TY - BOOK AU - Kanakkur R Sureshkumar AU - AU - PARVATHI (G Aithal) ಪಾರ್ವತಿ ಜಿ ಐತಾಳ್ TI - Boudi: ಬೌದಿ SN - 9789392230974 U1 - K894.3 23 PY - 2023/// CY - Bengaluru PB - Ankita Pustaka KW - Fiction KW - ಕಾದಂಬರಿ KW - translated from Malayalam to Kannada N2 - 'ಬೌದಿ' ಕಾದಂಬರಿಯು ಮುಖ್ಯವಾಗಿ ಓದುಗರ ಗಮನ ಸೆಳೆಯುವುದು ಅದು ರವೀಂದ್ರನಾಥ ಟಾಗೋರ್ ಅವರ ಜೀವನದಲ್ಲಿ ನಡೆಯಿತೆಂದು ಹೇಳಲಾಗುವ ಒಂದು ಪ್ರೇಮ ಕಥೆಗೆ ಸಂಬಂದಿಸಿದ್ದು ಎನ್ನುವ ಕಾರಣಕ್ಕಾಗಿ. ಆದರೆ ಇದು ಹೆಣ್ಣು-ಗಂಡಿನ ನಡುವಣ ಸಂಬಂಧದಲ್ಲಿ ಎಲ್ಲರೂ ನಿರೀಕ್ಷಿಸುವಂತಹ ಒಂದು ಸಾಮಾನ್ಯ ಪ್ರಣಯ ಕಥೆಯಲ್ಲ.ಅತ್ಯಂತ ಸೂಕ್ಷ್ಮ ಮನಸ್ಸಿನ ಹೆಣ್ಣಾದ ಕಾದಂಬರಿ (ರವೀಂದ್ರನಾಥ ಟ್ಯಾಗೋರ್ ಅವರ ಅಣ್ಣನ ಹೆಂಡತಿ) ಮತ್ತು ಕವಿಹೃದಯದ ಮೃದು ಸ್ವಭಾವದ ರವೀಂದ್ರನಾಥರ ನಡುವಣ ಆತ್ಮಬಂಧವೇ ಈ ಕಾದಂಬರಿಯ ಜೀವಾಳ. ರವೀಂದ್ರನಾಥರ ಮದುವೆಯಾಗಿ ನಾಲ್ಕು ತಿಂಗಳಲ್ಲಿ ಅಗಲಿಕೆಯ ನೋವನ್ನು ಸಹಿಸಿಕೊಳ್ಳಲಾರದೆ ಕಾದಂಬರಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೃದಯ ವಿದ್ರಾವಕವಾದ ಒಂದು ದುರಂತ. ರವೀಂದ್ರನಾಥರ ಅಣ್ಣ ದೇವೇಂದ್ರನಾಥ್ ಅವರು ಜಿಲ್ಲಾಧಿಕಾರಿಯಾಗಿದ್ದ ಕಾರವಾರದ ಕಡಲತೀರದ ಸುತ್ತಮುತ್ತ ಸ್ವಾತಂತ್ಯ ಪೂರ್ವದಲ್ಲಿ ನಡೆಯುವ ಘಟನೆಗಳ ಚಿತ್ರಣವು ಹತ್ತಾರು ಹೊಸ ಕಾಲ್ಪನಿಕ ಪಾತ್ರಗಳ ಮೂಲಕ ಕಾದಂಬರಿಗೆ ಒಂದು ಸುಂದರ ಚೌಕಟ್ಟನ್ನು ಒದಗಿಸಿದೆ. ಹೃದ್ಯ ಅನುವಾದವು ಕೃತಿಯು ಕನ್ನಡದ್ದೇ ಎಂಬಷ್ಟು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ ER -