Local cover image
Local cover image
Amazon cover image
Image from Amazon.com
Image from Google Jackets

Fransnalli antaryuddha ಫ್ರಾನ್ಸ್ ನಲ್ಲಿ ಅಂತರ್ಯುದ್ಧ

By: Contributor(s): Material type: TextTextLanguage: Kannada Publication details: Bengaluru Navakarnataka Prakashana 2018Description: 108ISBN:
  • 9789386809360
Subject(s): DDC classification:
  • 944.04K MARF
Summary: ಕಾರ್ಲ್ ಮಾರ್ಕ್ಸ್ ‘ಫ್ರಾನ್ಸ್ ನಲ್ಲಿ ಅಂತರ್ಯುದ್ಧ’ ಕೃತಿಯು ಅನುವಾದಿತ ಕೃತಿಯಾಗಿದ್ದು, ವಿಶ್ವ ಕುಂದಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ವಿಷಯಾನುಕ್ರಮಣಿಕೆಯಲ್ಲಿ ಪೀಠಿಕೆ- ಫ್ರೆಡೆರಿಕ್ ಏಂಗೆಲ್ಸ್, ಅಂತರಾಷ್ಟ್ರೀಯ ಶ್ರಮಜೀವಿಗಳ ಸಂಘಟನೆಯ ಜನರಲ್ ಕೌನ್ಸಿಲ್ ನಲ್ಲಿ ಭಾಷಣ - ಕಾರ್ಲ್ ಮಾರ್ಕ್ಸ್, ಅದೇ ಸಂಘಟನೆಯಲ್ಲಿ ಎರಡನೆಯ ಭಾಷಣ..ಒಂದಾಗುವ ಹಂಬಲ:ಪ್ರಯತ್ನಗಳು, ಫ್ರಾನ್ಸ್ ನಲ್ಲಿ ಅಂತರ್ಯುದ್ಧ ಹೀಗಿವೆ.. ಪ್ಯಾರಿಸ್ಸಿನ ಕಾರ್ಮಿಕರು 1871ರ ಮಾರ್ಚ್ 18ರಂದು ತಮ್ಮ ನಗರವನ್ನು ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ, 10 ದಿನಗಳಲ್ಲಿ ಸ್ಥಾಪಿಸಿದ ಕಾರ್ಮಿಕರ ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. "ಪ್ಯಾರಿಸ್ ಕಮ್ಯೂನ್” ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಆದರೂ ಅದು ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್ ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು ಕೇವಲ 72 ದಿನಗಳ ಕಾಲ ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು. ಮಾಕ್ರ್ಸ್-ಏಂಗೆಲ್ಸ್ ಕಮ್ಯೂನಿನ ಹೋರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈದ್ಧಾಂತಿಕ ಬೆಂಬಲ ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ ಮುಂದಿನ ಕ್ರಾಂತಿಗಳಿಗೆ ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿದ ಕೃತಿ ಇದು. ಪ್ಯಾರಿಸ್ ಕಮ್ಯೂನನ್ನು ಸ್ಥಾಪಿಸಿದ ಪ್ಯಾರಿಸಿನ ಕಾರ್ಮಿಕರು “ಸ್ವರ್ಗಕ್ಕೆ ಲಗ್ಗೆ ಹಾಕಿದ್ದರು” ಎಂದು ಅವರ ಕೆಚ್ಚನ್ನು ಮಾಕ್ರ್ಸ್ ಮೆಚ್ಚಿಕೊಂಡಿದ್ದಾರೆ. ಈ ಕೃತಿಯ ಅಧ್ಯಯನ ಮಾಡಿದವರೆಲ್ಲರೂ, ಪ್ರಮುಖವಾಗಿ ಲೆನಿನ್ ಮತ್ತು ಮಾವೋ, ಪ್ಯಾರಿಸ್ ಕಮ್ಯೂನ್‍ನ ಎಲ್ಲಾ ಸಕಾರಾತ್ಮಕ ಹಾಗೂ ನಕಾರಾತ್ಮಕ ಪಾಠಗಳನ್ನು ಸಫಲ ಕ್ರಾಂತಿಗಳಲ್ಲಿ ತಮ್ಮ ದೇಶ-ಕಾಲಕ್ಕೆ ಅನುಸಾರವಾಗಿ ಅನ್ವಯಿಸಿದರು. ಜಗತ್ತಿನಾದ್ಯಂತ ಕಾರ್ಮಿಕರ ಪ್ರಭುತ್ವ ಮತ್ತು ಸಮತಾವಾದಿ ಸಮಾಜ ಕಟ್ಟುವ ಕನಸು ಹೊತ್ತ ಎಲ್ಲರಿಗೂ ಇಂದಿಗೂ ಇದೊಂದು ಸ್ಫೂರ್ತಿದಾಯಕ ಮತ್ತು ದಾರಿದೀಪವಾಗಬಲ್ಲ ಕೃತಿ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಕಾರ್ಲ್ ಮಾರ್ಕ್ಸ್ ‘ಫ್ರಾನ್ಸ್ ನಲ್ಲಿ ಅಂತರ್ಯುದ್ಧ’ ಕೃತಿಯು ಅನುವಾದಿತ ಕೃತಿಯಾಗಿದ್ದು, ವಿಶ್ವ ಕುಂದಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ವಿಷಯಾನುಕ್ರಮಣಿಕೆಯಲ್ಲಿ ಪೀಠಿಕೆ- ಫ್ರೆಡೆರಿಕ್ ಏಂಗೆಲ್ಸ್, ಅಂತರಾಷ್ಟ್ರೀಯ ಶ್ರಮಜೀವಿಗಳ ಸಂಘಟನೆಯ ಜನರಲ್ ಕೌನ್ಸಿಲ್ ನಲ್ಲಿ ಭಾಷಣ - ಕಾರ್ಲ್ ಮಾರ್ಕ್ಸ್, ಅದೇ ಸಂಘಟನೆಯಲ್ಲಿ ಎರಡನೆಯ ಭಾಷಣ..ಒಂದಾಗುವ ಹಂಬಲ:ಪ್ರಯತ್ನಗಳು, ಫ್ರಾನ್ಸ್ ನಲ್ಲಿ ಅಂತರ್ಯುದ್ಧ ಹೀಗಿವೆ.. ಪ್ಯಾರಿಸ್ಸಿನ ಕಾರ್ಮಿಕರು 1871ರ ಮಾರ್ಚ್ 18ರಂದು ತಮ್ಮ ನಗರವನ್ನು
ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ, 10 ದಿನಗಳಲ್ಲಿ ಸ್ಥಾಪಿಸಿದ ಕಾರ್ಮಿಕರ
ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. "ಪ್ಯಾರಿಸ್ ಕಮ್ಯೂನ್”
ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಆದರೂ ಅದು
ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್
ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು ಕೇವಲ 72 ದಿನಗಳ ಕಾಲ
ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು
ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ
ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು. ಮಾಕ್ರ್ಸ್-ಏಂಗೆಲ್ಸ್
ಕಮ್ಯೂನಿನ ಹೋರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈದ್ಧಾಂತಿಕ ಬೆಂಬಲ
ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ ಮುಂದಿನ ಕ್ರಾಂತಿಗಳಿಗೆ
ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿದ ಕೃತಿ ಇದು.

