Hucchutanave anugraha: nishe ಹುಚ್ಚುತನವೇ ಅನುಗ್ರಹ: ನೀಷೆ
Material type:
- 928K VASH
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | General | 928K VASH (Browse shelf(Opens below)) | Available | 066398 |
‘ಹುಚ್ಚುತನವೇ ಅನುಗ್ರಹ: ನೀಷೆ’ ಜರ್ಮನಿಯ ತತ್ತ್ವಜ್ಞಾನಿ, ಸಾಂಸ್ಕೃತಿಕ ಚಿಂತಕ, ಕವಿ, ಬರಹಗಾರ ಫೆಡ್ರಿಕ್ ನೀಷೆ ಅವರ ಪರಿಚಯಾತ್ಮಕ ಕೃತಿ. ಲೇಖಕ ಟಿ.ಎನ್. ವಾಸುದೇವಮೂರ್ತಿ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಗೆ ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೂ, ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿ ಕೊಟ್ಟಿದ್ದಾರೆ ಎನ್ನುತ್ತಾರೆ ಅನಂತಮೂರ್ತಿ. ಹೆಚ್ಚು ತಿಳಿಯಬೇಕೆಂಬ ಆಸೆ ಹುಟ್ಟಸುವಂತ ನೀಷೆಯ ಮೊದಲ ಓದು ಇಲ್ಲಿದೆ. ಕ್ರೈಸ್ತಧರ್ಮಕ್ಕೆ ವಿರೋಧವಾಗಿ ನಿಂತ ನಿಷ್ಠುರನಾದ ಈ ನೀಷೆ, ಪಾಶ್ಚಾತ್ಯ ಪ್ರಪಂಚದಲ್ಲಿ ಒಂದು ಹೊಸ ವೈಚಾರಿಕತೆಯನ್ನು ಹುಟ್ಟಿಸಿದವರು. ಎಲ್ಲ ಭಾವುಕ ಸುಳ್ಳುಗಳಿಂದ, ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರ ಬಂದವನು ಈ ನೀಷೆ. ನೀಷೆಯ ಕುರಿತಾದ ಒಂದು ಪರಿಚಯಾತ್ಮಕ ಕೃತಿ ಹುಚ್ಚುತನವೇ ಅನುಗ್ರಹ: ನೀಷೆ.
There are no comments on this title.