Local cover image
Local cover image
Image from Google Jackets

Samagra sahitya. Samputa 4-sahitya samikshe ಸಮಗ್ರ ಸಾಹಿತ್ಯ ಸಂಪುಟ-೪ ಸಾಹಿತ್ಯ ಸಮೀಕ್ಷೆ

By: Material type: TextTextLanguage: Kannada Publication details: Ankola Shri Raghavendra Prakashana 1995Description: 406Subject(s): DDC classification:
  • K894.8 GAUS
Summary: ‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 4’ ಸಾಹಿತ್ಯ ಸಮೀಕ್ಷೆ. ಈ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಲೇಖಕ ಗೌರೀಶ ಕಾಯ್ಕಿಣಿ ಅವರ ಅರಿಕೆಯಿದೆ. ಕೃತಿಯ ಕುರಿತು ಬರೆಯುತ್ತಾ ನನ್ನ ಬರಹಗಳನ್ನೆಲ್ಲ ಹತ್ತು ಸಂಪುಟಗಳಲ್ಲಿ ಪ್ರಕಟಿಸುವುದಾಗಿ ನನ್ನ ಆತ್ಮೀಯ ಕವಿಮಿತ್ರ ವಿಷ್ಣು ನಾಯ್ಕರು ಮುಂದಾದ ಹೊಸತರಲ್ಲಿ ಅಂಥ ಭಾರದ ಒನಕೆಯನ್ನು ನಿಮ್ಮ ತಲೆಗೆ ಕಟ್ಟಿಕೊಳ್ಳಬೇಡಿ ಎಂದು ನಾನವರಿಗೆ ತಿಳಿಸಿದ್ದೆ. ನನ್ನಿಂದಾಗಿ ಬೆಳೆಯುತ್ತಿರುವ ಬೆಳಯಲೇಬೇಕಾಗಿರುವ ಈ ಉತ್ಸಾಹಿ ತರುಣ ಆರ್ಥಿಕ ನಷ್ಟಕ್ಕೆ ಒಳಗಾಗಿ-ಕೊನೆಗಾಲದಲ್ಲಿ ಅದೊಂದು ಚಿಂತೆಯೊಂದಿಗೆ ನಾನು ಈ ಪ್ರಪಂಚಕ್ಕೆ ವಿದಾಯಹೇಳುವಂತಾಗಬಾರದೆಂಬುದೇ ನನ್ನ ಕಳಕಳಿಯ ಕಾಳಜಿಯಾಗಿತ್ತು. ಆದರೆ ಈ ದಿಟ್ಟ-ಧೀರ ಸಾಹಸಿ ಹಾಗೆಲ್ಲಾ ಬಡಪಟ್ಟಿಗೆ ಹೇಳಿದ ಮಾತನ್ನು ಕೇಳುವವರಲ್ಲ. ಅತುಲ ಆತ್ಮಬಲ ಅವರಿಗೆ. ಮಾಡಿಯೇ ತೀರುತ್ತೇನೆ ಎಂದು ಮುನ್ನಡೆದರು. ಮೂರು ಸಂಪುಟಗಳನ್ನು