Sha Shettar: ಶೆಟ್ಟರ್ ಷ

Modala Sahasramanada Kannada Shasanagalu: ಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 4 - Bengaluru Abhinava 2022 - xiii,1266p.-1741p. HB 28x21cm. - 2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 4 .

‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-4’ ಕೃತಿಯು ಷ. ಶೆಟ್ಟರ್ ಅವರ 2020- ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು 910-964 ಕೃತಿಯಾಗಿದೆ. ಶಾಸನ ಪಠ್ಯವನ್ನು ಮೊದಲು ಪ್ರಕಟಿಸಿದಂತೆ ಇಲ್ಲಿಯೂ ಆಧುನಿಕ ಕನ್ನಡ ಲಿಪಿಯಲ್ಲಿ ಪ್ರಕಟಿಸಲಾಗಿದೆ. ಆದರೆ, ಕೆಲವು ಶಾಸನಗಳಿಗೆ ಮಾತ್ರ ಅಲ್ಲಿ ಒದಗಿಸಲಾಗಿದ್ದ ಪ್ರತಿಕೃತಿಯನ್ನಾಗಲೀ ಇಲ್ಲಿ ಒದಗಿಸಿಲ್ಲ. ಶಾಸನವು ದ್ವಿಭಾಷಾ ಅಥವಾ ತ್ರಿಭಾಷಾ ಬರಹಗಳಲ್ಲಿದ್ದರೆ, ಹಳಗನ್ನಡದ ಭಾಗವನ್ನು ಮಾತ್ರ ಆಯ್ದುಕೊಡಲಾಗಿದೆ, ಇನ್ನುಳಿದ ಭಾಷೆಗಳಲ್ಲಿರುವ ಪಠ್ಯಭಾಗವನ್ನಲ್ಲ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆ, ದೇಶದ ಯಾವ ಭಾಷೆಯ ಶಾಸನಾಧ್ಯಯನದಲ್ಲಿ ಈವರೆಗೂ ಮಾಡದಿರುವ ಸಾಧನೆ ಇದಾಗಿದೆ ಎನ್ನುತ್ತಾರೆ ಲೇಖಕ ಷ. ಶೆಟ್ಟರ್.
ಅಲ್ಲದೆ, ಒಂದೊಂದು ಕಾಲಘಟ್ಟದಲ್ಲಿ ಬಳಕೆಗೆ ಬಂದ ಕನ್ನಡ ಪದಗಳ ಸಮಗ್ರ ಯಾದಿಯನ್ನು ಪ್ರತಿ ಸಂಪುಟದ ಕೊನೆಯಲ್ಲಿ ಅನುಬಂಧಿಸಿ, ಅವು ಕನ್ನಡ ಮೂಲದವುಗಳೋ, ಸಂಸ್ಕೃತ ಮೂಲದವುಗಳೋ, ಮಿಶ್ರಭಾಷಾ ಪದಗಳೋ, ಎಂಬುದನ್ನು ಸೂಚಿಸಲಾಗಿದೆ. ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ.

9789392503115


Jinashasana: ಜಿನಶಾಸನ
Settar
Veeragallu: ವೀರಗಲ್ಲು
Danashasana: ದಾನಶಾಸನ
Vol 4 910-964 CE

417K / SETM