Horalarada galibharadalli ಹೊರಲಾರದ ಗಾಳಿಭಾರದಲ್ಲಿ
Material type:
- 9789381055120
- K894.3 KUNH
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.3 KUNH (Browse shelf(Opens below)) | Available | 066310 |
ಸುಕನ್ಯಾ ಕನಾರಳ್ಳಿ ಕನ್ನಡದಲ್ಲಿ ಹೊಸ ಹೊಳಹುಗಳನ್ನು ಪ್ರೇರಿಸುತ್ತಾ ಇರುವ ಸಾಹಿತಿ. ಇವರು ನಮ್ಮ ಮುಖ್ಯ ಕಥೆಗಾರರಲ್ಲಿ ಒಬ್ಬರು. ಅನುವಾದಕರಾಗಿ ಕನ್ನಡದ ಗ್ರಹಿಕೆಯ ಲೋಕವನ್ನು ವಿಸ್ತರಿಸುತ್ತಾ ಇರುವವರು. ಅವರು ಇಲ್ಲಿ ಅನುವಾದಕ್ಕೆ ಆಯ್ಕೆಮಾಡಿಕೊಂಡ ಮಿಲನ್ ಕುಂದೇರಾನ ಕಾದಂಬರಿ ಅನನ್ಯವಾದದ್ದು. ಆಲ್ಬರ್ಟ್ ಕಮೂನ ನಂತರ ನನ್ನನು ಇವನಷ್ಟು ಕಾಡಿದ ಯುರೋಪಿನ ಲೇಖಕ ಇನ್ನೊಬ್ಬನಿಲ್ಲ. ಇವನ್ನನು ಓದುವಾಗ ಸುಖವಿದೆ; ಆದರೆ ಯಾವ ಸಾಂತ್ವಾನವೂ ಸಿಗುವುದಿಲ್ಲ. ಬದಲಿಗೆ ನಾವು ಅರಳುತ್ತೇವೆ, ಚಿಗುರುತ್ತೇವೆ; ಗುಪ್ತವಾಗಿರುವ ಒಳಬಾಳಿನ ಯಾವ ರಹಸ್ಯವನ್ನಾದರೂ ಎದುರಿಸಲು ಸಿದ್ಧರಾಗುತ್ತೇವೆ. ಮಾನವನ ಕಾಮಜೀವನದಲ್ಲಿ ಪರಪುರುಷ ‘ಪರಸ್ತ್ರೀ’ ಎನ್ನುವ ಶಬ್ದಗಳಿಗೆ ಇರುವ ಪರಿಚಿತವಾದ ವ್ಯಾಖ್ಯೆಗಳನ್ನೇ ಕೆಲವೊಮ್ಮೆ ನಮಗೆ ಗಾಬರಿಯಾಗುವಂತೆ, ಆದರೂ ಒಪ್ಪಿಕೊಳ್ಳುವಂತೆ ಕುಂದೇರಾ ತನ್ನೊಳಗೇ ಕಾಣುತ್ತಾ ಹೋಗುತ್ತಾನೆ. ಕುಂದೇರಾನ ಅರ್ಥಗಳೆಲ್ಲವು ಪದಗಳ ಅರ್ಥಗಳಲ್ಲಿ ಇರುವುದಲ್ಲ; ಮಾತಿನ ಧಾಟಿಯಲ್ಲಿ ಇರುವಂತವು. ಗೇಲಿಯನ್ನು ಗಂಭೀರಗೊಳಿಸುತ್ತಾನೆ, ಗಂಭೀರವಾದದ್ದನ್ನು ಗೇಲಿಗೊಳಿಸುತ್ತಾನೆ. ಕ್ಲೀಷೆಗಳನ್ನು ಒಡೆದು ಸತ್ಯದ ಆವಿಷ್ಕಾರ ಮಾಡುತ್ತಾನೆ. ಸುಕನ್ಯಾ ತಾವು ಕುಂದೇರಾನಲ್ಲಿ ಕಂಡದ್ದನ್ನು ನಮಗೆ ಕಾಣಿಸಲು ಹೆಣಗಿದ್ದಾರೆ. ಅನುವಾದದ ಕಷ್ಟದಲ್ಲಿ ನಾವು ಇದನ್ನು ಎದುರಿಸುತ್ತೇವೆ. ಇಂಗ್ಲಿಷಿಗೆ ಆದ ಭಾಷಾಂತರದಲ್ಲೂ ಈ ಸಮಸ್ಯೆ ಇದ್ದಿರಬಹುದು. ರಾಜಕಾರಣದಿಂದ ಮುಖ ತಿರುಗಿಸಿದಂತೆ ಕಾಣುವ ಈ ಕಾದಂಬರಿ ಸೂಕ್ಷ್ಮವಾಗಿ ರಾಜಕೀಯ ಕಾದಂಬರಿಯೇ. ಸೋವಿಯತ್‍ನ ಕಪಿಮುಷ್ಠಿಯಿಂದ ಬಿಡುಗಡೆಗೊಳ್ಳಲು ಹೆಣಗಿದ ಹಲವರಿದ್ದಾರೆ. ಆದರೆ ಕುಂದೇರಾನ ಎದೆಗಾರಿಗೆ ಕಾದಂಬರಿ ಪ್ರಕಾರದ ಹೊಸ ಆವಿಷ್ಕಾರದಲ್ಲಿಯೇ ಪಡೆದದ್ದು. ಹೀಗಾಗಿ ಇದು ತನ್ನ ಕಾಲದ್ದಲ್ಲಿ ತನ್ನ ಚರಿತ್ರೆಯಲ್ಲಿ ಇದ್ದೇ ನಮಗೆಲ್ಲರಿಗೂ ಈ ಹೊತ್ತಿಗೂ ಪ್ರಸ್ತುತವಾಗಿ ಉಳಿದಿದೆ.
There are no comments on this title.