Local cover image
Local cover image
Image from Google Jackets

Halmidi Shasana: Samagra Adhyayana ಹಲ್ಮಿಡಿ ಶಾಸನ: ಸಮಗ್ರ ಅಧ್ಯಯನ

By: Contributor(s): Material type: TextTextLanguage: Kannada Publication details: Bengaluru Abhinava 2022Description: 256 p. PB 21x14 cmSubject(s): DDC classification:
  • 23 K894.9 MURH
Summary: ‘ಹಲ್ಮಿಡಿ ಶಾಸನ-ಸಮಗ್ರ ಅಧ್ಯಯನ’ ಕೃತಿಯನ್ನು ಷ. ಶೆಟ್ಟರ್ ಪ್ರಧಾನ ಸಂಪಾದಕತ್ವದಲ್ಲಿ ಎಸ್.ಎಲ್. ಶ್ರೀನಿವಾಸ ಮೂರ್ತಿ ಅವರು ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ದೇಶದ ಇತಿಹಾಸದಲ್ಲಿ ದ್ವಿಭಾಷಾ ಶಾಸನವನ್ನು ಬರೆಸಿದವರಲ್ಲಿ ಮೊದಲಿಗ, ಅಶೋಕ ಮೌರ್ಯ, ಅವನ ಕಾಲಾನಂತರ (ವಿಶೇಷವಾಗಿ ಕ್ರಿ.ಶ.ದ ಆರಂಭಿಕ ಶತಮಾನಗಳಲ್ಲಿ), ಪ್ರಾಕೃತ-ಖರೋಷ್ಠಿ: ಮಿಶ್ರಭಾಷಾ ಬರಹವು ತಕ್ಷಶಿಲಾದಿಂದ ಪಾಟಲೀಪುತ್ರದವರೆಗೂ ವ್ಯಾಪಿಸಿತು. ಇದೇ ಬಗೆಯಲ್ಲಿ ಸಾತವಾಹನರ ಕಾಲಾನಂತರ (ಸುಮಾರು ನಾಲ್ಕನೆಯ ಶತಮಾನ), ಪ್ರಾಕೃತ – ಸಂಸ್ಕೃತ ಮಿಶ್ರಬರಹವು ದಬ್ಬಿಣದ ಬಹುಭಾಗದಲ್ಲಿ ವ್ಯಾಪಿಸಿತು, ಕದಂಬರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಯಲ್ಲಿ (೧) ಪ್ರಾಕೃತ (ಮಳವಳ್ಳಿ), (೨) ಪ್ರಾಕೃತಮಿಶ್ರಿತ-ಸಂಸ್ಕೃತ (ಚಂದ್ರವಳ್ಳಿ), (೩) ಸಂಸ್ಕೃತ (ಕದಂಬರ ಬಹುತೇಕ ತಾಮ್ರಪಟಗಳು), ಮತ್ತು (೪) ಸಂಸ್ಕೃತ-ಕನ್ನಡ ದ್ವಿಭಾಷಾ (ತಗರೆ) ಮತ್ತು (೫) ಕನ್ನಡಭಾಷಾ ಪ್ರಭೇದಗಳನ್ನು ಕಾಣುವವು. ಆರಂಭಕಾಲದಲ್ಲಿ ಕನ್ನಡದ ಮೇಲಾದ ಸಂಸ್ಕೃತದ ಪ್ರಭಾವವನ್ನು ಮತ್ತು ಸಂಸ್ಕೃತದ ಮೇಲಾದ ಕನ್ನಡದ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ಈ ಅಭ್ಯಾಸದ ಗುರಿ. ಇದನ್ನು ಸಂಸ್ಕೃತೀಕರಣ ಮತ್ತು ಕನ್ನಡೀಕರಣ ಪ್ರಕ್ರಿಯೆ ಎನ್ನಬಹುದು. ಕನ್ನಡದ ಮೇಲಾದ ಸಂಸ್ಕೃತ ಪ್ರಭಾವದ ಸ್ಕೂಲ ಕಲ್ಪನೆ ನಮಗಿದ್ದರೂ ನಿರ್ದಿಷ್ಟ ಆಕರಗಳನ್ನಾಧರಿಸಿದ ಕೂಲಂಕಷ ಚರ್ಚೆಯನ್ನು ನಾವಿನ್ನೂ ಮಾಡಬೇಕಾಗಿದೆ. ಸಂಸ್ಕೃತದ ಪ್ರಭಾವದಿಂದಾಗಿ ಹೊಸವರ್ಣಗಳು ಕನ್ನಡದಲ್ಲಿ ನುಗ್ಗಿದ್ದು, ಕನ್ನಡ ವರ್ಣಮಾಲೆ ಹಿಗ್ಗಿದ್ದು, ಮಹಾಪ್ರಾಣ, ಅನುಸ್ವಾರ, ವಿಸರ್ಗ ಮುಂತಾದ ಚಿಹ್ನೆಗಳು ಪ್ರವೇಶಿಸಿದ್ದು, ಇತಿಮಿತಿಯಲ್ಲಿದ್ದ ಉಚ್ಚಾರ ಪದಮಾತ್ರೆಗಳು ವಿಸ್ತಾರಗೊಂಡಿದ್ದು ನಮ್ಮ ತಿಳುವಳಿಕೆಯಲ್ಲಿವೆ. ಆದರೆ ಇವು ಹಿಗ್ಗಿದ್ದು, ನುಗ್ಗಿದ್ದು, ಪ್ರವೇಶಿಸಿದ್ದು, ನಿಂತದ್ದು, ಯಾವ ಸಂದರ್ಭದಲ್ಲಿ? ಯಾವ ಬಗೆಯಲ್ಲಿ? ಎಂಬುದನ್ನು ನಾವಿನ್ನೂ ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ ಷ. ಶೆಟ್ಟರ್.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

