Gandhi mahatmaradudu: Dakshina Africa dinagalu ಗಾಂಧಿ ಮಹಾತ್ಮರಾದುದು: ದಕ್ಷಿಣ ಆಫ್ರಿಕಾ ದಿನಗಳು
Material type:
- 9789384486570
- 923.2K RAMG
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | General | 923.2K RAMG (Browse shelf(Opens below)) | Available | 070291 |
Browsing St Aloysius Library shelves, Collection: General Close shelf browser (Hides shelf browser)
ಗಾಂಧಿ ಎಂದರೆ ರಾಷ್ರಪಿತ, ಬಾಪೂಜಿ ಮತ್ತು ಅವರು ಅಹಿಂಸೆಯ ಮಾರ್ಗದಲ್ಲಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿದ ಮಹಾತ್ಮ ಎಂಬ ಶೈಕ್ಷಣಿಕ ಪಠ್ಯ ಕ್ರಮದ ಮಾಹಿತಿ ಅಷ್ಟೇ ನಾವು ಇಲ್ಲಿವರೆಗೆ ಬಲ್ಲ ಗಾಂಧಿಜಿ.ಇದಕ್ಕೂ ಹೆಚ್ಚಾಗಿ ಅವರನ್ನು ದಕ್ಷಿಣ ಆಫ್ರಿಕಾ ರೈಲಿನಿಂದ ವರ್ಣಬೇಧದಿಂದ ಕೆಳಗಿಸಿದ ಮತ್ತು ಕೊನೆಗೆ ಘೋಡಸೆಯಿಂದ ಹತ್ಯೆಗಿಡಾದ ಇತರ ಕೆಲವೇ ಘಟನೆಗಳು ಮಾತ್ರ ನಮಗೆ ತಿಳಿದಿರುವ ಸಂಗತಿಗಳು.
ಆದರೆ ಪ್ರಸ್ತುತ ಪುಸ್ತಕದಲ್ಲಿ ಅವರ ವಕೀಲಿ ವೃತ್ತಿ ಜೀವನ ಮತ್ತು ದೇಶ-ಖಂಡಗಳೆನ್ನದೇ ಸಮಸ್ತ ಮಾನವ ಕೋಟಿಯ ಪರವಾಗಿ ನಡೆಸಿದ ನ್ಯಾಯಯುತ ಹೋರಾಟದ ಪರಿಚಯವಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತಿತರ ದೇಶಗಳಲ್ಲಿ ಅವರು ಒಂದು ಮಾನವ ಜನಾಂಗ ಇನ್ನೊಂದು ಜನಾಂಗದ ಮೇಲೆ ವರ್ಣ, ಧರ್ಮ, ಭಾಷೆಯ ವಿಭಿನ್ನತೆಯಿಂದ ನಡೆಸಿದ ದೌರ್ಜನ್ಯ, ದಬ್ಬಾಳಿಕೆ ವ ಅನ್ಯಾಯದ ವಿರುದ್ಧ ಹೋರಾಟ ನಡೆಸಿದರು.
ಲೀಯೋ ಟಾಲ್ ಸ್ಟಾಯ್ ಅವರು ಅದಾವ ಮಾನವಿಯ ಮೌಲ್ಯಗಳನ್ನು ತಮ್ಮ ಕೃತಿಗಳ ಮೂಲಕ ಪ್ರತಿಪಾದಿಸಿದರೋ , ಅವನ್ನೆಲ್ಲಾ ಗಾಂಧಿಯವರು ತಮ್ಮ ಅವೀರತ ಹೋರಾಟದ ಮೂಲಕ ಕಾರ್ಯಗತಗೊಳಿಸಿದರು.ನ್ಯಾಯಕ್ಕಾಗಿ ಹೋರಾಡುವ ದಾರಿಯಲ್ಲಿ ಸ್ವತಃ ನ್ಯಾಯವಾದಿಯೇ ಪೆಟ್ಟು ಬಿದ್ದು ಜೈಲು ಪಾಲಾದ ವಿರಳಗಾತೆ ಗಾಂಧಿಯವರದು.
ದಕ್ಷಿಣ ಆಫ್ರಿಕಾದಲ್ಲಿ ಅವರು ತಮ್ಮ ಸ್ವಂತ ಪರಿಶ್ರಮದಿಂದ “ದಿ ಇಂಡಿಯನ್ ಓಪಿನಿಯನ್” ಎಂಬ ಪತ್ರಿಕೆ ಪ್ರಕಟಿಸುತ್ತ ದಬ್ಬಾಳಿಕೆ ದೌರ್ಜನ್ಯಗಳ ವಿರುದ್ಧ ಸಮಗ್ರ ಸಮರ ಸಾರಿದ್ದರು. ತಮ್ಮ ವಕೀಲಿ ವೃತ್ತಿ ಜೀವನದ ಉಚ್ಛ್ರಾಯ ಸ್ಥಿತಿಯಲ್ಲಿದ್ದೂ ಯಾವ ಆಸ್ತಿ ಪಾಸ್ತಿ ಸಂಗ್ರಹಿಸದೆ , ಕೇವಲ ಅನ್ಯಾಯದ ವಿರುದ್ಧ ತಮ್ಮ ಜೀವನವನ್ನು ಪಣಕ್ಕಿಟ್ಟು ಬದುಕಿದ್ದರು ಗಾಂಧಿ.
ಇದುವರೆಗೂ ಗಾಂಧಿಯವರ ಬಗ್ಗೆ ಅದೆಷ್ಟೋ ಪುಸ್ತಕ ವ ಪ್ರಕಟನೆಗಳು ಹೊರಬಂದಿವೆ. ಗಾಂಧಿಯವರ ಜೀವನಾಧಾರಿತ, ಡೆವಿಡ್ ಅಟೆನಬೊರೊ ನಿರ್ದೇಶಿಸಿದ ಚಿತ್ರ “ದಿ ಮೇಕಿಂಗ್ ಆಫ್ ಮಹಾತ್ಮ” ಒಳಗೊಂಡಂತೆ ಹಲವಾರು ಚಿತ್ರಗಳು ಬಿಡುಗಡೆಯಾದವು. ಆದರೆ ಅವರು ಹೊರದೇಶಗಳಲ್ಲಿ ನಡೆಸಿದ ಹೋರಾಟದ ಬಗ್ಗೆ ಹೆಚ್ಚಾಗಿ ಪ್ರಸ್ತಾಪಿಸಿಲ್ಲ. ಆ ಕೊರತೆಯನ್ನು ರಾಮಚಂದ್ರ ಗುಹಾ ಅವರು ತಮ್ಮ ಈ ಪರಿಶ್ರಮದ ಫಲವಾದ ಪುಸ್ತಕದಿಂದ ನೀಗಿಸಿದ್ದಾರೆ.
There are no comments on this title.