DURRANI (Tehamina) ತೆಹಮಿನಾ ದುರ್ರಾನಿ

Arane hendatiya atmakathe ಆರನೆಯ ಹೆಂಡತಿಯ ಆತ್ಮಕಥೆ - Bengaluru Srashti Pablikeshans. 2013 - xiii,593

ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಅನುಭವ ಹಾಗೂ ಆಯಾಮವನ್ನು ತೆರೆದಿಡುವ ಸಾಮರ್ಥ್ಯ ಹೊಂದಿರುವ ಇದು ತೆಹಮಿನಾ ದುರ್‍ರಾನಿಯ ಆತ್ಮಚರಿತ್ರೆಯೂ ಹೌದು. ಅವಳು ಸಕ್ರಿಯವಾಗಿ ತೊಡಗಿಕೊಂಡಿದ್ದ ಪಾಕಿಸ್ತಾನಿ ರಾಜಕಾರಣದ ದಾಖಲೆಯೂ ಆಗಿದ್ದಾಳೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಪಡುವ ಪಾಡು, ದಾಂಪತ್ಯದ ಪರಿಧಿಯೊಳಗೇ ಎದುರಿಸಬೇಕಾದ ಸಮಸ್ಯೆ, ಸವಾಲುಗಳು, ಕೊನೆಗೆ ಗೆದ್ದರೂ ಗೆಲುವಿನಲ್ಲಿಯೂ ಸೋಲಿನ ಅನುಭವ-ಮುಂತಾದ ಸಂಗತಿಗಳನ್ನು ತೆಹಮಿನಾ ದುರ್‍ರಾನಿ ಸಮರ್ಥವಾಗಿ ಗ್ರಹಿಸಿದ್ದಾರೆ.

’ಆರನೇ ಹೆಂಡತಿಯ ಆತ್ಮಚರಿತ್ರೆ’ ಈಗಾಗಲೇ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಕನ್ನಡಕ್ಕೆ ಅನುವಾದಕ, ಲೇಖಕರಾದ ರಾಹು ಅವರು ತಂದಿದ್ದಾರೆ.

ಪುರುಷ ಲೋಕತ ಪಾಶವೀತನವನ್ನು ನಿರ್ಭಿಡೆಯಿಂದ ಬಿಚ್ಚಿಡುವ ದುರ್ರಾನಿಯವರ ಆತ್ಮಚರಿತ್ರೆ, ಆರನೆಯ ಹೆಂಡತಿಯ ಆತ್ಮಕಥೆ ಈಗಾಗಲೇ ಅನೇಕ ಭಾಷೆಗಳಿಗೆ ಅನುವಾದಗೊಂಡು ಕೋಟ್ಯಾಂತರ ಪ್ರತಿಗಳು ಮಾರಾಟವಾಗಿರುವ ಕೃತಿ. ಒಂದು ಅರ್ಥದಲ್ಲಿ ಪಾಕಿಸ್ತಾನದ ಪ್ರತಿಯೊಬ್ಬರ ಮನೆಯ ಮಾತಾಗಿರುವ ಕೃತಿ. ತನ್ನ ಪತಿ ಮುಸ್ತಾಫಾಖಾರ್‌ನ ಐದು ಜನ ಹೆಂಡಂದಿರು ಅವನೆಲ್ಲಾ ರಕ್ಕಸತನವನ್ನು ಸಹಿಸಿ ಮೌನದಿಂದಲೇ ನಿರ್ಗಮಿಸಿದರೆ , ಅವನ ಆರನೇ ಹೆಂಡತಿಯಾಗಿದ್ದ ತೆಹಮಿನಾ ದುರ್ರಾನಿ ಕೊನೆಗೂ ಶಕ್ತಿ ಸಂಚಯಿಸಿಕೊಂಡು, ಧೈರ್ಯಸಮನಿಸಿಕೊಂಡು ಹೊಟ್ಟೆ ಬಿಚ್ಚಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ- ತಾನು ಮಾಡಿದ ಪಾಪ, ಮೋಸ ಹಾಗೂ ಧೀಮಂತಿಕೆಯ ಹೋರಾಟದ ಜೊತೆಗೆ ತನ್ನ ಪತಿ ಹಾಗೂ ತಾಯಿತ ಅಸಹಜ್ಯ, ಅಮಾನವೀಯ ನಡವಳಿಕೆಗಳಿಗೆ ಬೆಲ್ಜಿಯಮ್ ಕನ್ನಡಿ ಹಿಡಿದಿದ್ದಾಳೆ. ಹಾಗಾಗಿ ಇದು ಸ್ವ-ಸಮರ್ಥನೆಗಾಗಿ ಮಾತ್ರ ರಚಿಸಿದ ಕೃತಿಯಲ್ಲ. ಕೃತಿಯುದ್ದಕ್ಕೂ ಇತರರ ಬಗೆಗಿನ ಕಹಿ ಸತ್ಯಗಳನ್ನು ಬರೆದಷ್ಟೇ ನಿಷ್ಠುರವಾಗಿ, ಸತ್ಯ ನಿಷ್ಠಳಾಗಿ ತನ್ನ ಚ್ಯುತಿ ನ್ಯೂನತೆಗಳನ್ನು ಕೂಡಾ ದಾಖಲಿಸಿದ್ದಾಳೆ. ಹಾಗಾಗಿ ಇದು ಕನ್ನಡ ಲೋಕಕ್ಕೆಂತೋ ಅಂತೆಯೇ ಭಾರತೀಯ ಭಾಷೆಗಳ ಸಾಹಿತ್ಯ ಲೋಕದಲ್ಲಿಯೂ ಒಂದು ಅನನ್ಯ ಕೃತಿ ಎನಿಸದಿರಲಾರದು. ಇದರ ಓದು ಲಕ್ಷಾಂತರ ಮಹಿಳೆಯರ ಬಾಳಿಗೆ ಹೊಸ ಬೆಳಕು ನೀಡಬಲ್ಲದೆಂಬ ವಿಶ್ವಾಸ ನಮಗಿದೆ. ಆದ್ದರಿಂದಲೇ ಇದನ್ನು ಕನ್ನಡಿಗರ ಕೈಗೆ ಕೊಡುತ್ತಿದ್ದೇವೆ.


9789381244272


My Feudal Lord by Tehamina Durrani Translation in Kannada

920.72K DURA