Rupa Hasana ರೂಪ ಹಾಸನ

Evala Bharatha: Hennodala Hadupadina Barahaguchcha ಇವಳ ಭಾರತ: ಹೆಣ್ಣೊಡಲ ಹಾಡು ಪಾಡಿನ ಬರಹಗುಚ್ಛ - Channapattana Pallava Prakashana 2023 - xxi,463p, PB 21x14cm.

ಇಷ್ಟರ ನಡುವೆಯೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿ, ಪ್ರಜಾಪ್ರಭುತ್ವದ ಸಾಕಾರಕ್ಕೆ ದಿಕ್ಕಾಗಿರುವ ಸಕಲ ಜೀವಪರವಾದ ನಮ್ಮ ಸಂವಿಧಾನ! ಅದೊಂದು ಭರವಸೆ, ಸಮಾಧಾನ, ಎಷ್ಟೇ ಕಷ್ಟವಾದರೂ ಅದೇ ದಾರಿ...! ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಹಾದಿಯ ನಡೆ ಕಠಿಣ. ಆದರೆ ಸಂವಿಧಾನದ ಗುರಿ ಮುಟ್ಟುವ ಹಾದಿ ಕಠೋರ! ಕಷ್ಟವಾದರೂ ಹೊರಗಿನ ಶತ್ರುಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಒದ್ದೋಡಿಸಬಹುದು. ಆದರೆ ಒಳಗಿನ ನಮ್ಮವರೆನಿಸಿಕೊಂಡವರೊಡನೆ?- ಆಂತರಿಕ ಹೋರಾಟ ಅತ್ಯಂತ ಯಾತನಾದಾಯಕ, ಸೂಕ್ಷ್ಮ ಮತ್ತು ಕ್ಲಿಷ್ಟಕರ. ಹೀಗೆಂದೇ ಈ ಗುರಿ ಸೇರಲು ಮತ್ತೆ ಮತ್ತೆ ರಚನಾತ್ಮಕ, ಕ್ರಿಯಾಶೀಲ ನಡೆಗಳನ್ನು ನಾವು ಕಲಿಯುತ್ತಾ ಸಾಗಬೇಕಿದೆಯಷ್ಟೇ. ಆ ಪ್ರಯತ್ನದ ಅಣುವಿನಷ್ಟು ಭಾಗವಾಗಿ, 'ಇವಳ ಭಾರತ'ದಲ್ಲಿ ನಾನೂ ಒಂದು ಪುಟ್ಟ ಕಣವಾಗಿ, ನನ್ನ ಬದುಕು 'ಇವಳ ಭಾರತ'ದಲ್ಲಿ ಕರಗಿ ಒಂದಾಗಿ ಹೋದ ಕಥೆಯ, ಹೆಣ್ಣೂಡಲ ಹಾಡು ಪಾಡಿನ ಬಿಡಿ ಬಿಡಿ ತುಣುಕುಗಳು, ಚಿತ್ರಗಳೇ 'ಇವಳ ಭಾರತ! - ರೂಪ ಹಾಸನ

9788195590322


Kannada Prose: ಕನ್ನಡ ಗದ್ಯ
Collection of Articles: ಕನ್ನಡ ಅಂಕಣ ಬರಹಗಳು

K894.4 / RUPE