Tarikhe-iskandari. ತಾರೀಖೆ-ಇಸ್ಕಂದರಿ

MULLA NUSRATI ಮುಲ್ಲಾ ನುಸ್ರತಿ

Tarikhe-iskandari. ತಾರೀಖೆ-ಇಸ್ಕಂದರಿ - Hampi Kannada Vishvavidyalaya 2000 - xii,94

TARIKHE-ISKANDARY (A History of Sikandar Adilsha)
originally in Persion by Mulla Nusrathi (1673) translated in to marathi by M M Jagatap (1972). from Marathi into Kannada by Vithala Rao Gaikwad.
ಈ ಕೃತಿಯು ಆದಿಲಶಾಹಿ ಮನೆತನದ ಎಂಟನೆಯ ರಾಜ ಸಿಕಂದ‌ರ್ ಆದಿಲಶಾಹಿಯನ್ನು ಕುರಿತದ್ದು.
ದ್ವಿತೀಯ ಅಲಿ ಆದಿಲಶಾಹಿಯ ಮರಣಾನಂತರ (ಶಕ ೧೫೯೪) ಆದಿಲಶಾಹಿಯನ್ನು ಕೇವಲ ನಾಲ್ಕು ವರುಷದ ಹುಡುಗನಾಗಿದ್ದ ಸಿಕಂದರನಿಗೆ ಪಟ್ಟಾಭಿಷೇಕ ಮಾಡಲಾಯಿತು. ಖವಾಸಖಾನ್ ಎಂಬ ಅಧಿಕಾರಿಯು ತನ್ನ ರಾಜನಿಗೆ(ಅಲಿ ಆದಿಲಶಾಹಿ) ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡುದರ ಪರಿಣಾಮವೆಂದರೆ ಬಲಿಷ್ಠ ಆದಿಲಶಾಹಿ ಸಾಮ್ರಾಜ್ಯದಲ್ಲಿ ಪತನ ಪ್ರಕ್ರಿಯೆ ಆರಂಭವಾದದ್ದು. ಉಮ್ರಾಣಿಯ ನಿರ್ಣಾಯಕ ಯುದ್ಧವು ಈ ಸಾಮ್ರಾಜ್ಯದ ಅವಸಾನದ ಅಂಚನ್ನು ಸೂಚಿಸುವುದಾಗಿದೆ. ಉಮ್ರಾಣಿಯ ಯುದ್ಧದಲ್ಲಿ ತನ್ನ ಶೌರ್ಯವನ್ನು ಮೆರೆದ ಆದಿಲಶಾಹಿ ವೀರಸೇನಾನಿ ಬಹಲೋಲ ಖಾನನನ್ನು ಕುರಿತ ವಿಶೇಷ ವರ್ಣನೆ ಕಾಣಬರುತ್ತದೆ ಈ ಕಾವ್ಯದಲ್ಲಿ. ಜೊತೆಗೆ ರಾಜ್ಯದ ಅಧಿಕಾರ ಹಿಡಿದಿದ್ದ ಖವಾಸಖಾನನ ವ್ಯಕ್ತಿತ್ವ, ಪರಿಣಾಮವಾಗಿ ಉಂಟಾದ ಆಂತರಿಕ ಕಲಹ, ಅವ್ಯವಸ್ಥೆ ಎಲ್ಲವನ್ನು ಸೂಕ್ಷ್ಮವಾಗಿ ಕಂಡರಿಸಿದ್ದಾನೆ ನುಸ್ರತಿ. ಮಾತ್ರವಲ್ಲ ಶತ್ರು ಪಕ್ಷವಾದ ಮರಾಠರ ವ್ಯಕ್ತಿತ್ವ ಮತ್ತು ಹೋರಾಟ ಪ್ರವೃತ್ತಿ, ಶಿವಾಜಿ ರಾಜನ ಚಟುವಟಿಕೆಗಳೆಲ್ಲವನ್ನು ನಿರಾಕರಣ, ದ್ವೇಷದ ನೆಲೆಯಿಂದಲೆ ಆಗಿದ್ದರೂ ಅವರ ಸಂಘಟನಾ ಶಕ್ತಿ, ಹೋರಾಟ ಪ್ರವೃತ್ತಿಯನ್ನೆಲ್ಲ ವಿಶೇಷವಾಗಿಯೇ ಚಿತ್ರಿಸಲಾಗಿದೆ ಇಲ್ಲಿ. ಉಮ್ರಾಣಿ ಯುದ್ಧದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡುವ ಕೃತಿ ಇದೊಂದೇ ಎಂಬುದು ಗಮನೀಯ. ಈ ಕಾವ್ಯದ ಬಗ್ಗೆ 'ಬಸಾತಿನುಸ್ಸಲಾತೀನ್” ಕೃತಿಯಲ್ಲಿಯೂ ಉಲ್ಲೇಖ ಬರುತ್ತದೆ.

K894.1 MULT