Bharatiya tatvashastradalli kaalu mattu jollu ಭಾರತೀಯ ತತ್ವಶಾಸ್ತ್ರದಲ್ಲಿ ಕಾಳು ಮತ್ತು ಜೊಳ್ಳು
Material type:
- 9789387592933
- 181.403K DEVB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | 181.403K DEVB (Browse shelf(Opens below)) | Available | 073969 |
ಇಪತ್ತನೆಯ ಶತಮಾನದ ಭಾರತೀಯ ಚಿಂತಕರಲ್ಲಿ ಅಗ್ರಗಣ್ಯರಾದ ಶ್ರೀ ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರ ಕೃತಿಗಳು ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳೇ ಅಲ್ಲದೆ, ಜಪಾನ್, ಚೀನಿ ಹಾಗೂ ರಷಿಯನ್ ಭಾಷೆಗಳ ಪ್ರಕಟವಾಗಿವೆ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದ ಇವರು ಭಾರತೀಯ ತತ್ವಶಾಸ್ತ್ರ ಪರಂಪರೆಯಲ್ಲಿ ವಾಸ್ತವವೆಂದೇ ಭಾವಿಸಿದ್ದ ತತ್ವಗಳಿಂದ ಮಿಥ್ಯೆಯನ್ನು ಬೇರ್ಪಡಿಸುವ ಕೆಲಸವನ್ನು ಮಾಡಿದರು. ಪ್ರಾಚೀನ ಹಾಗೂ ಮಧ್ಯಕಾಲೀನ ತತ್ವಶಾಸ್ತ್ರಜ್ಞರ ಆಲೋಚನೆಗಳ ಬಗ್ಗೆ ವಿಮರ್ಶಾತ್ಮಕವಾದ ದೃಷ್ಟಿಕೋನವನ್ನು ಬೆಳೆಸುವುದು ಇಂದಿನ ಅಗತ್ಯ ಎಂದು ಭಾವಿಸಿದ್ದ ಚಟ್ಟೋಪಾಧ್ಯಾಯ ಅವರು ಜನವಿರೋಧಿಯಾದ ಪಾರಂಪರಿಕ ಮೌಲ್ಯಗಳ ರಕ್ಷಕರ ವಿಚಾರಗಳನ್ನು ಸೋದಾಹರಣವಾಗಿ ವಿರೋಧಿಸಿ ಇಲ್ಲವೇ ಅಲ್ಲಗಳೆದು ತಮ್ಮ ಜನಪರವಾದವನ್ನು ಮುನ್ನೆಲೆಗೆ ತರುತ್ತಾರೆ. ಭಾರತೀಯ ತತ್ವಜ್ಞಾನದಲ್ಲಿ ಹಲವಾರು ಪರಂಪರೆಗಳಿವೆ.
ಇವುಗಳಲ್ಲಿ ಅಮೂಲ್ಯವಾದವುಗಳನ್ನು ಹೆಕ್ಕಿ ತೆಗೆದುಕೊಳ್ಳುವುದು ಮುಖ್ಯವಾಗಿರುವಂತೆ ಅವುಗಳನ್ನು ಉಳಿಸಿ ಬೆಳೆಸುವುದು ಅಷ್ಟೇ ಮುಖ್ಯವಾದದ್ದು. ಏಕೆಂದರೆ ಗತಕಾಲದ ದಾರ್ಶನಿಕ ತತ್ವಗಳು, ಪಾರಂಪರಿಕ ಮೌಲ್ಯಗಳು ನಮ್ಮ ಭವಿಷ್ಯವನ್ನು ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡುವಂತಿರಬೇಕು. ಇಂತಹ ಜ್ಞಾನಪರಂಪರೆಯನ್ನು ನಮ್ಮ ಭಾರತೀಯ ತತ್ವಶಾಸ್ತ್ರದಲ್ಲಿ ಹುಡುಕಿತೆಗೆಯಬೇಕಾಗುತ್ತದೆ. ದೇವಿಪ್ರಸಾದ ಚಟ್ಟೋಪಾಧ್ಯಾಯ ಪ್ರಸ್ತುತ ಕೃತಿಯಲ್ಲಿ ಭಾರತೀಯ ತತ್ವಶಾಸ್ತ್ರದಲ್ಲಿ ಜೀವಂತವಾಗಿರುವ ಚಿಂತನೆಗಳು ಮತ್ತು ನಿರುಪಯುಕ್ತವಾಗಿರುವ ಚಿಂತನೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿದ್ದಾರೆ. ಇಂದಿನ ಸಂದರ್ಭಕ್ಕೆ ಈ ಕೃತಿ ಹೆಚ್ಚು ಪ್ರಸ್ತುತವಾಗಿದೆ. ಇಂತಹ ಕೃತಿಯನ್ನು ಕನ್ನಡದ ಪ್ರಸಿದ್ಧ ಚಿಂತಕರೂ, ಸಾಹಿತ್ಯ ವಿಮರ್ಶಕರೂ ಆದ ಡಾ. ಜಿ. ರಾಮಕೃಷ್ಣ ಅವರು ಇಂಗ್ಲಿಷ್‌ನಿಂದ ಅನುವಾದಿಸಿ ಪ್ರಕಟಣೆಗೆ ಸಿದ್ದ ಪಡಿಸಿ ಪ್ರಕಟಿಸಿದ್ದಾರೆ.
There are no comments on this title.