Patrikodyamada Pallatagalu ಪತ್ರಿಕೋದ್ಯಮದ ಪಲ್ಲಟಗಳು
Material type:
- 9788196998844
- 23 079.54K BALP
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Journalism | 079.54K BALP (Browse shelf(Opens below)) | Available | 077559 |
ಪತ್ರಿಕೋದ್ಯಮದ ಪಲ್ಲಟಗಳು ಪತ್ರಿಕೋದ್ಯಮದ ಬಗ್ಗೆ ಮಹತ್ವದ ಕೃತಿಯೊಂದನ್ನು 'ಬಹುರೂಪಿ' ಪ್ರಕಟಿಸಿದೆ. ಮಾಧ್ಯಮ ಶಿಕ್ಷಣದ ಮಹತ್ವದ ಹೆಸರಾದ ಪ್ರೊ ಎ ಎಸ್ ಬಾಲಸುಬ್ರಹ್ಮಣ್ಯ ಅವರು ಈ ಕೃತಿಯ ಲೇಖಕರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿದ್ಯಾರ್ಥಿಗಳಿಗೆ, ಮಾಧ್ಯಮ ವಿಶ್ಲೇಷಕರಿಗೆ, ಪ್ರಾಧ್ಯಾಪಕರಿಗೆ, ಮಾಧ್ಯಮ ಆಸಕ್ತರಿಗೆ ಇದು ಸೂಕ್ತ ಮಾರ್ಗದರ್ಶಿ. ಈ ಕೃತಿಯಲ್ಲಿ ಈ ಹಿಂದಿನ ಮಾಧ್ಯಮಗಳ ಪಲ್ಲಟಗಳನ್ನು ಗುರುತಿಸುವುದರ ಜೊತೆಗೆ ಓಟಿಟಿ, ಯು ಟ್ಯೂಬ್, ಪಾಡ್ ಕಾಸ್ಟ್, gpt -3, ಕೃತಕ ಬುದ್ಧಿಮತ್ತೆಯನ್ನು ಸಹಾ ಚರ್ಚಿಸಲಾಗಿದೆ. ಈ ಪುಸ್ತಕದ ಮಹತ್ವದ ಬಗ್ಗೆ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಡಾ ಓಂಕಾರ ಕಾಕಡೆ ಅವರು ಹೀಗೆ ಹೇಳುತ್ತಾರೆ.. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದಾಗಿ ವಿಶಾಲವಾದ ಜಗತ್ತು ಇಂದು ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಯಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನು ಸಂಭವಿಸಿದರೂ ಕ್ಷಣಾರ್ಧದಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಮುದ್ರಣ ಮಾಧ್ಯಮ ಮೊದಲ ಬಾರಿಗೆ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಈ ಎಲ್ಲವನ್ನೂ ಪ್ರೊ ಬಾಲಸುಬ್ರಹ್ಮಣ್ಯ ಅವರ ಪತ್ರಿಕೋದ್ಯಮದ ಪಲ್ಲಟಗಳು ಪುಸ್ತಕ ತೆರೆದಿಡುತ್ತದೆ.
There are no comments on this title.