Hudukata: Ayda hanneradu samshodhana prabandhagalu ಹುಡುಕಾಟ: ಆಯ್ದ ಹನ್ನೆರಡು ಸಂಶೋಧನಾ ಪ್ರಬಂಧಗಳು
Material type:
- 23 398.2K BILH
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | 398.2K BILH (Browse shelf(Opens below)) | Available | 077374 |
ನಾಲ್ಕು ದಶಕಗಳಿಂದ ಜಾನಪದ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಪ್ರೊ. ಬಿಳಿಮಲೆ ಅವರ ಆಯ್ದ ಸಂಶೋಧನ ಲೇಖನಗಳ ಸಂಕಲನವಿದು. ಇವರಂತೆ ಏಕಕಾಲಕ್ಕೆ ಕರಾವಳಿ, ಮಧ್ಯಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಸಾಹಿತ್ಯ ಮತ್ತು ಜಾನಪದವನ್ನು ಅಧ್ಯಯನ ಮಾಡಿದವರು ಕಡಿಮೆ. ಇಲ್ಲಿನ ಲೇಖನಗಳು ಶ್ರಮದಾಯಕ ಕ್ಷೇತ್ರಕಾರ್ಯ, ವ್ಯಾಪಕ ಅಧ್ಯಯನ ಮತ್ತು ಆಳ ಚಿಂತನೆಯಿಂದ ರೂಪುಗೊಂಡಿವೆ. ಇವುಗಳ ಹಿನ್ನೆಲೆಯಲ್ಲಿ ಜಾನಪದ ಪ್ರಜ್ಞೆ ಸಾಹಿತ್ಯಕ ಸಂವೇದನೆ ಹಾಗೂ ಸಾಮಾಜಿಕ ಚರಿತ್ರೆಯ ಅರಿವು ಕೆಲಸ ಮಾಡಿವೆ. ಕರ್ನಾಟಕ ಸಂಸ್ಕೃತಿಯನ್ನು ಕೇವಲ ಆಳುವ ವರ್ಗದ ರಾಜಕೀಯ ಚರಿತ್ರೆಯ ಮೂಲಕ ವಿರಚಿಸುವ ಅನೇಕ ಪಠ್ಯಗಳಿವೆ. ಆದರೆ ಇಲ್ಲಿನ ಲೇಖನಗಳು ತಳಸ್ತರದ ಸಮುದಾಯಗಳ ಬದುಕಿನ ವಿನ್ಯಾಸಗಳ ಮೂಲಕ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಈ ಲೋಕಗಳಲ್ಲಿರುವ ಜೀವನತತ್ತ್ವವನ್ನು ಶೋಧಿಸುತ್ತವೆ. ನಾಡನ್ನು ಜನಪದ ಸಾಂಸ್ಕೃತಿಕ ನಾಯಕ-ನಾಯಕಿಯರ ಮೂಲಕ ನೋಡುವ ಹಾದಿಗಳನ್ನು ಹುಡುಕುತ್ತವೆ. ಇಲ್ಲಿ ತಾಳೆಗರಿ, ಶಾಸನ, ಜನಪದ ಕಥನ, ನೃತ್ಯ, ಆಚರಣೆ, ಸಾಹಿತ್ಯ ಕೃತಿ ಮೊದಲಾಗಿ ಬಹುಸ್ತರೀಯ ಆಕರಗಳನ್ನು ದುಡಿಸಿಕೊಳ್ಳಲಾಗಿದೆ. ಇವನ್ನು ರಾಜಕೀಯ ಸಾಮಾಜಿಕ ಭಾಷಿಕ ಸಾಹಿತ್ಯಕ ನೆಲೆಗಳಿಂದ, ಬಹುಶಿಸ್ತೀಯ ವಿಧಾನದಲ್ಲಿ ಚರ್ಚಿಸಲಾಗಿದೆ. ನೋಟಗಳು, ಹೊಸ ತಾತ್ವಿಕ ಚೌಕಟ್ಟುಗಳು ಮೈತಳೆದಿವೆ. ಇಲ್ಲಿ ಹೊಸ ಈ ಕೃತಿ ಹೊಸತಲೆಮಾರಿನ ಸಂಶೋಧಕರಿಗೆ ಪ್ರೇರಣೆ ಕೊಡಬಲ್ಲ ಮಾದರಿಗಳನ್ನು ಒಳಗೊಂಡಿದೆ. ಜತೆಗೆ ಭಿನ್ನಮತೀಯ ಪ್ರಶ್ನೆಗಳನ್ನು ಹುಟ್ಟಿಸುತ್ತ, ಇರುವ ಮಾದರಿಗಳನ್ನು ಮುರಿದು ಹೊಸ ಮಾದರಿಗಳನ್ನು ಕಟ್ಟುವ ಪ್ರಚೋದನೆಯನ್ನೂ ನೀಡಬಲ್ಲದಾಗಿದೆ. ಈ ಕಾರಣದಿಂದ ಸಂಶೋಧನ ವಿಧಾನದ ಕಲಿಕೆಯಲ್ಲಿ ಉಪಯುಕ್ತವಾಗುವ ಪಠ್ಯವೂ ಆಗಿದೆ. - ರಹಮತ್ ತರೀಕೆರೆ
ಪರಿವಿಡಿ
ಸಂಶೋಧನೆಯ ಜೊತೆಗೆ ಕೆಲವು ಹೆಜ್ಜೆಗಳು / ೭
ಕೃತಜ್ಞತೆಗಳು / ೧೬
Ω. ಕನ್ನಡ ಸಂಶೋಧನೆ / ೧೯
១. ಜಾನಪದ ಕ್ಷೇತ್ರಕಾರ್ಯ : ಕೆಲವು ವಿಚಾರಗಳು / ೪೬
2. ಜಾನಪದದಲ್ಲಿ ಲೋಕದೃಷ್ಟಿ : ಒಂದು ಟಿಪ್ಪಣಿ / ೯೦
४. ಎ ಕೆ ರಾಮಾನುಜನ್ ಅವರ 'ಫೋಕ್ ಟೇಲ್ಸ್ ಫ್ರಂ ಇಂಡಿಯಾ' / ೧೧೪
೫. ಇತಿಹಾಸವಿಲ್ಲದವರ ಇತಿಹಾಸ ಮತ್ತು ಕುಮಾರರಾಮ / ೧೩೩
೬. ಮೈಲಾರಲಿಂಗ ಮತ್ತು ಅವನ ಮೂವರು ಹೆಂಡತಿಯರು / ೧೨
೭. ಬಹುತ್ವದ ಬಹುತ್ವ ಮತ್ತು ಹುತ್ತಕ್ಕೆ ಹಾಲೆರೆವ ಹಸು / ೨೦೫
೮. ಜನಪದ ಕತೆಯ ಸಾಂಕೇತಿಕತೆ : ಎರಡು ಮೀನುಗಳ ಕತೆ / ೨೨೮
೯. ಮಹಿಳಾ ಕೇಂದ್ರಿತ ಜನಪದ ಕತೆಯು ಪುರುಷ ಕೇಂದ್ರಿತ ನಾಟಕವಾದಾಗ / ೨೫೪
೧೦. ಅಂತ್ಯ ಸಂಸ್ಕಾರ ಅಥವಾ ಬೊಜ್ಜ / ೨೬೯
೧೧. ಸಿದ್ಧವೇಶ : ಪ್ರತಿಭಟನೆ ಮತ್ತು ನಿರಸನ / ೨೯೨
೧೨. ಬಹುಮುಖೀ ದೈವ ಹುಲಿಗೆಮ್ಮ / ೩೦೯
There are no comments on this title.