ಘಾಟಿಸಿದ್ದರು . ಡಾ.ಯು . ಪಿ.ಉಪಾಧ್ಯಾಯ ಉಪಸ್ಥಿತರಿದ್ದರು , ಡಾ . ವಿವೇಕ ರೈ ಅವರು ಸಮಾರೋಪ ಭಾಷಣ ಮಾಡಿದ್ದು ಮೂವರ ಭಾಷಣಗಳನ್ನೂ ಗ್ರಂಥದಲ್ಲಿ ದಾಖಲಿಸಿಕೊಳ್ಳಲಾಗಿದೆ .ಅಣಿ , ಅರದಲ , ಪದ್ದೆಯಿ ,ಸಿರಿಸಿಂಗಾರ , ಕಟಿಬಯಿರೂಪಗಳು ಈ ಐದು ವಿಭಾಗಗಳ 400 ಪುಟಗಳ ಈ ಗ್ರಂಥದಲ್ಲಿ 200ಪುಟಗಳಷ್ಟು ಬಣ್ಣದ ಪೋಟೊಗಳಿವೆ . ಅಣಿ ನಿರ್ಮಾಣದ ವಿವಿಧ ಹಂತಗಳು , ಬಣ್ಣಗಾರಿಕೆ , ಪ್ರಾಚೀನ – ಅರ್ವಾಚೀನ ಆಭರಣಗಳ ಚಿತ್ರಗಳು , ಕಮ್ಮಟದಲ್ಲಿ ಸಿದ್ಧಗೊಂಡ ವೇಷಗಳು ಹಾಗೂ ಕೊಡಿಯಡಿಯ ನೈಜ ವೇಷಗಳು ಎಂಬ ಐದು ವಿಭಾಗಗಳಲ್ಲಿ ಪೋಟೋಗಳಿವೆ .

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ , ಏರ್ಯ ಲಕ್ಷೀನಾರಾಯಣ ಆಳ್ವ , ಡಾ.ಯು .ಪಿ .ಉಪಾಧ್ಯಾಯ , ಪ್ರೊ ಅಮೃತ ಸೋಮೇಶ್ವರ , ಡಾ ಅಶೋಕ ಆಳ್ವ , ಡಾ. ಜನಾರ್ದನ ಭಟ್( ಫೋಟೋಗಳಿಗೆ ಇಂಗ್ಲೀಷಿನಲ್ಲಿ ಅಡಿಬರಹ ಬರೆದಿದ್ದಾರೆ), ಡಾ.ವೈ ಎನ್. ಶೆಟ್ಟಿ , ಡಾ. ವೆಂಕಟರಾಜ ಪುಣಿಂಚತ್ತಾಯ , ಕುಮಾರ ಸ್ವಾಮಿ, ಡಾ.ಸುಶೀಲಾ ಉಪಾಧ್ಯಾಯ , ಬಾಬು ಶಿವ ಪೂಜಾರಿ , ಡಾ ,ಲಕ್ಷ್ಮೀ ಜಿ ಪ್ರಸಾದ್ ( ಆರು ಲೇಖನಗಳು ಮತ್ತು 1435 ಬೂತಗಳ ಪಟ್ಟಿ ಗ್ರಂಥಕ್ಕಾಗಿ ಒದಗಿಸಿದ್ದಾರೆ).

ವೇ.ಮೂ .ಕಮಲಾದೇವಿ ಪ್ರಸಾದ ಆಸ್ರಣ್ಣ , ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟ , ವಿದ್ವಾನ್ ಕುಮಾರ ಗುರು ತಂತ್ರಿ , ವೇ.ಮೂ . ಕೇಂಜ ಶ್ರೀಧರ ತಂತ್ರಿ ಅವರ ಲೇಖನಗಳಿವೆ . ಈ ವೈದಿಕ ವಿದ್ವಾಂಸರ ಲೇಖನಗಳನ್ನು ಬೂತಾರಾಧನಾ ವಿಭಾಗವನ್ನು ವೈದಿಕರು ಸ್ವೀಕರಿಸಿದ ವಿಧಾನವನ್ನು ಗ್ರಹಿಸಲು ಆಸಕ್ತರ ಕುತೂಹಲಕ್ಕಾಗಿ ಸೇರಿಸಿಕೊಳ್ಳಲಾಗಿದೆ .

