ಗಾಂಧೀ ಗಿಡ -ಕವಿ ಸತೀಶ್ ಕುಲಕರ್ಣಿ ಅವರ ಕವನ ಸಂಕಲನ. ಕಥಾವಸ್ತು, ಶೈಲಿಯೊಂದಿಗೆ ಕಂಗೊಳಿಸುತ್ತವೆ ಇಲ್ಲಿಯ ಒಟ್ಟು 26 ಕವಿತೆಗಳಿವೆ. ಸಾಹಿತಿ ಡಾ. ಪ್ರಹ್ಲಾದ ಅಗಸನಕಟ್ಟೆ ಮುನ್ನುಡಿ ಬರೆದಿದ್ದಾರೆ. ಕಾದಂಬರಿಕಾರ್ತಿ ವೈದೇಹಿ ಅವರು ಬರೆದ ಬೆನ್ನುಡಿಯಲ್ಲಿ ‘ಮೃದುವಾಗಿಯೇ ಹೇಳಿಬಿಡಬಲ್ಲ ಅಪರೂಪದ ಶಕ್ತಿ ಇವರ ಕಾವ್ಯಕ್ಕಿದೆ. ಕವಿಯ ಅನುಭವಗಳು ಇಲ್ಲಿ ನುಡಿ ಜೀವ ಪಡೆದು ಕಾವ್ಯವಾಗಿವೆ. ಇಲ್ಲಿಯ ಕವನಗಳು ಕ್ರಾಂತಿಯಂತೆ ಜೀವಂತವಾಗಿವೆ’ ಎಂದು ಪ್ರಶಂಸಿಸಿದ್ದಾರೆ.