Local cover image
Local cover image
Amazon cover image
Image from Amazon.com
Image from Google Jackets

Avibajitha Dakshina Kannadada Dalitha Chinthane ಅವಿಭಜಿತ ದಕ್ಷಿಣ ಕನ್ನಡದ ದಲಿತ ಚಿಂತನೆ

By: Contributor(s): Material type: TextTextLanguage: Kannada Publication details: Mangaluru ಮಂಗಳೂರು Aakrithi Aashaya Publications ಆಕೃತಿ ಆಶಯ ಪಬ್ಲಿಕೇಷನ್ಸ್ 2023Description: 560 p. PB 21x14 cmISBN:
  • 9789392116247
Subject(s): DDC classification:
  • 23 K894.301 RAMA
Summary: ಭಾರತದಲ್ಲಿ ದಲಿತ ಚಿಂತನೆ ವಿವಿಧ ದೃಷ್ಟಿಕೋನಗಳ ಬೌದ್ಧಿಕ, ಸಾಮಾಜಿಕ ಹಾಗೂ ರಾಜಕೀಯ ನೆಲೆಗಳ ಒಂದು ಸಂಯುಕ್ತ ಶಕ್ತಿ. ಡಾ. ಬಾಬಾ ಸಾಹೇಬರು ರೂಪಿಸಿದ ಸಮಗ್ರ ದರ್ಶನದ ಒಂದು ಭಾಗ ತನ್ನ ಸೈದ್ದಾಂತಿಕ ಪ್ರಖರತೆಯ ಪ್ರಭಾವದಿಂದ ದಲಿತ ಚಿಂತನೆಯಾಗಿ ಮೊಳಕೆಯೊಡೆಯಿತು. ಭಾರತದ ವಿವಿಧ ಭಾಗಗಳಲ್ಲಿ ೧೯೭೦ರ ದಶಕದ ನಂತರ ವ್ಯವಸ್ಥೆಯ ಅಸಮಾನತೆ, ಅಪಮಾನ, ಅನ್ಯಾಯ ಮತ್ತು ಶೋಷಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದ ಸಮಾನತೆಯ ಆಶಯದ ದಲಿತ ಮತ್ತು ದಲಿತೇತರ ಚಿಂತಕರು, ಸಾಹಿತಿಗಳು ಇದನ್ನು ಬೆಳೆಸಿದರು. ೧೯೮೭ರಿಂದ ಇಲ್ಲಿಯವರೆಗಿನ ಅವಿಭಜಿತ ದಕ್ಷಿಣ ಕನ್ನಡದ ದಲಿತ ಸಮಸ್ಯೆಗಳ ವಿವಿಧ ಆಯಾಮಗಳನ್ನು ಇದೇ ಭಾಗದ ದಲಿತ ಮತ್ತು ದಲಿತೇತರ ಲೇಖಕರು ವಿಶ್ಲೇಷಿಸಿ, ವ್ಯಾಖ್ಯಾನಿಸಿರುವ ಆಯ್ದ ಲೇಖನಗಳು ಇದರಲ್ಲಿವೆ. ಚಿಂತನೆಗಳಿಗೆ ಕಾಲಬದ್ಧತೆ ಮತ್ತು ಪ್ರದೇಶಬದ್ಧತೆ ಇರುವುದಿಲ್ಲ. ಇದೊಂದು ತಾಂತ್ರಿಕ ಮಾನದಂಡ ಅಷ್ಟೆ ಇಲ್ಲಿನ ಲೇಖನಗಳು ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿವೆ. ಇವುಗಳ ವಸ್ತುವಿಷಯ, ವಿವರಣೆ, ವಿಶ್ಲೇಷಣೆ, ತಾರ್ಕಿಕ ಬೆಳವಣಿಗೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನಗಳು ವೈವಿಧ್ಯಮಯವಾಗಿವೆ. ದಲಿತ ಸಮಸ್ಯೆಯ ಆಳ ಅಗಲಗಳ ಸಂಕೀರ್ಣತೆಗಳನ್ನು ಗ್ರಹಿಸಿರುವ ಇವು ಅತಿ ಮಹತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತಿವೆ. ಆಳವಾದ ಮತ್ತು ಗಂಭೀರವಾದ ಅಧ್ಯಯನದಿಂದ ಮೂಡಿವೆ. ವಿಷಯ ಗ್ರಹಿಕೆ ಹಾಗೂ ಮಂಡನೆಯಲ್ಲಿ ಸಾವಯವತೆಯಿದೆ. ಇವುಗಳ ಆಳದಲ್ಲಿ ಸಾಮಾಜಿಕ ನೆಲೆಯ ಸ್ವಾತಂತ್ರ್ಯ, ಸೋದರತೆ ಮತ್ತು ಸಮಾನತೆಯ ಆಶಯಗಳಿವೆ. ಚಿಂತನೆಗಳ ಸ್ಥಗಿತತೆಯ ರಚನೆಯನ್ನು ಒಡೆದು, ಅವುಗಳ ಸ್ವರೂಪವನ್ನು ಬದಲಾಯಿಸುವುದು ಮತ್ತು ಹೊಸ ರಚನೆಗಳನ್ನು ಸೃಷ್ಟಿಸುವುದು ದಲಿತ ಚಿಂತನೆಯ ಕೇಂದ್ರ ಗುಣ. ಇಲ್ಲಿನ ಲೇಖನಗಳಲ್ಲಿ ಈ ಪ್ರಕ್ರಿಯಾತ್ಮಕ ಸೃಜನಶೀಲತೆಯ ಗುಣವಿದೆ. ಇದು ಹೆಮ್ಮೆಯ ಸಂಗತಿ. ಇದು ಅಧ್ಯಯನ ಯೋಗ್ಯ ಮತ್ತು ಸಂಗ್ರಹ ಯೋಗ್ಯ ಸಂಕಲನ. ಇಂತಹ ಮಹತ್ವದ ಸಂಕಲನವನ್ನು ಸಂಪಾದಿಸಿರುವ ಸಂಪಾದಕ ಬಳಗಕ್ಕೆ ಮತ್ತು ಇದನ್ನು ಪ್ರಕಟಿಸುತ್ತಿರುವ ಆಕೃತಿ ಆಶಯ ಪಬ್ಲಿಕೇಶನ್ಸ್‌ಗೆ ಅಭಿನಂದನೆಗಳು. ಡಾ. ಬಿ.ಎಂ. ಪುಟ್ಟಯ್ಯ ಹಿರಿಯ ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾಲಯ
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.301 RAMA (Browse shelf(Opens below)) Available 077363
Total holds: 0

