ಮಾನುಷಿಯ ಮಾತು- ಭಾರತದ ಪ್ರಮುಖ ಸ್ತ್ರೀವಾದಿ ಚಿಂತಕಿಯಾದ ಮಧುಕೀಶ್ವರ್ ಅವರ ಲೇಖನಗಳ ಅನುವಾದ ಕೃತಿ. ಮಾನುಷಿ ಎಂಬ ಪತ್ರಿಕೆ ಮತ್ತು ಅದೇ ಹೆಸರಿನ ಸಂಸ್ಥೆಯನ್ನು ಆರಂಭಿಸಿ ಸ್ತ್ರೀವಾದಕ್ಕೆ ಪ್ರಬಲವಾದ ಧ್ವನಿಯನ್ನು ತಂದುಕೊಟ್ಟರಲ್ಲದೇ ಪಶ್ಚಿಮದಲ್ಲಿ ರೂಪುಗೊಂಡ ಸ್ತ್ರೀವಾದದ ಪರಿಕಲ್ಪನೆಗಳಿಗಿಂತ ಭಿನ್ನವಾಗಿ ಭಾರತದ ಚಿಂತನಾಕ್ರಮಗಳ ಮೂಲಕವೇ ಇದನ್ನು ಅರ್ಥೈಸುವ ಪ್ರಯತ್ನವನ್ನೂ ನಡೆಸಿದ್ದಾರೆ. ಅವರ ಕೆಲವು ಲೇಖನಗಳನ್ನು ಎಲ್.ಜಿ ಮೀರಾ ಕನ್ನಡೀಕರಿಸಿದ್ದಾರೆ.