‘ಹಲ್ಮಿಡಿ ಶಾಸನ-ಸಮಗ್ರ ಅಧ್ಯಯನ’ ಕೃತಿಯನ್ನು ಷ. ಶೆಟ್ಟರ್ ಪ್ರಧಾನ ಸಂಪಾದಕತ್ವದಲ್ಲಿ ಎಸ್.ಎಲ್. ಶ್ರೀನಿವಾಸ ಮೂರ್ತಿ ಅವರು ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ದೇಶದ ಇತಿಹಾಸದಲ್ಲಿ ದ್ವಿಭಾಷಾ ಶಾಸನವನ್ನು ಬರೆಸಿದವರಲ್ಲಿ ಮೊದಲಿಗ, ಅಶೋಕ ಮೌರ್ಯ, ಅವನ ಕಾಲಾನಂತರ (ವಿಶೇಷವಾಗಿ ಕ್ರಿ.ಶ.ದ ಆರಂಭಿಕ ಶತಮಾನಗಳಲ್ಲಿ), ಪ್ರಾಕೃತ-ಖರೋಷ್ಠಿ: ಮಿಶ್ರಭಾಷಾ ಬರಹವು ತಕ್ಷಶಿಲಾದಿಂದ ಪಾಟಲೀಪುತ್ರದವರೆಗೂ ವ್ಯಾಪಿಸಿತು. ಇದೇ ಬಗೆಯಲ್ಲಿ ಸಾತವಾಹನರ ಕಾಲಾನಂತರ (ಸುಮಾರು ನಾಲ್ಕನೆಯ ಶತಮಾನ), ಪ್ರಾಕೃತ – ಸಂಸ್ಕೃತ ಮಿಶ್ರಬರಹವು ದಬ್ಬಿಣದ ಬಹುಭಾಗದಲ್ಲಿ ವ್ಯಾಪಿಸಿತು, ಕದಂಬರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಯಲ್ಲಿ (೧) ಪ್ರಾಕೃತ (ಮಳವಳ್ಳಿ), (೨) ಪ್ರಾಕೃತಮಿಶ್ರಿತ-ಸಂಸ್ಕೃತ (ಚಂದ್ರವಳ್ಳಿ), (೩) ಸಂಸ್ಕೃತ (ಕದಂಬರ ಬಹುತೇಕ ತಾಮ್ರಪಟಗಳು), ಮತ್ತು (೪) ಸಂಸ್ಕೃತ-ಕನ್ನಡ ದ್ವಿಭಾಷಾ (ತಗರೆ) ಮತ್ತು (೫) ಕನ್ನಡಭಾಷಾ ಪ್ರಭೇದಗಳನ್ನು ಕಾಣುವವು.

ಆರಂಭಕಾಲದಲ್ಲಿ ಕನ್ನಡದ ಮೇಲಾದ ಸಂಸ್ಕೃತದ ಪ್ರಭಾವವನ್ನು ಮತ್ತು ಸಂಸ್ಕೃತದ ಮೇಲಾದ ಕನ್ನಡದ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ಈ ಅಭ್ಯಾಸದ ಗುರಿ. ಇದನ್ನು ಸಂಸ್ಕೃತೀಕರಣ ಮತ್ತು ಕನ್ನಡೀಕರಣ ಪ್ರಕ್ರಿಯೆ ಎನ್ನಬಹುದು. ಕನ್ನಡದ ಮೇಲಾದ ಸಂಸ್ಕೃತ ಪ್ರಭಾವದ ಸ್ಕೂಲ ಕಲ್ಪನೆ ನಮಗಿದ್ದರೂ ನಿರ್ದಿಷ್ಟ ಆಕರಗಳನ್ನಾಧರಿಸಿದ ಕೂಲಂಕಷ ಚರ್ಚೆಯನ್ನು ನಾವಿನ್ನೂ ಮಾಡಬೇಕಾಗಿದೆ. ಸಂಸ್ಕೃತದ ಪ್ರಭಾವದಿಂದಾಗಿ ಹೊಸವರ್ಣಗಳು ಕನ್ನಡದಲ್ಲಿ ನುಗ್ಗಿದ್ದು, ಕನ್ನಡ ವರ್ಣಮಾಲೆ ಹಿಗ್ಗಿದ್ದು, ಮಹಾಪ್ರಾಣ, ಅನುಸ್ವಾರ, ವಿಸರ್ಗ ಮುಂತಾದ ಚಿಹ್ನೆಗಳು ಪ್ರವೇಶಿಸಿದ್ದು, ಇತಿಮಿತಿಯಲ್ಲಿದ್ದ ಉಚ್ಚಾರ ಪದಮಾತ್ರೆಗಳು ವಿಸ್ತಾರಗೊಂಡಿದ್ದು ನಮ್ಮ ತಿಳುವಳಿಕೆಯಲ್ಲಿವೆ. ಆದರೆ ಇವು ಹಿಗ್ಗಿದ್ದು, ನುಗ್ಗಿದ್ದು, ಪ್ರವೇಶಿಸಿದ್ದು, ನಿಂತದ್ದು, ಯಾವ ಸಂದರ್ಭದಲ್ಲಿ? ಯಾವ ಬಗೆಯಲ್ಲಿ? ಎಂಬುದನ್ನು ನಾವಿನ್ನೂ ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ ಷ. ಶೆಟ್ಟರ್.

There are no comments on this title.

to post a comment.

Click on an image to view it in the image viewer

Local cover image