Urmila Pawar: ಊರ್ಮಿಳಾ ಪವಾರ್ Meenakshi Moon: ಮೀನಾಕ್ಷಿ ಮೂನ್

Navu itihasa kattideveu: Ambedkar chaluvaliyalli mahileyaru ನಾವೂ ಇತಿಹಾಸ ಕಟ್ಟಿದೆವು: ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು - Bengaluru Kavi Prakashana 2022 - x,421p. HB 22x15cm.

ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಅವರು ಮರಾಠಿಯಲ್ಲಿ ಬರೆದ 'ಆಮ್ಹಿಹಿ ಇತಿಹಾಸ್ ಘಡವಲಾ' ಕೃತಿಯನ್ನು ವಂದನಾ ಸೋನಾಲ್ಕರ್ ಇಂಗ್ಲಿಷ್ ಅನುವಾದ ಮಾಡಿದ್ದಾರೆ. ಕನ್ನಡಕ್ಕೆ ದು. ಸರಸ್ವತಿ ಅವರು ಅನುವಾದಿಸಿದ್ದು ನಾವೂ ಇತಿಹಾಸ ಕಟ್ಟಿದೆವು (ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು) ಎಂಬ ಶೀರ್ಷಿಕೆಯನ್ನಿತ್ತಿದ್ದಾರೆ. ಬೆನ್ನುಡಿಯಲ್ಲಿ -ಊರ್ಮಿಳಾ ಪವಾರ್, ಮೀನಾಕ್ಷಿ ಮೂನ್ ಮಾತುಗಳಿದ್ದು, ಮಹಾಡ್ ಸತ್ಯಾಗ್ರಹ ನಡೆದ 1927ರಿಂದ ಧರ್ಮಾಂತರ ನಡೆದ 1956ರವರೆಗಿನ ಅವಧಿಯನ್ನು “ಬಾಬಾಸಾಹೇಬರ ನೇತೃತ್ವದಲ್ಲಿ ನಡೆದ ಅಂಬೇಡ್ಕರ್ ಚಳವಳಿ” ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಮಹಿಳೆಯರು ಮಾಡಿದ ಕೆಲಸವನ್ನು ನಾವು ಶೋಧಿಸಬೇಕಿತ್ತು. ಇದಕ್ಕಾಗಿ ಪುಸ್ತಕಗಳು, ಲೇಖನಗಳು, ಬಾಬಾಸಾಹೇಬರ ಜೀವನಚರಿತ್ರೆ, ಅವರ ಪತ್ರಗಳು, ಭಾಷಣಗಳು ಹಾಗೂ ಹಲವರು ಅಂಬೇಡ್ಕರ್ ಚಳವಳಿ ಕುರಿತು ಬರೆದ ಸಾಹಿತ್ಯವನ್ನು ಓದಿಕೊಂಡಿದ್ದೆವು. ಅಲ್ಲಿ ಮಹಿಳೆಯರ ಭಾಗವಹಿಸುವಿಕಯ ಬಹುಪಾಲನ್ನು ನಗಣ್ಯ ಮಾಡಲಾಗಿತ್ತು. 1921ರಿಂದ 1956ರವರೆಗಿನ ಅವಧಿಯ ಅಸ್ಪಶ್ಯರ ಸಂಖ್ಯೆ, ಅವರಲ್ಲಿ ಮಹಿಳೆಯರ ಸಂಖ್ಯೆ, ಅಸ್ಪೃಶ್ಯ ವಿಧವೆಯರ ಪ್ರಮಾಣ, ವೇಶೈಯರ ಸಂಖ್ಯೆ, ಬೌದ್ಧಮತಕ್ಕೆ ಮತಾಂತರವಾದವರ ಸಂಖ್ಯೆ ಕುರಿತ ಸತ್ಯಾಂಶಗಳನ್ನು ಪಡೆದುಕೊಂಡೆವು. ಅಸ್ಪೃಶ್ಯರ ಸಭೆಗಳಲ್ಲಿ ಹಂಚಲಾದ ಕರಪತ್ರಗಳನ್ನು ನೋಡಿದೆವು. ವ್ಯಕ್ತಿಗಳನ್ನು ಭೇಟಿಮಾಡಿ ವಿಳಾಸ ಪಡೆದುಕೊಂಡೆವು. ತೀರಿಹೋಗಿದ್ದ ಮಹಿಳೆಯರ ಸಂಬಂಧಿಗಳನ್ನು ಭೇಟಿಮಾಡಿ ಮಾಹಿತಿ ಸಂಗ್ರಹಿಸಿದೆವು. ಸಾಧ್ಯವಾದ ಆಕರಗಳೆಲ್ಲದರಿಂದಲೂ ಚಳವಳಿಯಲ್ಲಿದ್ದ ಮಹಿಳೆಯರ ಮಾಹಿತಿಯನ್ನು ಪಡೆಯಲೆತ್ನಿಸಿದೆವು. ನಗಣ್ಯ ಮಾಡಲಾಗಿದ್ದ, ಸದಾಭಿಪ್ರಾಯವಿಲ್ಲದ ಅಂಬೇಡ್ಕರ್ ಚಳವಳಿಯ ಮಹಿಳಾ ಕಾರ್ಯಕರ್ತರ ಚಿತ್ರಣವನ್ನು ರೂಪಿಸುವುದು, ಚಳವಳಿಯಲ್ಲಿ ಭಾಗಿಯಾಗಿದ್ದ ಅವಳ ಸಾಮರ್ಥ್ಯ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅವಳು ಕಟ್ಟಿದ ಇತಿಹಾಸ, ಆ ಇತಿಹಾಸದಿಂದಾಗಿ ಅವಳ ಬದುಕಿನಲ್ಲಿ ಆದ ಬದಲಾವಣಿ, ಹೇಗೆ ಅವಳು ರೂಪುಗೊಂಡಳು, ಪ್ರಭಾವಿತಳಾದಳು, ಶಿಕ್ಷಣಕ್ಕೆ ಹಾತೊರೆದಳು ಮತ್ತು ಶಿಕ್ಷಣ ಕುರಿತ ಆಕೆಯ ಆಳವಾದ ಭಾವನೆ, ನೈತಿಕ ದೃಢತೆ, ಧೈರ್ಯ, ವ್ಯಕ್ತಿಯಾಗಿ ಬೆಳವಣಿಗೆಯನ್ನು ಕಂಡುಕೊಂಡದ್ದು, ಅವಳ ಕೊಡುಗೆಯನ್ನು ಸಾರ್ವಜನಿಕರ ಗಮನಕ್ಕೆ ತರುವುದು ನಮ್ಮ ಅಧ್ಯಯನದ ಉದ್ದೇಶವಾಗಿತ್ತು ಎಂದಿದ್ದಾರೆ.

9788193189399


Interviews and Life Sketch: ಸಂದರ್ಶನಗಳು ಮತ್ತು ಜೀವನ ಚಿತ್ರಣಗಳು
Dalita Mahile: ದಲಿತ ಮಹಿಳೆ

305.4K / PAVN