Ondu Puraatana Neladalli ಒಂದು ಪುರಾತನ ನೆಲದಲ್ಲಿ
Material type:
- 9789392192425
- 23 K894.3 AMIO
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Statistics | K894.3 AMIO (Browse shelf(Opens below)) | Available | 077513 |
Browsing St Aloysius Library shelves, Collection: Statistics Close shelf browser (Hides shelf browser)
ಇದು ಕ್ರಿ.ಶ. 1920ರಲ್ಲಿ ಈಜಿಪ್ಟ್ ಮತ್ತು ಏಡನ್ನಾಗಿ ಭಾರತಕ್ಕೆ ಬಂದ ಮೂಲತಃ ಬ್ಯುಸಿಯದವನಾದ ಯಹೂದಿ ವರ್ತಕ ಅಬ್ರಹಾಂ ಬೆನ್ ಬಜುವಿನ ಮತ್ತು ಈಜಿಪ್ಟಿನಲ್ಲಿದ್ದ ಇಬ್ಬರು ಭಾರತೀಯರ ಕತೆ. ಬೆನ್ ಊಜ ಮಂಗಳೂರಿನಲ್ಲಿ ಹದಿನೇಳು ವರ್ಷಗಳ ಕಾಲ ಇದ್ದು, ನಾಯರ್ ಹೆಂಗಸೊಬ್ಬಳನ್ನು ಮದುವೆಯಾಗಿ, ತುಳುನಾಡಿನವನಾದ ಬೊಮ್ಮ ಎಂಬ ಭಾರತೀಯ 'ಗುಲಾಮ'ನೊಬ್ಬನನ್ನು ಹೊಂದಿದ್ದ ಬೊಮ್ಮನು ಕೆಲವೊಮ್ಮೆ ಕುಡಿದು ಮತ್ತೇರಿ ಬೆನ್ ಯಿಜು ಬರೆದ ಅಥವಾ ಅವನಿಗೆ ಬಂದ ಪತ್ರಗಳ ಬರಿಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಹಾಗೂ ಅವನ ಯಜಮಾನನು ತನ್ನ ಕೊನೆಯ ದಿನಗಳಲ್ಲಿ ಈಜಿಪ್ಟಿಗೆ ಹಿಂದಿರುಗಿದಾಗ ಅವನ ಜೊತೆಯಲ್ಲೇ ಹೋಗಿದ್ದ.
ಈಜಿಪ್ಪಿನಲ್ಲಿದ್ದ ಇನ್ನೊಬ್ಬ ಭಾರತೀಯನೆಂದರೆ ಅಮಿತಾವ್ ಘೋಷ್ ಚರಿತ್ರೆಯ ಅಡಿಟಿಪ್ಪಣಿಗಳಲ್ಲಿ ಕಾಪಿಡಲ್ಪಟ್ಟ ಬೊಮ್ಮನ ಚರಿತ್ರೆಯ ಪಾಡು ಹಿಡಿದು 1990ರಲ್ಲಿ ಅಲ್ಲಿಗೆ ಹೋಗಿದ್ದರು. ಸುಮಾರು ಹತ್ತು ವರ್ಷಗಳ ತನಕ ನಡೆದ ಈ ಹುಡುಕಾಟವು ಅಲೆಕ್ಸಾಂಡ್ರಿಯಾದಿಂದ ಎರಡು ಗಂಟೆಗಳಷ್ಟು ದಕ್ಷಿಣಕ್ಕಿರುವ ಸಣ್ಣ ಹಳ್ಳಿಯೊಂದರಲ್ಲಿ ಆರಂಭವಾಗುತ್ತದೆ ಹಳ್ಳಿಯಲ್ಲಿ ಅವರ ಮಾರ್ಗದರ್ಶಿಗಳೆಂದರೆ ನೆರೆಹೊರೆಯವರು: ದೈತ್ಯಾಕಾರದ ಮನೆಮಾಲಿಕ ಅಬು-'ಬಿರಿ ಮಣೆ ಕಣ್ಣಿನ ಸ್ಥಳೀಯ ವಾಕ್ಚತುರ ಖಮೀಸ್ ಎಂಬ ಇಲ್ಲ ಅವನ ಎದುರಾಜಿ ಇಮಾಮ್, ನೇಕಾರ ಝಲ್ ಮತ್ತು ನಖೀಲ: ಗಲ್ಸ್ ಯುದ್ಧದ ಆರಂಭದಿಂದಾಗಿ ಬಾಗ್ದಾದಿನಲ್ಲಿ ಸಿಕ್ಕಿಹಾಕಿಕೊಂಡ ಶಾಂತ ಸ್ವಭಾರದ ಸಬೀಲನ ವೈಯುಕ್ತಿಕ ಪಾಡು ಈಜಿಪ್ಟಿನ ಮತ್ತು 'ಅಭಿವೃದ್ಧಿ ಹೊಂದುತ್ತಿರುವ ಜಗತ್ತಿ'ನ ವ್ಯಾಪಕ ಸ್ಥಿತಿಯನ್ನು ಹೇಳುವ ಬಗೆಯೂ ಇಲ್ಲದೆ.
