Jaya yaudheya. ಜಯ ಯೌಧೇಯ,
Material type:
- K894.3 RAHJ
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.3 RAHJ (Browse shelf(Opens below)) | Available | 048220 |
ಜಯ ಯೌಧೇಯ
ಪ್ರಾಚೀನ ಕಾಲದ ಜನಜೀವನ - ರಾಜ್ಯಾಡಳಿತ ಎರಡನ್ನೂ ಆಧರಿಸಿದ, ಇತಿಹಾಸವೂ
ಆಗಿರಬಹುದಾದ ಕಾದಂಬರಿ ಇದು. ಕಾದಂಬರಿಕಾರನಿಗೆ ಕಥಾನಕವನ್ನು ತನ್ನ ಜಾಡಿಗೆ
ಒಗ್ಗಿಸಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಯೌಧೇಯ ವಂಶಜನಾದ ಜಯ ಇಲ್ಲಿನ
ಕಥಾನಾಯಕ, ಶ್ರೀಮಂತರ-ರಾಜರುಗಳ ವೈಭವ, ಭೋಗ ಜೀವನದ ಬಗ್ಗೆ ಈತನಿಗೆ
ತಿರಸ್ಕಾರ-ತಾತ್ಸಾರ. ಒಬ್ಬ ಕನಸುಗಾರನಾಗಿ, ಚಿಂತಕನಾಗಿ ಬದಲಾವಣೆ ಬಯಸುವ,
ಸಮಾನತೆಯ ಒಲವಿರುವ ಒಬ್ಬ ಯುವಕನಂತೆ ಕೃತಿಯುದ್ದಕ್ಕೂ ಕಾಣಿಸುತ್ತಾನೆ. ಇಲ್ಲಿನ
ಹಲವಾರು ಪಾತ್ರಗಳೊಂದಿಗೆ ನಡೆಸುವ ಸಂಭಾಷಣೆ ಮೂಲಕ ಅವನ ಚಿಂತನಾಲಹರಿ
ಓದುಗರಿಗೆ ವೇದ್ಯವಾಗುವುದು. ಅಂದಿನ ಕಾಲದ ಸ್ತ್ರೀಯರ ಬಗೆಗಿನ ಬಹಳಷ್ಟು
ವಿಚಾರಗಳು ಪ್ರಸ್ತಾಪವಾಗಿದ್ದು ಇಂದಿಗೆ ಹೋಲಿಸಿದರೆ ಕನಿಕರ ಮೂಡುತ್ತದೆ, ಕೆಲವರ
ಬಗ್ಗೆ ಅಭಿಮಾನವೂ, ಸಶಸ್ತ್ರ ಮಹಿಳಾ ಯೋಧೆಯರ ಬಗ್ಗೆ ಆಶ್ಚರ್ಯವೂ ಆಗುತ್ತದೆ.
ಜಯ ಒಂದು ಹಂತದಲ್ಲಿ ಬೌದ್ಧ ಸನ್ಯಾಸಿಯೂ ಆಗಿ ದೀಕ್ಷೆ ತೊಟ್ಟರೆ, ಆಶ್ಚರ್ಯವೆಂಬಂತೆ
ಕೊನೆಗೆ ಯುದ್ಧ ಭೂಮಿಗೂ ನುಗ್ಗಿ ಹೋರಾಡುತ್ತ ಅಲ್ಲಿಯೇ ಸಾವನ್ನಪ್ಪುತ್ತಾನೆ.
There are no comments on this title.