Hastinavati: Idu Bharatada Kate: ಹಸ್ತಿನಾವತಿ ಇದು ಭಾರತದ ಕಥೆ
- Bengaluru Ankita Pustaka 2023
- 400p. HB 22x15cm.
ಕರ್ಣ ಮತ್ತೆ ಹುಟ್ಟುತ್ತಾನೆ, ಕುಂತಿ ಮತ್ತೊಮ್ಮೆ ಮಗನಿಗಾಗಿ ತಪಿಸುತ್ತಾಳೆ. ಅರ್ಜುನ ಇನ್ನೊಮ್ಮೆ ತನ್ನ ಅಣ್ಣನನ್ನು ಕೊಲ್ಲುತ್ತಾನೆ. ಕೃಷ್ಣ ಎಲ್ಲವನ್ನೂ ನೋಡುತ್ತಾ ಮುಗುಳ್ಳಕ್ಕು 'ಯೋಗಕ್ಷೇಮಂ ವಹಾಮ್ಯ ಹಂ' ಅನ್ನುತ್ತಾನೆ. ಮಹಾಭಾರತ ಮರುಕಳಿಸುತ್ತದೆ. ಇದು ಭಾರತದ ಕತೆ. ಮತ್ತದೇ ಪಾತ್ರಗಳ ರಿಂಗಣ, ಮತ್ತದೇ ಮಾತುಗಳ ಅನುರಣನ, ಸೂಜಿಮೊನೆಯಷ್ಟು ಭೂಮಿಗಾಗಿ, ಸಿಂಹಾಸನಕ್ಕಾಗಿ, ಗೆಲುವಿಗಾಗಿ, ಸೇಡಿಗಾಗಿ ಅಹೋರಾತ್ರಿ ನಡೆಯುತ್ತಲೇ ಇರುತ್ತದೆ ಕದನ. ಇತಿಹಾಸ ಮರುಕಳಿಸುತ್ತದೆ. ಪುರಾಣದ ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ ಯುಗೇ' ಅಂದದ್ದು ಸುಳ್ಳಲ್ಲ, ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ. ಮನಸು ಧರ್ಮಕ್ಷೇತ್ರ, ಮನಸು ಕುರುಕ್ಷೇತ್ರ! ಮನಸ್ಸೇ ಮಹಾಭಾರತ