ಭಾರತದಲ್ಲಿ ದಲಿತ ಚಿಂತನೆ ವಿವಿಧ ದೃಷ್ಟಿಕೋನಗಳ ಬೌದ್ಧಿಕ, ಸಾಮಾಜಿಕ ಹಾಗೂ ರಾಜಕೀಯ ನೆಲೆಗಳ ಒಂದು ಸಂಯುಕ್ತ ಶಕ್ತಿ. ಡಾ. ಬಾಬಾ ಸಾಹೇಬರು ರೂಪಿಸಿದ ಸಮಗ್ರ ದರ್ಶನದ ಒಂದು ಭಾಗ ತನ್ನ ಸೈದ್ದಾಂತಿಕ ಪ್ರಖರತೆಯ ಪ್ರಭಾವದಿಂದ ದಲಿತ ಚಿಂತನೆಯಾಗಿ ಮೊಳಕೆಯೊಡೆಯಿತು. ಭಾರತದ ವಿವಿಧ ಭಾಗಗಳಲ್ಲಿ ೧೯೭೦ರ ದಶಕದ ನಂತರ ವ್ಯವಸ್ಥೆಯ ಅಸಮಾನತೆ, ಅಪಮಾನ, ಅನ್ಯಾಯ ಮತ್ತು ಶೋಷಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದ ಸಮಾನತೆಯ ಆಶಯದ ದಲಿತ ಮತ್ತು ದಲಿತೇತರ ಚಿಂತಕರು, ಸಾಹಿತಿಗಳು ಇದನ್ನು ಬೆಳೆಸಿದರು.

