Chitramaya Dakshina Kannada andu-indu ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
Material type:
- 954.871K SHID
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | 954.871K SHID (Browse shelf(Opens below)) | Restricted Book | 045385 |
ಮುನ್ನುಡಿ:
ಚಿಕ್ಕಂದಿನಲ್ಲಿ "ಭೂಗೋಲವೆಂದರೆ ನಮಗೆಲ್ಲ ಕಂಡುಬರುತ್ತಿದ್ದ ಜಿಗುಪ್ಪೆಯೇ ನನ್ನನ್ನು ಈ ನವೀನ ಹಾದಿಗೆ ತಳ್ಳಿದೆ. ಇದು ನವೀನವೆಂದರೆ ನಮಗೆ ಮಾತ್ರ. ಯುರೋಪು, ಅಮೇರಿಕ ಮೊದಲಾದ ಮು೦ದುವರಿದ ದೇಶಗಳಲ್ಲಿ ಪಠ್ಯ ಪುಸ್ತಕಗಳೆಂದರೆ ತು೦ಬ ರಸವತ್ತಾಗಿರುವುವು. ಅದರಲ್ಲೂ ಭೂಗೋಲವೆಂದರೆ-ಕಾದಂಬರಿಯನ್ನು ಓದಿ ದ೦ತೆ. ಆದರೆ, ನಮ್ಮ ದೇಶದಲ್ಲಿ ಭೂಗೋಲವೆಂದರೆ-ಹೆಸರು, ಸಂಖ್ಯೆಗಳಿಂದ ತು೦ಬಿದ ಒಂದು ಸಹಸ್ರ ನಾಮಾವಳಿ. ಚಿಕ್ಕ ಮಕ್ಕಳಿಗೆ ಅದರಲ್ಲಿ ಮಮತೆಯುಂಟಾಗುವುದೆಂತು?
ಚಿಕ್ಕಮಕ್ಕಳ ಮನಸ್ಸನ್ನು ಸೆಳೆಯುವಂತಹ ಕಥಾನಕವಾಗಿ ಬರವಣಿಗೆಯಿರ ಬೇಕೆ0ದು ನನ್ನ ಆಸೆ. ಅದನ್ನಿಲ್ಲಿ ಯತ್ನಿಸಿರುತ್ತೇನೆ. ಅದರ ಜತೆಯಲ್ಲಿ ಈಗಿನ ಮುದ್ರಣ ದಲ್ಲಿನ ನವೀನ ಸಾಹಸವನ್ನು ಬಳಸಿಕೊಳ್ಳಬೇಕು. ಚಿತ್ರಗಳೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಅ೦ಥಾ ಚಿತ್ರಗಳನ್ನು ಕೆಡಿಸದೆ ಮುದ್ರಿಸುವುದೂ ಕಷ್ಟದ ಕೆಲಸ. ಸಾವಿರಾರು ರೂಪಾಯಿಗಳ ವೆಚ್ಚದಿಂದ ಇಲ್ಲಿನ ಚಿತ್ರಗಳನ್ನು ಜರ್ಮನಿಯಲ್ಲಿ ಫೋಟೋಗ್ರವ್ಯೂರು ವಿಧಾನದಿಂದ ಮುದ್ರಿಸಿ ಒದಗಿಸಿದೆ. ಅವನ್ನು ಸ೦ಗ್ರಹಿಸುವಾಗಲೂ - ಅವು ಮಕ್ಕಳಿಗೆ ಭೂಗೋಲದ ಶಿಕ್ಷಣವನ್ನು ತನ್ನಂತ ಕೊಡ ಬೇಕೆಂದು ಯತ್ನಿಸಿದ್ದೇನೆ. ಬೆಟ್ಟಗಳು ನದಿಗಳು, ಅವುಗಳು ಹರಿಯುವ ಬಗೆ ನಮ್ಮಲ್ಲಿನ ಪ್ರಾಣಿವರ್ಗ ಜಾತಿ ಮತಗಳು ಕೃಷಿ, ಕೈಗಾರಿಕೆಗಳು ವ್ಯಾಪಾರಕ್ಕೆ ಅವಶ್ಯವಾದ ಹಾದಿ, ಬ೦ಡಿಗಳು ನಮ್ಮ ಸಮಾಜದ ವಿನೋದ, ವಿಶ್ರಾಂತಿಗಳು ಐತಿಹಾಸಿಕ ಸ್ಥಳಗಳು ರಾಜಕೀಯ ವಿಭಾಗಗಳು ಇವೆಲ್ಲ ಕ್ರಮವಾಗಿ ಬರುವಂತೆ ಚಿತ್ರಮಾಲಿಕೆಯಿದೆ. ಉಪಾಧ್ಯಾಯರು ಬರೇ ಅವನ್ನೇ ಬಣ್ಣಿಸಿದರೂ, ಭೂಗೋಲ ಕಲಿಸಿದ೦ತಾಗುವುದು. ಈ ಕೆಲಸವನ್ನು ಸ್ವಲ್ಪಮಟ್ಟಿಗೆ ಗದ್ಯ ಭಾಗವೂ ಮಾಡುತ್ತದೆ.
ಇದರಲ್ಲಿ ಸೇರಿಸಿದ ನಕ್ಷೆಗಳು ಹೊಸ ಹಾದಿಯಲ್ಲಿ ಬರೆಯಲ್ಪಟ್ಟಿವೆ. ಈ ಪುಸ್ತಕದ ಕು೦ದು ಕೊರತೆಗಳನ್ನು ತೋರಿಸಲು ನೆರವಾದ ಕೆಲವು ಹಳ್ಳಿಯ ಉಪಾಧ್ಯಾಯ ರಿಗೂ, ಗೆಳೆಯರಿಗೂ, ಕೆಲವು ವನ್ಯಮೃಗಗಳ ಚಿತ್ರಸಂಗ್ರಹಕ್ಕೆ ನೆರವಾದ ಮೈಸೂರು ಮೃಗಾಲಯದ ಅಧಿಕಾರಿಗಳಿಗೂ ನಾನು ಋಣಿಯು.
(ಮ೦ಗಳೂರು, 21-12-1933. ಶಿವರಾಮ ಕಾರಂತ)
There are no comments on this title.