ಇವಾನ್ ಅಲೆಕ್ಸಿಯವಿಜ್ ಬುನಿನ್ 1933ರಲ್ಲಿ ನೊಬೆಲ್ ಬಹುಮಾನ ಪಡೆದ ಮೊಟ್ಟಮೊದಲ ರಷ್ಯನ್ ಲೇಖಕ. ಧ್ವನಿಶಕ್ತಿಯುಳ್ಳ ಭಾಷೆ, ಕಣ್ಣುತುಂಬಿಬರುವಂತೆ ಹತಾಶೆಯನ್ನು ನಿರೂಪಿಸುವ ಪ್ರತಿಭೆ, ಬದುಕಿನ ಬಗೆಗೆ ಅತೀವ ಪ್ರೀತಿ ಇವೆಲ್ಲವೂ ಇವನ ಕೃತಿಗಳಲ್ಲಿ ಎದ್ದು ಕಾಣುವ ಅಂಶಗಳು. ಸಂವೇದನೆ, ಅಂತಃಸ್ಪುರಣಿ, ಸಂಸ್ಕರಣೆ ಮೊದಲಾದವುಗಳಿಂದ ಚಾಲನೆ ಪಡೆದ ಬುನಿನ್ ಒಂದು ಅರ್ಥದಲ್ಲಿ ಕಪಟತನವಿಲ್ಲದ ಶುದ್ಧ ಲೇಖಕ. ಈ ಕಾದಂಬರಿಯಲ್ಲಿರುವುದು ಜೀವನದಲ್ಲಿ ಬೇರೆ ಬೇರೆ ದಾರಿಗಳನ್ನು ಹಿಡಿದ ಅಣ್ಣತಮ್ಮಂದಿರಿಬ್ಬರು ಕೊನೆಗೂ ಮಾನಸಿಕವಾಗಿ, ಅಷ್ಟೇಕೆ ಬೌದ್ಧಿಕವಾಗಿ ಕೂಡ, ಕ್ಷುದ್ರರಾಗಿಯೇ ಉಳಿದುಬಿಡುವ ಘೋರ ಚಿತ್ರ ಕಾದಂಬ- ರಿಯ ಶೀರ್ಷಿಕೆ ಮತ್ತು ಬಲಾಷಿನ್ ಎಂಬ ಪಾತ್ರ ಇಡೀ ರಷ್ಯವೇ ಒಂದು 'ಹಳ್ಳಿ' ಎನ್ನುವುದನ್ನು ಸಮರ್ಥಿಸುವಂತಿವೆ.