ಪ್ಯಾರಿಸ್ ಕಮ್ಯೂನನ್ನು ಸ್ಥಾಪಿಸಿದ ಪ್ಯಾರಿಸಿನ ಕಾರ್ಮಿಕರು “ಸ್ವರ್ಗಕ್ಕೆ ಲಗ್ಗೆ
ಹಾಕಿದ್ದರು” ಎಂದು ಅವರ ಕೆಚ್ಚನ್ನು ಮಾಕ್ರ್ಸ್ ಮೆಚ್ಚಿಕೊಂಡಿದ್ದಾರೆ. ಈ ಕೃತಿಯ
ಅಧ್ಯಯನ ಮಾಡಿದವರೆಲ್ಲರೂ, ಪ್ರಮುಖವಾಗಿ ಲೆನಿನ್ ಮತ್ತು ಮಾವೋ, ಪ್ಯಾರಿಸ್
ಕಮ್ಯೂನ್‍ನ ಎಲ್ಲಾ ಸಕಾರಾತ್ಮಕ ಹಾಗೂ ನಕಾರಾತ್ಮಕ ಪಾಠಗಳನ್ನು ಸಫಲ
ಕ್ರಾಂತಿಗಳಲ್ಲಿ ತಮ್ಮ ದೇಶ-ಕಾಲಕ್ಕೆ ಅನುಸಾರವಾಗಿ ಅನ್ವಯಿಸಿದರು. ಜಗತ್ತಿನಾದ್ಯಂತ
ಕಾರ್ಮಿಕರ ಪ್ರಭುತ್ವ ಮತ್ತು ಸಮತಾವಾದಿ ಸಮಾಜ ಕಟ್ಟುವ ಕನಸು ಹೊತ್ತ ಎಲ್ಲರಿಗೂ
ಇಂದಿಗೂ ಇದೊಂದು ಸ್ಫೂರ್ತಿದಾಯಕ ಮತ್ತು ದಾರಿದೀಪವಾಗಬಲ್ಲ ಕೃತಿ.

There are no comments on this title.

to post a comment.

Click on an image to view it in the image viewer

Local cover image