ಒಂದರ ಬೆನ್ನಿಗೆ ಒಂದರಂತೆ ತಂದೇ ಬಿಟ್ಟರು. ಅವರ ವೈರಿಗಳೂ(ಒಳಗೊಳಗೆ) ಮೆಚ್ಚಿ ಕೊಳ್ಳುವಹಾಗೇ. ಆದರೆ ಇದರಿಂದ ವಿಷ್ಣು ನಾಯ್ಕರು ಬಹಳಷ್ಟು ಸಾಲವನ್ನು ಹೊತ್ತುಕೊಂಡಿರುವುದೂ ನನಗೆ ಗೊತ್ತಿದೆ. ಈ ನಾಲ್ಕನೆಯ ಸಂಪುಟವೂ ಸೇರಿದಂತೆ ಇದುವರೆಗಿನ ಈ ಕೆಲಸಕ್ಕೆ ಅವರು ಸುಮಾರು ಎರಡು ಲಕ್ಷ ರೂಪಾಯಿಗಳನ್ನು ತೊಡಗಿಸಿದ್ದಾರೆಂದೂ, ಮರಳಿ ಬಂದದ್ದು ಅತ್ಯಲ್ಪವೆಂದೂ ಕೇಳಿಬಲ್ಲವನಾಗಿದ್ದೇನೆ. ಇದು ನನ್ನನ್ನು ಅತೀವ ಕಳವಳಕ್ಕೆ ಒಳಪಡಿಸಿದೆ. ಕನ್ನಡದ ನವ್ಯ ಸಹೃದಯ ರಸಿಕ ಮಿತ್ರರು ಈ ಸಂದರ್ಭದಲ್ಲಿ ಪ್ರಕಾಶಕ ವಿಷ್ಣುನಾಯ್ಕರ ಬೆಂಬಲಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಬಗ್ಗೆ ಇದುವರೆಗೆ ನಮ್ಮ ಘನ ಸರಕಾರವಾಗಲಿ ತುಂಬ ಉದಾರವಾಗಿ ನಡೆದುಕೊಂಡು ಬಂದಿವೆ. ಈ ಸಮಗ್ರ ಸಂಪುಟಗಳ ಬಗ್ಗೆಯೂ ಅವರ ಹೃದಯವಂತಿಕೆ ಅದೇ ತೆರನಾಗಿರುವಂತೆ ಕೋರುವುದಕ್ಕಾಗಿಯೇ ಈ ಪುಟವನ್ನು ಬಳಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಮೊದಲ ಮಾತು, ಅರಿಕೆಯ ಜೊತೆಗೆ ಕಂಪಿನ ಕರೆ, ದಿನಕರ ದೇಸಾಯರ ಕಾವ್ಯ, ವಿ.ಜಿ. ಭಟ್ಟರ ಕಾವ್ಯ, ಚೆನ್ನವೀರ ಕಣವಿ ಕಾವ್ಯದೃಷ್ಟಿ, ಹಾಗೂ ಸ್ವಚ್ಛಂದದಿಂದ ನವ್ಯದತ್ತ ಲೇಖನಗಳು ಸಂಕಲನಗೊಂಡಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Special Grants Special Grants St Aloysius Library Kannada K894.8 GAUS (Browse shelf(Opens below)) Available SG03454
Total holds: 0