೧೯೮೭ರಿಂದ ಇಲ್ಲಿಯವರೆಗಿನ ಅವಿಭಜಿತ ದಕ್ಷಿಣ ಕನ್ನಡದ ದಲಿತ ಸಮಸ್ಯೆಗಳ ವಿವಿಧ ಆಯಾಮಗಳನ್ನು ಇದೇ ಭಾಗದ ದಲಿತ ಮತ್ತು ದಲಿತೇತರ ಲೇಖಕರು ವಿಶ್ಲೇಷಿಸಿ, ವ್ಯಾಖ್ಯಾನಿಸಿರುವ ಆಯ್ದ ಲೇಖನಗಳು ಇದರಲ್ಲಿವೆ. ಚಿಂತನೆಗಳಿಗೆ ಕಾಲಬದ್ಧತೆ ಮತ್ತು ಪ್ರದೇಶಬದ್ಧತೆ ಇರುವುದಿಲ್ಲ. ಇದೊಂದು ತಾಂತ್ರಿಕ ಮಾನದಂಡ ಅಷ್ಟೆ ಇಲ್ಲಿನ ಲೇಖನಗಳು ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿವೆ. ಇವುಗಳ ವಸ್ತುವಿಷಯ, ವಿವರಣೆ, ವಿಶ್ಲೇಷಣೆ, ತಾರ್ಕಿಕ ಬೆಳವಣಿಗೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನಗಳು ವೈವಿಧ್ಯಮಯವಾಗಿವೆ. ದಲಿತ ಸಮಸ್ಯೆಯ ಆಳ ಅಗಲಗಳ ಸಂಕೀರ್ಣತೆಗಳನ್ನು ಗ್ರಹಿಸಿರುವ ಇವು ಅತಿ ಮಹತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತಿವೆ. ಆಳವಾದ ಮತ್ತು ಗಂಭೀರವಾದ ಅಧ್ಯಯನದಿಂದ ಮೂಡಿವೆ. ವಿಷಯ ಗ್ರಹಿಕೆ ಹಾಗೂ ಮಂಡನೆಯಲ್ಲಿ ಸಾವಯವತೆಯಿದೆ. ಇವುಗಳ ಆಳದಲ್ಲಿ ಸಾಮಾಜಿಕ ನೆಲೆಯ ಸ್ವಾತಂತ್ರ್ಯ, ಸೋದರತೆ ಮತ್ತು ಸಮಾನತೆಯ ಆಶಯಗಳಿವೆ.

ಚಿಂತನೆಗಳ ಸ್ಥಗಿತತೆಯ ರಚನೆಯನ್ನು ಒಡೆದು, ಅವುಗಳ ಸ್ವರೂಪವನ್ನು ಬದಲಾಯಿಸುವುದು ಮತ್ತು ಹೊಸ ರಚನೆಗಳನ್ನು ಸೃಷ್ಟಿಸುವುದು ದಲಿತ ಚಿಂತನೆಯ ಕೇಂದ್ರ ಗುಣ. ಇಲ್ಲಿನ ಲೇಖನಗಳಲ್ಲಿ ಈ ಪ್ರಕ್ರಿಯಾತ್ಮಕ ಸೃಜನಶೀಲತೆಯ ಗುಣವಿದೆ. ಇದು ಹೆಮ್ಮೆಯ ಸಂಗತಿ. ಇದು ಅಧ್ಯಯನ ಯೋಗ್ಯ ಮತ್ತು ಸಂಗ್ರಹ ಯೋಗ್ಯ ಸಂಕಲನ. ಇಂತಹ ಮಹತ್ವದ ಸಂಕಲನವನ್ನು ಸಂಪಾದಿಸಿರುವ ಸಂಪಾದಕ ಬಳಗಕ್ಕೆ ಮತ್ತು ಇದನ್ನು ಪ್ರಕಟಿಸುತ್ತಿರುವ ಆಕೃತಿ ಆಶಯ ಪಬ್ಲಿಕೇಶನ್ಸ್‌ಗೆ ಅಭಿನಂದನೆಗಳು.

ಡಾ. ಬಿ.ಎಂ. ಪುಟ್ಟಯ್ಯ ಹಿರಿಯ ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾಲಯ

There are no comments on this title.

to post a comment.

Click on an image to view it in the image viewer

Local cover image