Taulanika kavyamimamse ತೌಲನಿಕ ಕಾವ್ಯ ಮೀಮಾಂಸೆ
Material type:
- K894.9 TIPT
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.9 TIPT (Browse shelf(Opens below)) | Available | 037479 |
ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ’ತೌಲನಿಕ ಕಾವ್ಯಮೀಮಾಂಸೆ’ ಕೃತಿಯಲ್ಲಿ ಕಾವ್ಯಮೀಮಾಂಸೆಯ ಹೆಜ್ಜೆಗಳು, ಕಾವ್ಯವರ್ತುಲ, ಅಲಂಕಾರ-ಅಲಂಕಾರ್, ರೀತಿ-ಮಾರ್ಗ-ಶೈಲಿ, ಧ್ವನಿಪ್ರಪಂಚ- ರಸಪ್ರಕಾಶ, ಔಚಿತ್ಯವಿವೇಕ, ಕಾವ್ಯ ಮತ್ತು ಜೀವನಮೌಲ್ಯಗಳ ಕುರಿತು ಚರ್ಚಿಸಲಾಗಿದೆ. ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯಮೀಮಾಂಸೆಗಳ ತೌಲನಿಕ ಅಧ್ಯಯನದ ಪ್ರಯತ್ನ ಈ ಕೃತಿಯಲ್ಲಿದೆ. ಮೇಲ್ನೋಟಕ್ಕೆ ಇವುಗಳಲ್ಲಿ ಸಮಾನತೆಗಿಂತ ವಿಭಿನ್ನತೆಗಳೇ ಎದ್ದು ಕಾಣುತ್ತವೆ. ಅದಕ್ಕೆ ಅವು ಬೆಳೆದುಬಂದ ವಿಭಿನ್ನ ಪರಿಸರ, ಗ್ರೀಕ್ ರೋಮ್‌ಗಳಲ್ಲಿ ಸೃಷ್ಟಿಯಾದ ಸಾಹಿತ್ಯ ಸಂದರ್ಭಕ್ಕೂ ಭರತಖಂಡದ ಕಾವ್ಯಗಳ ಸ್ವರೂಪಕ್ಕೂ ಅಗಾಧವಾದ ಅಂತರ ಕಂಡುಬರುವುದೇ ಕಾರಣ. ಆದರೂ ಆ ಅಂತರವನ್ನು ಮೀರಿ ಕಾವ್ಯಗಳು ಸಾರ್ವತ್ರಿಕತೆಯನ್ನು ಪಡೆಯುತ್ತವೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಹಾಗೆಯೇ ಕಾವ್ಯವನ್ನು ಹಿಂಬಾಲಿಸುವ ಕಾವ್ಯಮೀಮಾಂಸೆಯೂ ಕಾಲ ದೇಶಗಳ ಗಡಿಯನ್ನು ದಾಟಿ ನಿಲ್ಲಬಲ್ಲುದು ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಪರಿಸರಕ್ಕೆ ಅನುಗುಣವಾಗಿ ಪರಿಕಲ್ಪನೆಗಳೂ ಪರಿಭಾಷೆಗಳೂ ಬದಲಾಗಬಹುದು. ಆದರೂ ಅವುಗಳ ಹಿಂದಿರುವ ಆಂತರಿಕ ಅನುಭವದ ಪರಿಭಾವನೆ ಸಮಾನವಾದುದು. ಸಮುದ್ರದ ಮೇಲೆಮೇಲೆ ಕಾಣುವ ಅಲೆಗಳ ವಿನ್ಯಾಸದಂತೆ ಈ ವಿಭಿನ್ನತೆಗಳು. ಅವುಗಳೆಲ್ಲಕ್ಕೂ ತಳಹದಿಯಾಗಿರುವ ಪ್ರಶಾಂತ ಗಂಭೀರ ಮಾನವೀಯ ಅನುಭವದ ಜಲರಾಶಿ ಅವೆಲ್ಲವನ್ನೂ ನಿಯಂತ್ರಿಸುವ ಸಮಾನಶಕ್ತಿಯಾಗಿದೆ. ಆದ್ದರಿಂದಲೇ ಅರಿಸ್ಟಾಟಲನ ಕಾವ್ಯಮೀಮಾಂಸೆ ಮತ್ತು ಭರತನ ನಾಟ್ಯಶಾಸ್ತ್ರಗಳು ಉತ್ತರ ದಕ್ಷಿಣ ಧ್ರುವಗಳಂತೆ ಕಂಡರೂ ಆ ಧ್ರುವಗಳನ್ನು ಬಂಧಿಸಿರುವ ಒಂದು ಚುಂಬಕಶಕ್ತಿಯನ್ನು ಆಂತರದಲ್ಲಿ ಗುರುತಿಸುವುದು ಸಾಧ್ಯವಾಗುತ್ತದೆ. ಹಾಗೆಯೇ ಅನಂತರದ ಬೆಳವಣಿಗೆಗೂ ಈ ಮಾತು ಅನ್ವಯಿಸುತ್ತದೆ. ವಿಭಿನ್ನತೆಯಲ್ಲಿ ಏಕತೆಯ ಸಂವಾದಕ್ಕೆ ಕಾರಣವಾಗುವ ಸಮಾನ ತಂತುಗಳನ್ನು ಮಿಡಿದು ನೋಡುವುದು ಈ ತೌಲನಿಕತೆಯ ಆಶಯವಾಗಿದೆ...ಈ ಹಿನ್ನೆಲೆಯಲ್ಲಿ ಕಾವ್ಯತತ್ತ್ವಚಿಂತನೆಯ ವ್ಯಾಪಕವಾದ ವಿವೇಚನೆ ಇಲ್ಲಿದೆ.
There are no comments on this title.