TY - BOOK AU - K P Rao: ಕೆ ಪಿ ರಾವ್ AU - RAO (K P): ರಾವ್ (ಕೆ ಪಿ) TI - Varnaka: Takshashileyalli matthe jeevataleda bhashavilasa: ವರ್ಣಕ: ತಕ್ಷಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾವಿಲಾಸ SN - 9789392230028 U1 - K894.3 23 PY - 2021/// CY - Bengaluru PB - Ankita Pustaka KW - Kannada Fiction: ಕನ್ನಡ ಕಾದಂಬರಿ KW - Kannada Literature: ಕನ್ನಡ ಸಾಹಿತ್ಯ N2 - ವರ್ಣಕ’ ತತ್ವಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾವಿಲಾಸ’- ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ಧರಾದ ಕೆ.ಪಿ. ರಾವ್ ಅವರ ಕಾದಂಬರಿ. ಕಲ್ಪನೆ, ತಾರ್ಕಿಕತೆಗಳನ್ನು ಮೇಳವಿಸಿಕೊಂಡ ವಿಶಿಷ್ಟ ಕಾದಂಬರಿ 'ವರ್ಣಕ'. ಈ ಕೃತಿಗೆ ಎನ್. ತಿರುಮಲೇಶ್ವರ ಭಟ್ಟ ಅವರು ಮುನ್ನುಡಿ ಬರೆದಿದ್ದಾರೆ. ವರ್ಣಕ ಎಂಬ ಕೃತಿ ಸ್ಪಷ್ಟವಾಗಿ ಕಥನ ರೂಪದಲ್ಲಿದೆ. ಆದರೆ ಮೊದಲಿಂದ ಕೊನೆಯವರೆಗೂ ಕಥನ ಒಂದೇ ರೀತಿಯದಲ್ಲ. ನಿಜ, ಸರ್ವಜ್ಞರಾದ ಕಥನಕಾರರೊಬ್ಬರನ್ನು ಇಲ್ಲಿ ಗುರುತಿಸುವುದು ಸಾಧ್ಯ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ. ಕೃತಿಯ ಶರೀರದಲ್ಲಿ ಸ್ಪಷ್ಟವಾಗಿ ಮೂರು ಭಾಗಗಳನ್ನು ಗುರುತಿಸಬಹುದು. ಮೊದಲ ಭಾಗದಲ್ಲಿ ಸರ್ವಜ್ಞರಾದ ನಿರೂಪಕರೊಬ್ಬರು ಶಂಭು ಮಹಾಜನರನ್ನು ಪರಿಚಯಿಸುತ್ತಾರೆ. ಆದರೆ ಅವರ ಪೂರ್ವ ವೃತ್ತಾಂತವು ಅವರೇ ಮನಸ್ಸಿನಲ್ಲಿ ನೆನಪಿಸಿಕೊಳ್ಳುವಂತೆ ರಚನೆಯಾಗಿದೆ. ಅಂದರೆ ಇಲ್ಲಿ ಸಿಂಹಾವಲೋಕನ ಅಥವಾ ಫ್ಲಾಶ್-ಬ್ಯಾಕ್ ತಂತ್ರಗಾರಿಕೆಯ ಉಪಯೋಗವಾಗಿದೆ. ಇವುಗಳಲ್ಲಿ ಒಂದರಲ್ಲಿ ಶಂಭು ಮಹಾಜನರು ವಿದೇಶಿಕನ್ಯೆಯನ್ನು ವರಿಸುವ ತಮ್ಮ ನಿರ್ಣಯವನ್ನು ತಮ್ಮ ಹೆತ್ತವರಿಗೆ ತಿಳಿಸುವ ಆಶಯದಿಂದ ಬಂದು ತಂದೆಯವರಿಂದ ಅವಮಾನಿತರಾಗಿ ಮರಳಿ ವಿದೇಶಕ್ಕೆ ಹೋಗುವ ಸಂದರ್ಭ. ಇದರಲ್ಲಿ ಭಾಷಾ ಸಂಬಂಧಿ ವಿಚಾರಗಳು ಕ್ವಚಿತ್ತಾಗಿ ಇವೆ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ ER -