Local cover image
Local cover image
Image from Google Jackets

Tamas ತಮಸ್

By: Contributor(s): Material type: TextTextLanguage: Kannada Publication details: Bengaluru Navakarnataka Prakashana 1988Description: xii,302Subject(s): DDC classification:
  • K894.3 BHIT
Summary: ಹಿಂದಿ ಭಾಷೆಯ ಪ್ರಖ್ಯಾತ ಲೇಖಕರಾದ ಭೀಷ್ಮ ಸಾಹನಿ ಅವರ ಅನನ್ಯ ಕಾದಂಬರಿ ‘ತಮಸ್’. ವಿಶ್ವದ ಅನೇಕ ಪ್ರಮುಖ ಭಾಷೆಗಳಿಗೆ ಅನುವಾದಗೊಂಡ ಈ ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಸಮಾಜ ಧರ್ಮಾಂಧತೆಯ ವಿಷಚಕ್ರದೊಳಗೆ ಸಿಲುಕಿ ನರಳುತ್ತಿರುವ ಇಂದಿನ ದಿನಮಾನಗಳಲ್ಲಿ ಈ ಕಾದಂಬರಿ ಪ್ರಸ್ತುತವಾಗಿದೆ. ಹಿಂದೂ-ಮುಸ್ಲಿಂ ಕೋಮುಗಲಭೆಯಂತ ಸೂಕ್ಷ್ಮ ಮತ್ತು ಅಪಾಯಕಾರಿ ವಿಷಯವನ್ನು ಕಾದಂಬರಿಯನ್ನಾಗಿಸಿ ಈ ಅನುಪಮ ಕಲಾಕೃತಿಯನ್ನು ಎಲ್ಲೂ ಧಕ್ಕೆ ಬರದಂತೆ, ಅಂದರೆ ಯಾವುದೇ ಧರ್ಮಕ್ಕೆ ನೋವಾಗದಂತೆ ಸಂಯಮಪೂರ್ಣತೆಯಿಂದ ನಿರೂಪಿಸಿದ್ದಾರೆ. ಈ ಕಾದಂಬರಿಯಲ್ಲಿ ಕಥಾನಾಯಕನಿಲ್ಲ, ಕಥಾನಾಯಕಿಯೂ ಇಲ್ಲ. ಇಲ್ಲಿ ನಡೆಯುವ ಘಟನೆಗಳು, ಅಸಂಖ್ಯಾತ ಪಾತ್ರಧಾರಿಗಳು ಎಲ್ಲರೂ ನಾಯಕರೇ. ಕುವೆಂಪು ಅವರ ಮಾತಿನಂತೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ.” ಕೆಲವೇ ಮಂದಿ ಕಿಡಿಗೇಡಿಗಳಿಂದಾಗಿ ಜನರ ಅನ್ಯೋನ್ಯ ಸಂಬಂಧಗಳು ಕಡಿದುಬಿದ್ದು ಕೋಮುಗಲಭೆಗಳು ಹರಡುತ್ತವೆ ಎಂಬುದನ್ನು ತಿಳಿಸುವದರೊಂದಿಗೆ ಯಾವುದೇ ಅಹಿತಕರ ಘಟನೆಗಳು ಜರುಗಿದಾಗ ಅಥವಾ ಭಿನ್ನಾಭಿಪ್ರಾಯಗಳು ಮೂಡಿದಾಗ ಆದಷ್ಟು ವಿವೇಚನಯುಕ್ತ ನಡವಳಿಕೆಯನ್ನು ಹೊಂದಿರಬೇಕಾದ ಅಗತ್ಯವನ್ನು ಕಾದಂಬರಿ ತಿಳಿಸುತ್ತದೆ. ಒಂದು ಭಾಷೆಯ ಕಾದಂಬರಿ ಇನ್ನೊಂದು ಭಾಷೆಯಲ್ಲಿಯೂ ಕೂಡ ಗಾಢವಾದ ಪರಿಣಾಮ ಬೀರಬೇಕೆಂದರೆ ಅದರ ಅನುವಾದವು ಕೂಡ ಅಷ್ಟೇ ಚೆನ್ನಾಗಿರಬೇಕು. ಅನುವಾದ ಚೆನ್ನಾಗಿರದೆ ಹೋದರೆ ಮೂಲ ಕಾದಂಬರಿಯ ಸ್ವರೂಪಕ್ಕೇ ಧಕ್ಕೆ ಬರುವ ಅಪಾಯವಿರುತ್ತದೆ ಈ ನಿಟ್ಟಿನಲ್ಲಿ ಕಾದಂಬರಿಯ ಸಮರ್ಥ ಅನುವಾದ ಮಾಡಿದ್ದಾರೆ-ಶ್ರೀಮತಿ ಶಾರದಾ ಸ್ವಾಮಿ ಮತ್ತು ಡಾ.