Aparadha mattu shikshe ಅಪರಾಧ ಮತ್ತು ಶಿಕ್ಷೆ
- Mysore Abhiruchi Prakashana 2024
- xix,560p. PB 24x16cm.
ಹಳ್ಳಿಯಿಂದ ಬಂದು ಸೇಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿದ್ದ ಬಡ ಹುಡುಗ ರಾಸ್ಕೋಲ್ನಿಕೋವ್, ತಾನೇ ರೂಪಿಸಿಕೊಂಡ ಬೌದ್ಧಿಕ ತತ್ವಕ್ಕೆ ಶರಣಾಗಿ, ಕೊಲೆ ಮಾಡಿ, ತಪ್ಪು, ಅಪರಾಧ, ಪಶ್ಚಾತ್ತಾಪಗಳಲ್ಲಿ ಕುದಿಯುವ ಕಥೆ ಬದುಕಿನ ದುರ್ಭರ ವಾಸ್ತವ ಮತ್ತು ವಿಚಾರಲೋಕ, ಪಶ್ಚಾತ್ತಾಪ ಮತ್ತು ಸಮರ್ಥನೆಗಳ ಘರ್ಷಣೆ, ಭೀತಿ, ಸ್ವಮರುಕ, ನಾನತ್ವಗಳ ತಿರುಗಣಿಯು ಮನುಷ್ಯರ ಅಂತರಂಗದಲ್ಲಿ ಸೃಷ್ಟಿಸುವ ಮಹಾ ನಾಟಕ ಅಪರಾಧ ಮತ್ತು ಶಿಕ್ಷೆ. ಇಲ್ಲಿ ಬರುವ ಪಾತ್ರಗಳೆಲ್ಲವೂ ಒಂದು ಇನ್ನೊಂದರ ಪ್ರತಿಬಿಂಬವಾಗುತ್ತ ಓದುಗರ ವ್ಯಕ್ತಿತ್ವಕ್ಕೂ ಕನ್ನಡಿಯಾಗುತ್ತವೆ. ಹತ್ತೊಂಬತ್ತನೆಯ ಶತಮಾನದ ರಶಿಯನ್ ನಗರದ ಬದುಕಿನ ದಟ್ಟ ವಿವರ, ಆ ಕಾಲದ ಮುಖ್ಯ ಚರ್ಚೆಗಳು, ಸ್ವಪ್ನಲೋಕ, ಬಡತನ, ಕಾನೂನು, ಮನುಷ್ಯ ಸಂಬಂಧ, ಫಿಲಾಸಫಿ, ಸೈಕಾಲಜಿ ಎಲ್ಲವೂ ಹದವಾಗಿ ಬೆರೆತ ಮಹಾ ಕೃತಿ ಅಪರಾಧ ಮತ್ತು ಶಿಕ್ಷೆ.
9788197325410
Crime and Punishment Kannada Fiction Translated English-Kannada