ಈ ಕಾದಂಬರಿಗಳ ಮುಖ್ಯ ಕಥಾವಸ್ತು ಬಸವಣ್ಣನವರ ಬಹುಮುಖ ವ್ಯಕ್ತಿತ್ವ ಹಾಗೂ ಶರಣರ ಚಳುವಳಿಯ ವಿವಿಧ ಮುಖಗಳನ್ನು ಚಿತ್ರಿಸುವದಾಗಿದ್ದರೂ ಇವು ಹನ್ನೆರಡನೆಯ ಶತಮಾನದ ಜನಜೀವನದ ವಿವಿಧ ಮುಖಗಳ ವಿಶ್ವಕೋಶದಂತಿದೆ. ಇವುಗಳಲ್ಲಿ ಶರಣ ಚಳುವಳಿಯ ಸಮಗ್ರ ಚರಿತ್ರೆ ವಾಸ್ತವಿಕ ಹಾಗೂ ಐತಿಹಾಸಿಕ ಹಿನ್ನೆಲೆಯಲ್ಲಿ ರಸವತ್ತಾದ ನಾಟಕೀಯ ಶೈಲಿಯಲ್ಲಿ ಮೂಡಿಬಂದು ಓದುಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ಇವರು ಈ ಕಾದಂಬರಿಗಳನ್ನು ಬರೆಯಲು ಒಂದು ಸಾವಿರ ಶಾಸನಗಳನ್ನು ಓದಿದ್ದರೆಂದು ತಿಳಿದುಬಂದಿದೆ. ಈ ಕಾದಂಬರಿಯನ್ನು ಓದುವಾಗ ನಾವು ಹನ್ನೆರಡನೆಯ ಶತಮಾನಕ್ಕೆ ಹೋಗಿ, ಆ ಕಾಲದ ರಾಜಕೀಯ, ರಾಜತಾಂತ್ರಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಮುಖಗಳ ಅನುಭವವನ್ನು ಸ್ವತಃ ಅನುಭವಿಸುವಂತೆ . ಭಾಸವಾಗುತ್ತೆದೆ. ಈ ಕಾದಂಬರಿಯಲ್ಲಿ ವಿನಿದೆ? ವಿನಿಲ್ಲ?ಯೆಂದು ಹೇಳುವುದರ ಬದಲು ಎಲ್ಲವೂ ಇದೆ ಎಂದು ಹೇಳಿದರೆ ಸಾಕು.