ಎಸ್. ರಾಮಚಂದ್ರ ಸ್ವಾಮಿ. ಈ ಕೃತಿ ಎಲ್ಲಿಯೂ ಅನುವಾದ ಎಂದು ಅನಿಸದೆ ಸ್ವತಂತ್ರ ಕೃತಿ ಎಂಬ ಭಾವನೆ ಬರುವಂತಿದೆ. ಭೀಷ್ಮ ಸಾಹನಿ ಅವರೇ ಹೇಳಿಕೊಂಡಂತೆ ಈ ಕಾದಂಬರಿ ಕಟ್ಟರ್ ಪಂಥೀಯ ವಾದವನ್ನು ಬಯಲುಗೊಳಿಸಲು ಪ್ರಯತ್ನಿಸುತ್ತದೆ. ಆದರೆ ಈ ಕಾದಂಬರಿಯ ವಿರುದ್ಧ ಕೋಮುಭಾವನೆ ಕದಡಿದ ಆರೋಪಗಳು ಬಂದವಾದರೂ ಸುಪ್ರೀಂ ಕೋರ್ಟ್ ಈ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿ ಕಾದಂಬರಿಯ ಶ್ರೇಷ್ಟತೆಯನ್ನು ಎತ್ತಿ ಹಿಡಿಯಿತು. ಮುರಾದ್ ಅಲಿ ಎಂಬ ಮುಸ್ಲಿಂ ವ್ಯಕ್ತಿಯೊಬ್ಬ ‘ಡಾಕ್ಟರನೊಬ್ಬನಿಗೆ ಪ್ರಯೋಗಕ್ಕೆ ಸತ್ತ ಹಂದಿ ಬೇಕಾಗಿದೆ’ಎಂದು ಸುಳ್ಳು ಹೇಳಿ ಬಡ, ಮುಗ್ಧ ಚಮ್ಮಾರನೊಬ್ಬನಿಂದ ಹಂದಿಯೊಂದನ್ನು ಕೊಲ್ಲಿಸಿ ಅದನ್ನು ಮಸೀದಿ ಮುಂದೆ ತಂದು ಹಾಕುವದರೊಂದಿಗೆ ಕಥೆ ಆರಂಭಗೊಳ್ಳುತ್ತದೆ.ಇದೇ ಘಟನೆ ಮಹಾದರಂತಗಳಿಗೂ ಕಾರಣವಾಗುತ್ತದೆ. ಹಿಂದೂ-ಮುಸ್ಲಿಂ ಗಲಭೆಗಳು ನಡೆಯುತ್ತಿದ್ದರೂ ಬ್ರಿಟಿಷ್ ಸರ್ಕಾರ ಸುಮ್ಮನಿದ್ದು ಎಲ್ಲ ಮುಗಿದ ಮೇಲೆ ಪರಿಹಾರ ಕಾರ್ಯಕ್ಕಾಗಿ ಧಾವಿಸುವದು ವಿಡಂಬನೆಗೆ ಸಾಕ್ಷಿಯಾಗಿದೆ. ಹಂದಿಯನ್ನು ಕೊಂದು ಎಲ್ಲ ಘಟನೆಗಳಿಗೂ ತಾನೇ ಕಾರಣ ಎಂದು ಕೊನೆಯವರೆಗೂ ಮಾನಸಿಕ ತೊಳಲಾಟಕ್ಕೊಳಪಡುವ ನತ್ಥೂ,ಪೊಳ್ಳು ಹಿಂದೂ ಉಗ್ರವಾದದ ವಿಚಾರಕ್ಕೆ ಬಲಿಯಾಗಿ ಹಿಂಸಾಚಾರ ನಡೆಸುವ ರಣವೀರ, ಗಲಭೆಯಲ್ಲಿ ಹತನಾಗುವ ಮುಗ್ಧ ಜರ್ನೈಲ್, ಮನೆಯಲ್ಲೇ ಮತಾಂಧರಿದ್ದರೂ ಸಿಖ್ ದಂಪತಿಗಳಿಗೆ ಆಶ್ರಯ ಕೊಡುವ ಮುಸ್ಲಿಂ ಮಹಿಳೆ, ಸಾಮೂಹಿಕವಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ನೂರಾರು ಗೃಹಿಣಿಯರು…. ಹೀಗೆ ಅನೇಕ ಪಾತ್ರಗಳು ಕಣ್ಣಿಗೆ ಕಟ್ಟಿದಂತಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಹಿಂದಿ ಭಾಷೆಯ ಪ್ರಖ್ಯಾತ ಲೇಖಕರಾದ ಭೀಷ್ಮ ಸಾಹನಿ ಅವರ ಅನನ್ಯ ಕಾದಂಬರಿ ‘ತಮಸ್’. ವಿಶ್ವದ ಅನೇಕ ಪ್ರಮುಖ ಭಾಷೆಗಳಿಗೆ ಅನುವಾದಗೊಂಡ ಈ ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.