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 4’ ಸಾಹಿತ್ಯ ಸಮೀಕ್ಷೆ. ಈ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಲೇಖಕ ಗೌರೀಶ ಕಾಯ್ಕಿಣಿ ಅವರ ಅರಿಕೆಯಿದೆ. ಕೃತಿಯ ಕುರಿತು ಬರೆಯುತ್ತಾ ನನ್ನ ಬರಹಗಳನ್ನೆಲ್ಲ ಹತ್ತು ಸಂಪುಟಗಳಲ್ಲಿ ಪ್ರಕಟಿಸುವುದಾಗಿ ನನ್ನ ಆತ್ಮೀಯ ಕವಿಮಿತ್ರ ವಿಷ್ಣು ನಾಯ್ಕರು ಮುಂದಾದ ಹೊಸತರಲ್ಲಿ ಅಂಥ ಭಾರದ ಒನಕೆಯನ್ನು ನಿಮ್ಮ ತಲೆಗೆ ಕಟ್ಟಿಕೊಳ್ಳಬೇಡಿ ಎಂದು ನಾನವರಿಗೆ ತಿಳಿಸಿದ್ದೆ. ನನ್ನಿಂದಾಗಿ ಬೆಳೆಯುತ್ತಿರುವ ಬೆಳಯಲೇಬೇಕಾಗಿರುವ ಈ ಉತ್ಸಾಹಿ ತರುಣ ಆರ್ಥಿಕ ನಷ್ಟಕ್ಕೆ ಒಳಗಾಗಿ-ಕೊನೆಗಾಲದಲ್ಲಿ ಅದೊಂದು ಚಿಂತೆಯೊಂದಿಗೆ ನಾನು ಈ ಪ್ರಪಂಚಕ್ಕೆ ವಿದಾಯಹೇಳುವಂತಾಗಬಾರದೆಂಬುದೇ ನನ್ನ ಕಳಕಳಿಯ ಕಾಳಜಿಯಾಗಿತ್ತು. ಆದರೆ ಈ ದಿಟ್ಟ-ಧೀರ ಸಾಹಸಿ ಹಾಗೆಲ್ಲಾ ಬಡಪಟ್ಟಿಗೆ ಹೇಳಿದ ಮಾತನ್ನು ಕೇಳುವವರಲ್ಲ. ಅತುಲ ಆತ್ಮಬಲ ಅವರಿಗೆ. ಮಾಡಿಯೇ ತೀರುತ್ತೇನೆ ಎಂದು ಮುನ್ನಡೆದರು. ಮೂರು ಸಂಪುಟಗಳನ್ನು ಒಂದರ ಬೆನ್ನಿಗೆ ಒಂದರಂತೆ ತಂದೇ ಬಿಟ್ಟರು. ಅವರ ವೈರಿಗಳೂ(ಒಳಗೊಳಗೆ) ಮೆಚ್ಚಿ ಕೊಳ್ಳುವಹಾಗೇ. ಆದರೆ ಇದರಿಂದ ವಿಷ್ಣು ನಾಯ್ಕರು ಬಹಳಷ್ಟು ಸಾಲವನ್ನು ಹೊತ್ತುಕೊಂಡಿರುವುದೂ ನನಗೆ ಗೊತ್ತಿದೆ. ಈ ನಾಲ್ಕನೆಯ ಸಂಪುಟವೂ ಸೇರಿದಂತೆ ಇದುವರೆಗಿನ ಈ ಕೆಲಸಕ್ಕೆ ಅವರು ಸುಮಾರು ಎರಡು ಲಕ್ಷ ರೂಪಾಯಿಗಳನ್ನು ತೊಡಗಿಸಿದ್ದಾರೆಂದೂ, ಮರಳಿ ಬಂದದ್ದು ಅತ್ಯಲ್ಪವೆಂದೂ ಕೇಳಿಬಲ್ಲವನಾಗಿದ್ದೇನೆ. ಇದು ನನ್ನನ್ನು ಅತೀವ ಕಳವಳಕ್ಕೆ ಒಳಪಡಿಸಿದೆ. ಕನ್ನಡದ ನವ್ಯ ಸಹೃದಯ ರಸಿಕ ಮಿತ್ರರು ಈ ಸಂದರ್ಭದಲ್ಲಿ ಪ್ರಕಾಶಕ ವಿಷ್ಣುನಾಯ್ಕರ ಬೆಂಬಲಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಬಗ್ಗೆ ಇದುವರೆಗೆ ನಮ್ಮ ಘನ ಸರಕಾರವಾಗಲಿ ತುಂಬ ಉದಾರವಾಗಿ ನಡೆದುಕೊಂಡು ಬಂದಿವೆ. ಈ ಸಮಗ್ರ ಸಂಪುಟಗಳ ಬಗ್ಗೆಯೂ ಅವರ ಹೃದಯವಂತಿಕೆ ಅದೇ ತೆರನಾಗಿರುವಂತೆ ಕೋರುವುದಕ್ಕಾಗಿಯೇ ಈ ಪುಟವನ್ನು ಬಳಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಮೊದಲ ಮಾತು, ಅರಿಕೆಯ ಜೊತೆಗೆ ಕಂಪಿನ ಕರೆ, ದಿನಕರ ದೇಸಾಯರ ಕಾವ್ಯ, ವಿ.ಜಿ. ಭಟ್ಟರ ಕಾವ್ಯ, ಚೆನ್ನವೀರ ಕಣವಿ ಕಾವ್ಯದೃಷ್ಟಿ, ಹಾಗೂ ಸ್ವಚ್ಛಂದದಿಂದ ನವ್ಯದತ್ತ ಲೇಖನಗಳು ಸಂಕಲನಗೊಂಡಿವೆ.

There are no comments on this title.

to post a comment.

Click on an image to view it in the image viewer

Local cover image