Kabeeranaada Kubera Karnad Sadashiva Rao ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್
Material type:
- 9789392451959
- 23 928K ARAK
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | History | 928K CHOK (Browse shelf(Opens below)) | Available | 077044 |
Browsing St Aloysius Library shelves, Collection: History Close shelf browser (Hides shelf browser)
ದೇಶದ ಸ್ವಾತಂತ್ರ್ಯ ಹೋಟದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದ ವೈವಿಧ್ಯಗಳೆಲ್ಲವೂ ಕರಾವಳಿ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದ್ದುವು. ಶ್ರೀಗಳಾದ ಎಂ, ಲೋಕಯ್ಯ ಶೆಟ್ಟರು ನೇತಾಜಿ ಸುಭಾಶ್ಚಂದ್ರ ಬೋಸರಿಂದ ಪ್ರಭಾವಿತರಾಗಿದ್ದರೆ, ಅತ್ತಾವರ ಎಲ್ಲಪ್ಪನವರು. ಆಜಾದ್ ಹಿಂದ್ ಬ್ಯಾಂಕ್ ಸ್ಥಾಪನೆ ಮಾಡುವುದರ ಜೊತೆಗೆ ನೇತಾಜಿಯವರ ಆಝಾದ್ ಹಿಂದ್ ಸರಕಾರದ ಸದಸ್ಯರೂ ಆಗಿದ್ದರು. ಕೆ. ಕೆ. ಶೆಟ್ಟಿ, ಕೆ. ಆರ್. ಆಚಾರ್, ವಿ. ಎಸ್. ಕುಡ್ಡ, ಕಡೆಂಗೋಡ್ಲು ಶಂಕರ ಭಟ್ಟ ಮೊದಲಾದವರು ಪತ್ರಿಕೋದ್ಯಮಕ್ಕಿಳಿದು ಬ್ರಿಟಿಷ್ ಪ್ರಭುತ್ವದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು. ಬಿ. ವಿ. ಕಕ್ಕಿಲ್ಲಾಯ, ಕೆ. ಆರ್. ಕಾರಂತ ಮೊದಲಾದವರು ರಾಷ್ಟ್ರೀಯ ಹೋರಾಟದ ಜೊತೆಗೆ ಕರ್ನಾಟಕ ಏಕೀಕರಣದ ಕೆಲಸಗಳನ್ನು ಮಾಡುತ್ತಾ, ಅವೆರಡರ ನಡುವೆ ಸಂಘರ್ಷ ಏರ್ಪಡದ ಹಾಗೆ ಚಳುವಳಿಗಳನ್ನು ರೂಪಿಸುವ ಹೊಣೆ ಹೊತ್ತಿದ್ದರು. ಶ್ರೀ ಅರವಿಂದ ಚೊಕ್ಕಾಡಿಯವರು ಪ್ರಸ್ತುತ ಪುಸ್ತಕದಲ್ಲಿ ಮೇಲಿನ ಕೆಲಸಗಳಿಗೆ ಪೂರಕವಾಗಿ, ಆದರೆ ಅವುಗಳಿಗಿಂತ ಹೆಚ್ಚು ವಿಸ್ತಾರವಾಗಿ ಶ್ರೀ ಕಾರ್ನಾಡ್ ಸದಾಶಿವ ರಾಯರು (1881-1937) ಹೇಗೆ ಕೆಲಸ ಮಾಡಿದರು ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಅವರು ಸಮರ್ಪಕವಾಗಿ ಗುರುತಿಸಿದಂತೆ, ಗಾಂಧೀಜಿ ಸತ್ಯಾಗ್ರಹ ಚಳವಳಿ ಸುರು ಮಾಡಿದಾಗ, ಅದರ ಪ್ರತಿಜ್ಞೆಗೆ ಸಹಿ ಹಾಕಿದವರಲ್ಲಿ ಕಾರ್ನಾಡರೇ ಕರ್ನಾಟಕದಲ್ಲಿ ಮೊದಲಿಗರು, ಅಲ್ಲಿಂದ ಮುಂದೆ ಗಾಂಧೀಜಿಯ ಆಪ್ತ ವಲಯದಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದ ಅವರು ಕರಾವಳಿಯ ಸ್ವಾತಂತ್ರ್ಯ ಚಳವಳಿಯನ್ನು ರಾಷ್ಟ್ರೀಯ ಧಾರೆಗೆ ಸೇರಿಸುವ ಮಹತ್ವದ ಕೆಲಸ ಮಾಡಿದರು. ರಾಷ್ಟ್ರನಾಯಕರೊಡನೆ ಕಾರ್ನಾಡರು ಬೆಳೆಸಿಕೊಂಡಿದ್ದ ಸೌಹಾರ್ದ ಸಂಬಂಧಗಳ ಬಗ್ಗೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ದೇಶಭಕ್ತಿ ಮತ್ತು ತ್ಯಾಗದ ಈ ಕಥನವು ವರ್ತಮಾನದ ಅಗತ್ಯವೊಂದನ್ನು ಪೂರೈಸಿದೆ. - ಡಾ|| ಪುರುಷೋತ್ತಮ ಬಿಳಿಮಲೆ
There are no comments on this title.