ಕೆ.ಎಲ್.ಕುಂಡಂತಾಯ ಅವರು ಗ್ರಂಥದ ಸಂಪಾದಕನಾಗಿ ಗ್ರಂಥದ ಪ್ರಸ್ತಾವನೆ : ‘ನಡುವಣ ಲೋಕದ ನಡೆಯಲ್ಲಿ’ , ಹದಿಮೂರು ಕಲಾವಿದರ ಸಂದರ್ಶನ , ಮೂರು ಲೇಖನಗಳು ಹಾಗೂ ಪಾರಿಭಾಷಿಕ ಪದಗಳ ಸಂಗ್ರಹ ಮತ್ತು ಕಟಿಬಯಿರೂಪ ವಿಭಾಗಕ್ಕೆ ಉಭಯ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚಿನ ಅಗತ್ಯ ಫೋಟೋಗಳ ಸಂಗ್ರಹ . ಇಡೀ ಗ್ರಂಥದ ಸಂಯೋಜನೆಯ ಕಾರ್ಯ ನಿರ್ವಹಿಸಿದ್ದಾರೆ .

ಡಾ.ಲಕ್ಷ್ಮೀ ಜಿ ಪ್ರಸಾದ ಬರೆದಿರುವ ಬ್ರಾಹ್ಮಣ ಭೂತಗಳು , ಮುಸ್ಲಿಂ ಭೂತಗಳು,ಕುಲೆ ಭೂತಗಳು , ಕನ್ನಡ ಭೂತಗಳು ಹನುಮಂತ ಕೋಲ , ಸರ್ಪಕೋಲ ಎಂಬ ಆರು ಲೇಖನಗಳು ಹಾಗೂ ಇತರ ವಿದ್ವಾಂಸರ ಅಪೂರ್ವ ಲೇಖನಗಳಿವೆ . 200ಕ್ಕೂ ಹೆಚ್ಚು ಪಾರಿಭಾಷಿಕ ಶಬ್ದಗಳ ದಾಖಲಾತಿ ಇದೆ .

ಮುಂಬಯಿಯ ಎಚ್ ಬಿ ಎಲ್ ರಾವ್ ಅವರು ಸಾಹಿತ್ಯ ಬಳಗದ ಮೂಲಕ ಈ ಗ್ರಂಥವನ್ನು ಪ್ರಕಟಿಸುವ ಸಾಹಸ ಮೆರೆದಿದ್ದಾರೆ. ಆಕರ್ಷಕ ಮುಖಪುಟ , ಪುಟವಿನ್ಯಾಸ , ಪುಸ್ತಕದ ಸುಂದರ ಸಂಯೋಜನೆ ಅದ್ಭುತ . ನಿರ್ವಹಿಸಿದ ಕಲ್ಲೂರು ನಾಗೇಶ್ ಮತ್ತೊಮ್ಮೆತಮ್ಮ ಪ್ರೌಡಿಮೆ ಪ್ರದರ್ಶಿಸಿದ್ದಾರೆ .

ಬೂತ (ದೈವ) ಆರಾಧನಾ ವಿಭಾಗದ ಆಸಕ್ತರಿಗೆ, ಗೌರವವುಳ್ಳವರಿಗೆ, ಅಧ್ಯಯನ ವಿದ್ಯಾರ್ಥಿಗಳಿಗೆ ಈ ಗ್ರಂಥ ಬೂತಾರಾಧನಾಕ್ಷೇತ್ರದ ಒಂದು ಆಯಾಮದ ವಿವರಣೆಯನ್ನು, ಕಾಲ – ಸಂದರ್ಭ – ಮನೋಧರ್ಮಗಳನ್ನು ಆಧರಿಸಿಸಹಜವಾಗಿ ಸಂಭವಿಸುವ ಬದಲಾವಣೆಯ ಹಂತಗಳನ್ನು ತಿಳಿಸುತ್ತದೆ


brahmana bhutagalu ಬ್ರಾಹ್ಮಣ ಬೂತಗಳು (ದೈವ)
muslim bhutagalu ಮುಸ್ಲಿಂ ಬೂತಗಳು (ದೈವ)
kule bhutagalu ,ಕುಲೆ ಬೂತಗಳು (ದೈವ)
hanumata kola ಹನುಮಂತ ಕೋಲ
sarpa kola ಸರ್ಪಕೋಲ
daiva worship, Devil worship

398.2K RAVA