ಒಂದು ಪುರಾತನ ನೆಲದಲ್ಲಿ ಇದೊಂದು ಪ್ರವಾಸಿ ಕಥನದ ಸೋಗಿನಲ್ಲಿರುವ ಬುಡಮೇಲು ಮಾಡುವ ಚರಿತ್ರೆ ವಿಪುಲವಾದ ವಿವರಣೆ, ಉಪಕತೆಗಳಿಂದ ತುಂಬಿದ ಈ ಪುಸ್ತಕವು ಧರ್ಮಯುದ್ಧದಿಂದ ಹಿಡಿದು ಆಪರೇಶನ್ ಡೆಸರ್ಟ್ ಸ್ಟೋರ್ಮ್ನ ವರೆಗಿನ ಈಜಿಪ್ಪಿನ ಆತ್ಮೀಯವಾರ ಮಾಂತ್ರಿಕ ಒಳನೋಟವನ್ನು ಕೊಡುತ್ತದೆ. ಕೆಲವು ಶತಮಾನಗಳ ಹಿಂದಿನವರೆಗೂ ಪ್ರಚಲಿತವಿದ್ದು ಈಗ ಹಲವು ಸ್ಥಳಗಳಲ್ಲಿ * ವಿಭಜನೆಗೊಳಗಾಗಿರುವ ಭಾರತೀಯರು ಮತ್ತು ಈಜಿಪ್ಟಿನವರು, ಮುಸ್ಲಿಂ ಮತ್ತು ಯಹೂದಿ, ಹಿಂದೂ ಮತ್ತು ಮುಸ್ಲಿಂ ಎಂದು ಒಂದರೊಳಗೊಂದು ಹೆಡೆದುಕೊಂಡ ಹಲವು ಸಣ್ಣ, ಅಸ್ಪಷ್ಟ ಚರಿತ್ರೆಗಳ ವಿಶದವಾದ ದರ್ಶನವನ್ನು ನೀಡುತ್ತದೆ.
1992ರಲ್ಲಿ ಬರೆದ ಈ ಕಾದಂಬರಿ 'ಇನ್ ಆನ್ ಆಂಟಕ್ ಲ್ಯಾಂಡ್ ಹೆಚ್ಚಿನ ವಿಮರ್ಶಕರಿಂದ ಘೋಷರ ಅತ್ಯಂತ ಪ್ರಮುಖ ಪುಸ್ತಕವೆಂದು ಪರಿಗಣಿಸಲ್ಪಟ್ಟರೆ ಇದರಲ್ಲಿನ ಅತ್ಮೀಯ ಶೈಲಿ ಹಾಗೂ ಪ್ರಸಕ್ತ ಕರ್ಷಣೆಗಳನ್ನು ಬೆಳಕಿಗೆ ತರಲು ಚರಿತ್ರೆಯನ್ನು ಉಪಯೋಗಿಸಿದ ರೀತಿ ಮನತಟ್ಟುವಂತಿವೆ. ಇಲ್ಲಿ ಎರಡು ಸಮಾನಾಂತರವಾದ ನಿರೂಪಣೆಗಳು: ಈಜಿಪ್ಪಿನ ಗ್ರಾಮ್ಯ ಪ್ರದೇಶಗಳಲ್ಲಿ ಪದವಿ ವಿದ್ಯಾರ್ಥಿಯಾಗಿ ಕ್ಷೇತ್ರಕಾರ್ಯ ಮಾಡುತ್ತಿರುವ ಘೋಷ್ ಹಾಗೂ ಪತ್ರಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ದಾಖಲಿಸಲ್ಪಟ್ಟ 12ನೇ ಶತಮಾನದ ಭಾರತೀಯ ಗುಲಾಮ ಬೊಮ್ಮ.
There are no comments on this title.