Mahamayi. ಮಹಾಮಾಯಿ
Material type:
- K894.2 CHAM
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.2 CHAM (Browse shelf(Opens below)) | Available | SG03507 |
ಕಂಬಾರರ 'ಮಹಾಮಾಯಿ' ಸಾವಿನ ದೇವತೆಯಾದ ಶಟವಿತಾಯಿ ಅಥವಾ ಮೃತ್ಯುದೇವತೆಯನ್ನು ಕುರಿತದ್ದು. ಶೆಟವಿಗೆ ಸಂಜೀವ ಶಿವನೆಂಬ ಸಾಕುಮಗ. ಅವನು ತಾಯಿಯ ಆಶೀರ್ವಾದದಿಂದಲೇ ಪ್ರಸಿದ್ದ ವೈದ್ಯ. ಆದರೆ ತಾಯಿಯ ಆಜ್ಞೆ ಮೀರಿ ಬದುಕುವುದು ಅವನ ಬಯಕೆ. ವಿಧಿಯ ಆಣತಿಯಂತೆ ನಡೆಯುವ ಬಂಡಾಯವು ನಾಟಕದಲ್ಲಿ ಕ್ರಿಯಾಶೀಲತೆಗೆ ಕಾರಣವಾಗುತ್ತದೆ. ಸಾವಿನ ದೇವತೆ ಶಟವಿತಾಯಿಯ ಸಾಕುಮಗ ಸಂಜೀವಶಿವಗೆ ಅವಳ ಆಶೀರ್ವಾದದಿಂದಲೇ ವೈದ್ಯ ವೃತ್ತಿ ಕೈಗೊಂಡಿರುತ್ತಾನೆ. ಅರಮನೆಯ ರಾಜಕುಮಾರಿ ಇರುವಂತಿಗೆ ಜ್ವರದ ಬಾಧೆ. ಅವಳ ಆಯುಷ್ಯ ತೀರಿದ್ದರಿಂದ ತಾಯಿ ಮಗನನ್ನು ಅತ್ತ ಹೋಗದಂತೆ ತಡೆಯುತ್ತಾಳೆ. ರೋಗದ ಬಾಧೆ ತಾಳದ ರಾಜಕುಮಾರಿ ಸಾಯಲು ಮಾಯಿಬೆಟ್ಟಕ್ಕೆ ಹೋಗಿ ಸಂಜೀವಶಿವನ ಕಣ್ಣಿಗೆ ಬೀಳುತ್ತಾಳೆ. ಅವನು ಅವಳ ಸಾವಿನ ಗುಹೆಯೊಳಗೆ ಹೋಗದಂತೆ ತಡೆಯುತ್ತ ಅವಳ ಕೈ ಹಿಡಿಯುತ್ತಾನೆ. ಹಾಗೆಯೇ ಅವಳ ರೋಗ ಪತ್ತೆಮಾಡಿ ಚಿಕಿತ್ಸೆ ನೀಡುತ್ತಾನೆ. ರಾಜಕುಮಾರಿ ಚೇತರಿಸಿ ಅವನನ್ನು ಮೆಚ್ಚುತ್ತಾಳೆ. ತನ್ನ ಸೂಚನೆ ಮೀರಿ ರಾಜಕುಮಾರಿಗೆ ಚಿಕಿತ್ಸೆ ಮಾಡಿದ್ದಕ್ಕಾಗಿ ತಾಯಿಗೆ ಸಿಟ್ಟು ಬರುತ್ತದೆ. ರಾಜಕುಮಾರಿಯ ಕೊರಳಲ್ಲಿ ಇರುವ ಮದ್ದಿನ ಬಳ್ಳಿಯನ್ನು ಕಿತ್ತು ತರಲು ಮಗನಿಗೆ ಶೆಟವಿ ಸೂಚಿಸುತ್ತಾಳೆ. ರಾಜಕುಮಾರಿಯ ಕೊರಳಲ್ಲಿ ದಾರ ಕಟ್ಟಿದವರೇ ಅವಳನ್ನು ಮದುವೆ ಆಗಬೇಕು ಎಂಬ ದೈವದ ಅಪ್ಪಣೆ ಇರುತ್ತದೆ. ಅದರಂತೆ ಅವಳು ರೋಗದಿಂದ ಚೇತರಿಸಿಕೊಂಡು ಸಂಜೀವಶಿವ ಧ್ಯಾನದಲ್ಲಿಯೇ ಕಳೆಯುತ್ತಿದ್ದಾಳೆ. ರಾಜಕುಮಾರಿ -ಸಂಜೀವಶಿವರಲ್ಲಿ ಪ್ರೇಮ ಅಂಕುರಿಸಿ ಮದುವೆಯಾಗಲು ನಿರ್ಧರಿಸುತ್ತಾರೆ. ತಾಯಿಯ ಕಣ್ಣಿಗೆ ಬೀಳದಂತೆ ದೂರ ಹೋಗಲು ಪ್ರಯತ್ನಿಸಿ ಮಾಯಿಬೆಟ್ಟಕ್ಕೆ ಇಬ್ಬರು ಬರುತ್ತಾರೆ. ತಾಯಿ-ಮಗನ ನಡುವೆ ವಾಗ್ವಾದ ನಡೆಯುತ್ತದೆ. ಮಗನ ಮಾತುಗಳಿಗೆ ಮೆಚ್ಚಿಕೆಯಾಗಿ ತಾಯಿ ಇಮ್ಮಡಿ ಆಯುಷ್ಯ ದಯಪಾಲಿಸುತ್ತಾಳೆ. ತಾಯಿಯ ಮೆಚ್ಚಿಗೆಯಾಗಿ ಸಿಕ್ಕ ಆಯುಷ್ಯವನ್ನು ಉಪಯೋಗಿಸಿ ಸಂಜೀವಶಿವ ರಾಜಕುಮಾರಿಯನ್ನು ಬದುಕಿಸಿಕೊಳ್ಳುತ್ತಾನೆ.
There are no comments on this title.