Kartarana kammata ಕರ್ತಾರನ ಕಮ್ಮಟ
- Maisuru Di Vi Ke Murti 1983
- viii,780
ಹನ್ನೆರಡನೆಯ ಶತಮಾನದ ವಚನ ಚಳವಳಿಯ ವಸ್ತುವನ್ನಾಗಿ ಇಟ್ಟುಕೊಂಡು ರಚಿತವಾದ ಕಾದಂಬರಿ ’ಕರ್ತಾರನ ಕಮ್ಮಟ’. ಬಸವಣ್ಣನವರ ವಚನದ ಮರ್ತ್ಯವೆಂಬುದು ಕರ್ತಾರನ ಕಮ್ಮಟ ಎಂಬ ಸಾಲು ಆಧರಿಸಿ ಶೀರ್ಷಿಕೆ ಇಡಲಾಗಿದೆ. ಬಸವಣ್ಣ, ಅಲ್ಲಮ, ಅಕ್ಕ ಈ ಕಾದಂಬರಿಯಲ್ಲಿ ಪ್ರಮುಖವಾಗಿದ್ದರೂ ಇಡೀ ಕಾದಂಬರಿಯ ಕೇಂದ್ರ ಮಾತ್ರ ಬಸವಣ್ಣ. ಬಸವಣ್ಣನ ಬದುಕನ್ನು ಕಾದಂಬರಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ತಿಪ್ಪೇರುದ್ರಸ್ವಾಮಿ ಅವರು ಮಾಡಿದ್ದಾರೆ.