Santasa Nannedeya Haadu Hakki: ಸಂತಸ ನನ್ನೆದೆಯ ಹಾಡು ಹಕ್ಕಿ
- Bengaluru Navakarntaka Publications 2022
- 264p. PB 21x14cm.
- Baduku Badalisabahudu Ankana Sankalana: ಬದುಕು ಬದಲಿಸಬಹುದು ಅಂಕಣ ಸಂಕಲನ 4 .
ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲವೆ. ಸಂತಸ, ನನ್ನೆದೆಯ ಹಾಡು ಹಕ್ಕಿ "ಬದುಕು ಬದಲಿಸಬಹುದು" ಸರಣಿಯ ನಾಲ್ಕನೇ ಬುಕ್. ಇಡೀ ಪುಸ್ತಕ ಆಸಕ್ತಿದಾಯಕ ಮತ್ತು ಸಂಗ್ರಹಯೋಗ್ಯ ಮಾಹಿತಿಗಳಿಂದ ತುಂಬಿದೆ. ಇರುವ ಮೂವತ್ತೊಂದು ಶೀರ್ಷಿಕೆಗಳಲ್ಲಿ 6-7 ಬರಹಗಳು ಕ್ಯಾನ್ಸರ್ ಸರ್ವೈವರ್ಸ್, ಮಿಸ್ ಡಯಾಗ್ನೋಸಿಸ್, ಪರ್ಯಾಯ ಚಿಕಿತ್ಸೆ, ಆಹಾರ ಮತ್ತು ಜೀವನ ಕ್ರಮ ಹೀಗೆ ಕ್ಯಾನ್ಸರ್ ಸುತ್ತಲೇ ಇವೆ. ನಾಲ್ಕು ಬರಹಗಳು ಹಾಲೊಕಾಸ್ಟಿಗೆ ಸಾಕ್ಷಿಯಾಗಿರುವ ಜರ್ಮನ್ ಸ್ಥಳಗಳು ಅಲ್ಲಿನ ಹಿಂದಿನ ಮತ್ತು ಈಗಿನ ಸ್ವರೂಪಗಳ ಕುರಿತು ಹಾಗೂ ಮಿಕ್ಕವು ಅಪರೂಪದ ವಿಶಿಷ್ಟ ವ್ಯಕ್ತಿಪರಿಚಯ, ಸಹಜ ಕೃಷಿ, ಸರೋಗೆಸಿ, ಪರಿಸರ ಕಾಳಜಿ, ವ್ಯಕ್ತಿತ್ವ ವಿಕಸನ ಇತ್ಯಾದಿ ಯಾದೃಚ್ಛಿಕ ಜೀವನಪ್ರೀತಿಯ ಸ್ಪೂರ್ತಿದಾಯಕ ಬರಹಗಳ ಗುಚ್ಛವೇ ಇಲ್ಲಿದೆ.
9789389308501
Kannada Prose: ಕನ್ನಡ ಗದ್ಯ Kannada Literature: ಕನ್ನಡ ಸಾಹಿತ್ಯ Motivating Kannada Articles: ಸ್ಪೂರ್ತಿದಾಯಕ ಬರಹಗಳು