SATYANARAYANARAV ANATI. ನಾರಾಯಣರಾವ್ ಅಣತಿ

Jetavana mattu bhumi hunnime hadu. ಜೇತವನ ಮತ್ತು ಭೂಮಿ ಹುಣ್ಣಿಮೆ ಹಾಡು - Dharavada Manohara Granthamala 1996 - xii,104

ಲೇಖಕ ನಾರಾಯಣರಾವ್ ಅಣತಿ ಅವರ ನಾಟಕ ಕೃತಿ ‘ಜೇತವನ ಮತ್ತು ಭೂಮಿ ಹುಣ್ಣಿಮೆ ಹಾಡು’. ಕೃತಿಗೆ ಬೆನ್ನುಡಿ ಬರೆದ, ಎ. ಆರ್. ನಾಗಭೂಷಣ, ‘ಕವಿ ಮತ್ತು ನಾಟಕಕಾರರಾಗಿ ಅಣತಿಯವರು ನಿರಂತರವಾಗಿ ಮಾಗುತ್ತಿರುವುದಕ್ಕೆ 'ಜೇತವನ' ಮತ್ತು 'ಭೂಮಿ ಹುಣ್ಣಿಮೆ ಹಾಡು' ನಾಟಕಗಳು ಸಾಕ್ಷಿಯಾಗಿವೆ. ಜೀವನ ಪ್ರೀತಿ. ಅಂತ:ಕರಣಪೂರಿತ ಮನುಷ್ಯ ಸಂಬಂಧಗಳು ಮತ್ತು ಸಮಾನತೆ ಆಧಾರದ ಮೇಲೆ ನಿಲ್ಲುವ ಸಮಾಜವನ್ನು ಅಪೇಕ್ಷಿಸುವ ನೋಟಗಳು ಇವುಗಳಲ್ಲಿವೆ. ಬುದ್ದನ ಜೀವನದರ್ಶನ ಹಿನ್ನೆಲೆಯಿರುವ 'ಜೇತವನ’ ಸ್ವಾರ್ಥ ರಾಜಕಾರಣದ ಸೋಲನ್ನು, ಪ್ರಭುತ್ವದ ಕೌರ್ಯದಲ್ಲಿ ಪ್ರೀತಿ ಅನುಕಂಪ ನಲುಗುವುದನ್ನು ತೋರಿಸುವ ನಾಟಕ ತೀವ್ರಗತಿಯಲ್ಲಿ ಸಾಗಿದರೂ ಅವಸರದ ನಿರ್ಣಯಗಳನ್ನು ಮಂಡಿಸುವುದಿಲ್ಲ. ಬದಲಾಗಿ, ಗಾಢವಾದ ವಿಷಾದವನ್ನು ಪ್ರಕಟಿಸುತ್ತದೆ. 'ಭೂಮಿ ಹುಣ್ಣಿಮೆ ಹಾಡು' ನಮ್ಮ ದೇಶದ ಹೋರಾಟದ ಪರಂಪರೆಯಲ್ಲಿ ಒಂದು ಜಲಚಿಹ್ನೆಯಾಗಿರುವ ಕಾಗೋಡು ಚಳವಳಿಯ ಸರಳ ನಾಟಕ ರೂಪ, ಜಡಗೊಂಡ ಸಮಾಜದ ಚಲನೆ ಸಾಧ್ಯವಾಗುವುದು ಶ್ರಮಜೀವಿಗಳಿಂದ ಮಾತ್ರ ಎಂಬ ನಿಲುವು: ಮಧ್ಯಮ ವರ್ಗದ ಬುದ್ದಿ ಜೀವಿಗಳ ದೌರ್ಬಲ್ಯಗಳು ಹಾಗೂ ಉಳ್ಳವರ ಕ್ರೌರ್ಯ ಇವುಗಳನ್ನು ಸಮಗ್ರವಾಗಿ ಕಾಣಿಸುತ್ತದೆ. ವಸ್ತುವಿನ ಸೂಕ್ಷ್ಮ ನಿರ್ವಹಣೆ ಮತ್ತು ರಂಗಪ್ರಜ್ಞೆ ಎಂಡೂ ಸಮರ್ಪಕವಾಗಿ ಬೆಸದುಕೊಂಡಿರುವ ಸಂವೇದನಾಶೀಲ ನಾಟಕಗಳಾಗಿವೆ.’ ಎಂದು ಪ್ರಶಂಸಿದ್ದಾರೆ.

K894.2 SATJ