ಸಮಾಜ ಧರ್ಮಾಂಧತೆಯ ವಿಷಚಕ್ರದೊಳಗೆ ಸಿಲುಕಿ ನರಳುತ್ತಿರುವ ಇಂದಿನ ದಿನಮಾನಗಳಲ್ಲಿ ಈ ಕಾದಂಬರಿ ಪ್ರಸ್ತುತವಾಗಿದೆ. ಹಿಂದೂ-ಮುಸ್ಲಿಂ ಕೋಮುಗಲಭೆಯಂತ ಸೂಕ್ಷ್ಮ ಮತ್ತು ಅಪಾಯಕಾರಿ ವಿಷಯವನ್ನು ಕಾದಂಬರಿಯನ್ನಾಗಿಸಿ ಈ ಅನುಪಮ ಕಲಾಕೃತಿಯನ್ನು ಎಲ್ಲೂ ಧಕ್ಕೆ ಬರದಂತೆ, ಅಂದರೆ ಯಾವುದೇ ಧರ್ಮಕ್ಕೆ ನೋವಾಗದಂತೆ ಸಂಯಮಪೂರ್ಣತೆಯಿಂದ ನಿರೂಪಿಸಿದ್ದಾರೆ.
ಈ ಕಾದಂಬರಿಯಲ್ಲಿ ಕಥಾನಾಯಕನಿಲ್ಲ, ಕಥಾನಾಯಕಿಯೂ ಇಲ್ಲ. ಇಲ್ಲಿ ನಡೆಯುವ ಘಟನೆಗಳು, ಅಸಂಖ್ಯಾತ ಪಾತ್ರಧಾರಿಗಳು ಎಲ್ಲರೂ ನಾಯಕರೇ. ಕುವೆಂಪು ಅವರ ಮಾತಿನಂತೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ.”
ಕೆಲವೇ ಮಂದಿ ಕಿಡಿಗೇಡಿಗಳಿಂದಾಗಿ ಜನರ ಅನ್ಯೋನ್ಯ ಸಂಬಂಧಗಳು ಕಡಿದುಬಿದ್ದು ಕೋಮುಗಲಭೆಗಳು ಹರಡುತ್ತವೆ ಎಂಬುದನ್ನು ತಿಳಿಸುವದರೊಂದಿಗೆ ಯಾವುದೇ ಅಹಿತಕರ ಘಟನೆಗಳು ಜರುಗಿದಾಗ ಅಥವಾ ಭಿನ್ನಾಭಿಪ್ರಾಯಗಳು ಮೂಡಿದಾಗ ಆದಷ್ಟು ವಿವೇಚನಯುಕ್ತ ನಡವಳಿಕೆಯನ್ನು ಹೊಂದಿರಬೇಕಾದ ಅಗತ್ಯವನ್ನು ಕಾದಂಬರಿ ತಿಳಿಸುತ್ತದೆ.
ಒಂದು ಭಾಷೆಯ ಕಾದಂಬರಿ ಇನ್ನೊಂದು ಭಾಷೆಯಲ್ಲಿಯೂ ಕೂಡ ಗಾಢವಾದ ಪರಿಣಾಮ ಬೀರಬೇಕೆಂದರೆ ಅದರ ಅನುವಾದವು ಕೂಡ ಅಷ್ಟೇ ಚೆನ್ನಾಗಿರಬೇಕು. ಅನುವಾದ ಚೆನ್ನಾಗಿರದೆ ಹೋದರೆ ಮೂಲ ಕಾದಂಬರಿಯ ಸ್ವರೂಪಕ್ಕೇ ಧಕ್ಕೆ ಬರುವ ಅಪಾಯವಿರುತ್ತದೆ ಈ ನಿಟ್ಟಿನಲ್ಲಿ ಕಾದಂಬರಿಯ ಸಮರ್ಥ ಅನುವಾದ ಮಾಡಿದ್ದಾರೆ-ಶ್ರೀಮತಿ ಶಾರದಾ ಸ್ವಾಮಿ ಮತ್ತು ಡಾ.ಎಸ್. ರಾಮಚಂದ್ರ ಸ್ವಾಮಿ. ಈ ಕೃತಿ ಎಲ್ಲಿಯೂ ಅನುವಾದ ಎಂದು ಅನಿಸದೆ ಸ್ವತಂತ್ರ ಕೃತಿ ಎಂಬ ಭಾವನೆ ಬರುವಂತಿದೆ.
