ANANTARAMU (T R) Ed ಅನಂತರಾಮು (ಟಿ ಆರ್)

Vijnanada Heddariyalli Mahatiruvugalu ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು - Bengaluru Navakarnataka Publications 2017 - 568

ಜ್ಞಾನ-ತಂತ್ರಜ್ಞಾನಗಳು ಹಲವು ಶತಮಾನಗಳಿಂದ ಸಾಗಿಬಂದಿರುವ ಹಾದಿಯಲ್ಲಿ ದಾಟಿರುವ ಮೈಲಿಗಲ್ಲುಗಳು ಹಲವು. ಇಂತಹ ಪ್ರತಿಯೊಂದು ಮೈಲಿಗಲ್ಲನ್ನು ದಾಟಿದಾಗಲೂ ಮನುಷ್ಯನ ಬದುಕಿನ ಮೇಲೆ ವಿಜ್ಞಾನದ, ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಲೇ ಹೋಗಿದೆ. ಇದು ವಿಜ್ಞಾನದ ಯುಗ.
ಅಂದಹಾಗೆ ಈ ಪ್ರಯಾಣದಲ್ಲಿ ಎದುರಾದವು ಬರಿಯ ಮೈಲಿಗಲ್ಲುಗಳಷ್ಟೇ ಅಲ್ಲ, ಕೆಲ ಬೆಳವಣಿಗೆಗಳಿಂದಾಗಿ ಮಹಾತಿರುವುಗಳೂ ಸೃಷ್ಟಿಯಾಗಿವೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳಿಂದ ಪ್ರಾರಂಭಿಸಿ ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನಗಳವರೆಗೆ ವಿಜ್ಞಾನ- ತಂತ್ರಜ್ಞಾನದ ಎಲ್ಲ ಶಾಖೆಗಳೂ ಇಂತಹ ಮಹಾತಿರುವುಗಳನ್ನು ಕಂಡಿವೆ. ಒಂದೊಂದೂ ವಟವೃಕ್ಷವಾಗಿ ಬೆಳೆದಿವೆ.
ವಿಜ್ಞಾನದ ಹೆದ್ದಾರಿಯ ಪಥ ಬದಲಿಸಿದ ಇಂತಹ ಅನೇಕ ಮಹಾತಿರುವುಗಳನ್ನು ಕನ್ನಡದಲ್ಲಿ ಪರಿಚಯಿಸುವ ವಿಶಿಷ್ಟ ಕೃತಿ "ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು". ವಿಜ್ಞಾನ ಕ್ಷೇತ್ರದಲ್ಲಿ ಕನ್ನಡದಲ್ಲಿ ಲೇಖನಗಳನ್ನು ಬರೆಯುವ 26 ಬರಹಗಾರರು, ವಿದ್ವಾಂಸರು ತಮ್ಮ ಸ್ವಅನುಭವಗಳನ್ನು ಆಧರಿಸಿ ಬರೆದಿರುವ ಲೇಖನಗಳನ್ನು ಕೃತಿ ಒಳಗೊಂಡಿದೆ.


8184677138

509K ANAV