Local cover image
Local cover image
Amazon cover image
Image from Amazon.com
Image from Google Jackets

Modala Sahasramanada Kannada Shasanagalu: ಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 4

By: Contributor(s): Material type: TextTextLanguage: Kannada Series: 2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 4Publication details: Bengaluru Abhinava 2022Description: xiii,1266p.-1741p. HB 28x21cmISBN:
  • 9789392503115
Subject(s): DDC classification:
  • 23 417K SETM
Summary: ‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-4’ ಕೃತಿಯು ಷ. ಶೆಟ್ಟರ್ ಅವರ 2020- ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು 910-964 ಕೃತಿಯಾಗಿದೆ. ಶಾಸನ ಪಠ್ಯವನ್ನು ಮೊದಲು ಪ್ರಕಟಿಸಿದಂತೆ ಇಲ್ಲಿಯೂ ಆಧುನಿಕ ಕನ್ನಡ ಲಿಪಿಯಲ್ಲಿ ಪ್ರಕಟಿಸಲಾಗಿದೆ. ಆದರೆ, ಕೆಲವು ಶಾಸನಗಳಿಗೆ ಮಾತ್ರ ಅಲ್ಲಿ ಒದಗಿಸಲಾಗಿದ್ದ ಪ್ರತಿಕೃತಿಯನ್ನಾಗಲೀ ಇಲ್ಲಿ ಒದಗಿಸಿಲ್ಲ. ಶಾಸನವು ದ್ವಿಭಾಷಾ ಅಥವಾ ತ್ರಿಭಾಷಾ ಬರಹಗಳಲ್ಲಿದ್ದರೆ, ಹಳಗನ್ನಡದ ಭಾಗವನ್ನು ಮಾತ್ರ ಆಯ್ದುಕೊಡಲಾಗಿದೆ, ಇನ್ನುಳಿದ ಭಾಷೆಗಳಲ್ಲಿರುವ ಪಠ್ಯಭಾಗವನ್ನಲ್ಲ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆ, ದೇಶದ ಯಾವ ಭಾಷೆಯ ಶಾಸನಾಧ್ಯಯನದಲ್ಲಿ ಈವರೆಗೂ ಮಾಡದಿರುವ ಸಾಧನೆ ಇದಾಗಿದೆ ಎನ್ನುತ್ತಾರೆ ಲೇಖಕ ಷ. ಶೆಟ್ಟರ್. ಅಲ್ಲದೆ, ಒಂದೊಂದು ಕಾಲಘಟ್ಟದಲ್ಲಿ ಬಳಕೆಗೆ ಬಂದ ಕನ್ನಡ ಪದಗಳ ಸಮಗ್ರ ಯಾದಿಯನ್ನು ಪ್ರತಿ ಸಂಪುಟದ ಕೊನೆಯಲ್ಲಿ ಅನುಬಂಧಿಸಿ, ಅವು ಕನ್ನಡ ಮೂಲದವುಗಳೋ, ಸಂಸ್ಕೃತ ಮೂಲದವುಗಳೋ, ಮಿಶ್ರಭಾಷಾ ಪದಗಳೋ, ಎಂಬುದನ್ನು ಸೂಚಿಸಲಾಗಿದೆ. ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library History 417K SETM (Browse shelf(Opens below)) Reference Book 076774
Total holds: 0

‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-4’ ಕೃತಿಯು ಷ. ಶೆಟ್ಟರ್ ಅವರ 2020- ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು 910-964 ಕೃತಿಯಾಗಿದೆ. ಶಾಸನ ಪಠ್ಯವನ್ನು ಮೊದಲು ಪ್ರಕಟಿಸಿದಂತೆ ಇಲ್ಲಿಯೂ ಆಧುನಿಕ ಕನ್ನಡ ಲಿಪಿಯಲ್ಲಿ ಪ್ರಕಟಿಸಲಾಗಿದೆ. ಆದರೆ, ಕೆಲವು ಶಾಸನಗಳಿಗೆ ಮಾತ್ರ ಅಲ್ಲಿ ಒದಗಿಸಲಾಗಿದ್ದ ಪ್ರತಿಕೃತಿಯನ್ನಾಗಲೀ ಇಲ್ಲಿ ಒದಗಿಸಿಲ್ಲ. ಶಾಸನವು ದ್ವಿಭಾಷಾ ಅಥವಾ ತ್ರಿಭಾಷಾ ಬರಹಗಳಲ್ಲಿದ್ದರೆ, ಹಳಗನ್ನಡದ ಭಾಗವನ್ನು ಮಾತ್ರ ಆಯ್ದುಕೊಡಲಾಗಿದೆ, ಇನ್ನುಳಿದ ಭಾಷೆಗಳಲ್ಲಿರುವ ಪಠ್ಯಭಾಗವನ್ನಲ್ಲ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆ, ದೇಶದ ಯಾವ ಭಾಷೆಯ ಶಾಸನಾಧ್ಯಯನದಲ್ಲಿ ಈವರೆಗೂ ಮಾಡದಿರುವ ಸಾಧನೆ ಇದಾಗಿದೆ ಎನ್ನುತ್ತಾರೆ ಲೇಖಕ ಷ. ಶೆಟ್ಟರ್.
ಅಲ್ಲದೆ, ಒಂದೊಂದು ಕಾಲಘಟ್ಟದಲ್ಲಿ ಬಳಕೆಗೆ ಬಂದ ಕನ್ನಡ ಪದಗಳ ಸಮಗ್ರ ಯಾದಿಯನ್ನು ಪ್ರತಿ ಸಂಪುಟದ ಕೊನೆಯಲ್ಲಿ ಅನುಬಂಧಿಸಿ, ಅವು ಕನ್ನಡ ಮೂಲದವುಗಳೋ, ಸಂಸ್ಕೃತ ಮೂಲದವುಗಳೋ, ಮಿಶ್ರಭಾಷಾ ಪದಗಳೋ, ಎಂಬುದನ್ನು ಸೂಚಿಸಲಾಗಿದೆ. ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ.

There are no comments on this title.

to post a comment.

Click on an image to view it in the image viewer

Local cover image