ಭೀಷ್ಮ ಸಾಹನಿ ಅವರೇ ಹೇಳಿಕೊಂಡಂತೆ ಈ ಕಾದಂಬರಿ ಕಟ್ಟರ್ ಪಂಥೀಯ ವಾದವನ್ನು ಬಯಲುಗೊಳಿಸಲು ಪ್ರಯತ್ನಿಸುತ್ತದೆ. ಆದರೆ ಈ ಕಾದಂಬರಿಯ ವಿರುದ್ಧ ಕೋಮುಭಾವನೆ ಕದಡಿದ ಆರೋಪಗಳು ಬಂದವಾದರೂ ಸುಪ್ರೀಂ ಕೋರ್ಟ್ ಈ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿ ಕಾದಂಬರಿಯ ಶ್ರೇಷ್ಟತೆಯನ್ನು ಎತ್ತಿ ಹಿಡಿಯಿತು.
ಮುರಾದ್ ಅಲಿ ಎಂಬ ಮುಸ್ಲಿಂ ವ್ಯಕ್ತಿಯೊಬ್ಬ ‘ಡಾಕ್ಟರನೊಬ್ಬನಿಗೆ ಪ್ರಯೋಗಕ್ಕೆ ಸತ್ತ ಹಂದಿ ಬೇಕಾಗಿದೆ’ಎಂದು ಸುಳ್ಳು ಹೇಳಿ ಬಡ, ಮುಗ್ಧ ಚಮ್ಮಾರನೊಬ್ಬನಿಂದ ಹಂದಿಯೊಂದನ್ನು ಕೊಲ್ಲಿಸಿ ಅದನ್ನು ಮಸೀದಿ ಮುಂದೆ ತಂದು ಹಾಕುವದರೊಂದಿಗೆ ಕಥೆ ಆರಂಭಗೊಳ್ಳುತ್ತದೆ.ಇದೇ ಘಟನೆ ಮಹಾದರಂತಗಳಿಗೂ ಕಾರಣವಾಗುತ್ತದೆ. ಹಿಂದೂ-ಮುಸ್ಲಿಂ ಗಲಭೆಗಳು ನಡೆಯುತ್ತಿದ್ದರೂ ಬ್ರಿಟಿಷ್ ಸರ್ಕಾರ ಸುಮ್ಮನಿದ್ದು ಎಲ್ಲ ಮುಗಿದ ಮೇಲೆ ಪರಿಹಾರ ಕಾರ್ಯಕ್ಕಾಗಿ ಧಾವಿಸುವದು ವಿಡಂಬನೆಗೆ ಸಾಕ್ಷಿಯಾಗಿದೆ. ಹಂದಿಯನ್ನು ಕೊಂದು ಎಲ್ಲ ಘಟನೆಗಳಿಗೂ ತಾನೇ ಕಾರಣ ಎಂದು ಕೊನೆಯವರೆಗೂ ಮಾನಸಿಕ ತೊಳಲಾಟಕ್ಕೊಳಪಡುವ ನತ್ಥೂ,ಪೊಳ್ಳು ಹಿಂದೂ ಉಗ್ರವಾದದ ವಿಚಾರಕ್ಕೆ ಬಲಿಯಾಗಿ ಹಿಂಸಾಚಾರ ನಡೆಸುವ ರಣವೀರ, ಗಲಭೆಯಲ್ಲಿ ಹತನಾಗುವ ಮುಗ್ಧ ಜರ್ನೈಲ್, ಮನೆಯಲ್ಲೇ ಮತಾಂಧರಿದ್ದರೂ ಸಿಖ್ ದಂಪತಿಗಳಿಗೆ ಆಶ್ರಯ ಕೊಡುವ ಮುಸ್ಲಿಂ ಮಹಿಳೆ, ಸಾಮೂಹಿಕವಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ನೂರಾರು ಗೃಹಿಣಿಯರು…. ಹೀಗೆ ಅನೇಕ ಪಾತ್ರಗಳು ಕಣ್ಣಿಗೆ ಕಟ್ಟಿದಂತಿವೆ.

There are no comments on this title.

to post a comment.

Click on an image to view it in the image viewer

Local cover image