Chamarasana Sarala PrabhulingalIle: Arthaanugata vingadaneya Poornapata ಚಾಮರಸನ ಸರಳ ಪ್ರಭುಲಿಂಗಲೀಲೆ: ಅರ್ಥಾನುಗತ ವಿಂಗಡಣೆಯ ಪೂರ್ಣಪಾಠ
Material type:
- 23 K894.1 ANGC
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.1 ANGC (Browse shelf(Opens below)) | Available | 077372 |
ದಾರ್ಶನಿಕ ಕವಿ ಚಾಮರಸನ 'ಪ್ರಭುಲಿಂಗಲೀಲೆ'ಯು ಕನ್ನಡದ ಸಂದರ್ಭದಲ್ಲಿ ಅಲ್ಲಮಪ್ರಭುವಿನ ಚರಿತ್ರೆಯನ್ನು ತಿಳಿಸುವ ಅಧಿಕೃತ ಸಾಂಸ್ಕೃತಿಕ ಪಠ್ಯವಾಗಿದೆ. ಅದು ಹಲವು ವಿದ್ಯಾಸಂಸ್ಥೆಗಳಲ್ಲಿ ಓದಿನ ಭಾಗವಾಗಿ ಪಠ್ಯವಾಗಿದೆಯಲ್ಲದೆ, ವೀರಶೈವ ಮಠಗಳಲ್ಲಿ ಪಠಣ ಗ್ರಂಥವಾಗಿದೆ ಎಂಬುದು ಗಮನಾರ್ಹ. ಒಂದು ಮಾತು ಹೇಳಲೇಬೇಕಾಗಿದೆ. ಪ್ರಭುಲಿಂಗಲೀಲೆ ವೀರಶೈವಧರ್ಮದ ಆತ್ಮಗೌರವವನ್ನು ಎತ್ತಿ ಹಿಡಿಯುವ ಮಹತ್ವದ ಆಧಾರಭೂತ ಗ್ರಂಥವಾಗಿದೆ. ಅಲ್ಲದೆ ವೀರಶೈವ ಧರ್ಮದ ಪಠ್ಯಪುಸ್ತಕವೂ ಕೈಪಿಡಿಯೂ ಆಗಿದೆ. ವಿದ್ವಾಂಸರು, ಆಸಕ್ತರು, ಸಾಮಾನ್ಯರೂ ಸೇರಿದಂತೆ ಪ್ರಭುಲಿಂಗಲೀಲೆಯ ವ್ಯಾಸಂಗದ ಕಡೆಗೆ ಓದುಗರನ್ನು ಸಜ್ಜುಗೊಳಿಸಬೇಕಾದರೆ ಹಾಗೂ ಅವರ ಅರಿವಿನ ಎಲ್ಲೆಯನ್ನು ವಿಸ್ತರಿಸಬೇಕಾದರೆ ಮುದ್ರಿತ ಪಾಠದಲ್ಲಿಯ ಕೊರತೆಗಳನ್ನು ಸರಿಪಡಿಸಿ ಮೂಲಲಯಕ್ಕೆ ಧಕ್ಕೆಯಾಗದಂತೆ ಸಂವಹನ ಪಾತಳಿಯ ನೆಲೆಯಲ್ಲಿ ಪ್ರಭುಲಿಂಗಲೀಲೆಯನ್ನು ಅರ್ಥಾನುಗತವಾಗಿ ವಿಂಗಡಿಸಿ, ಉಚಿತಕ್ಕೆ ತಕ್ಕಂತೆ ಟಿಪ್ಪಣಿಗಳನ್ನು ಸಿದ್ಧಪಡಿಸಿದ ಸರಳ ಆವೃತ್ತಿಯು ತುಂಬ ಅಗತ್ಯವಾಗಿದೆ. ಅಷ್ಟೇ ಅಲ್ಲದೆ ಪ್ರಭುಲಿಂಗಲೀಲೆಯ ಮೂಲಪಾಠದ ಅಧ್ಯಯನಕ್ಕೆ ಸರಳ ಆವೃತ್ತಿಯು ಪ್ರೇರಣೆ ಕೊಡುತ್ತದೆ. ಇದರಿಂದ ವೀರಶೈವ ಸಾಹಿತ್ಯವೂ ಒಳಗೊಂಡಂತೆ ಕನ್ನಡ ಸಾಹಿತ್ಯ ಪರಂಪರೆಯನ್ನು ಬಿಡದೆ ಗೌರವಿಸುತ್ತ, ವಿಮರ್ಶಿಸುತ್ತ ಹೊಸತನವನ್ನು ಅಳವಡಿಸಿ ಹಳಗನ್ನಡ ಪಠ್ಯಗಳು ಪುನರ್‌ಸೃಷ್ಟಿಯಾಗಬೇಕಾಗಿವೆ. ಇದರಿಂದ ಗ್ರಂಥಸಂಪಾದನೆಯನ್ನು ಕೂಡ ವೈಚಾರಿಕ ಹಾಗೂ ಸೃಜನಶೀಲ ಮಾದರಿಯನ್ನಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಡಾ. ಎಸ್.ಎಸ್. ಅಂಗಡಿ ಅವರ 'ಸರಳ ಪ್ರಭುಲಿಂಗಲೀಲೆ' ಒಂದು ಗಮನಾರ್ಹ ಕೃತಿಯಾಗಿದೆ.
There are no comments on this title.